ಕುಕ್ಕಳ: ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಹಯೋಗದೊಂದಿಗೆ ಬೆಳ್ತಂಗಡಿ ತಾಲೂಕಿನ ಕುಕ್ಕಳ ಗ್ರಾಮದಲ್ಲಿ ಪೆಟ್ರೋನೆಟ್ MHB ಲಿಮಿಟೆಡ್ ಮತ್ತು HPCL LPG ಪೈಪ್ ಲೈನ್ ಮೂಲಕ ಜಂಟಿ ಆಫ್ ಸೈಟ್ ಮಾಕ್ ಡ್ರಿಲ್ ಅನ್ನು ನಡೆಸಲಾಯಿತು.

ಪೈಪ್ ಲೈನ್ ನಲ್ಲಿ ತುರ್ತು ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಪ್ರಾತ್ಯಕ್ಷಿಕೆ ನೀಡಿ ಸಾರ್ವಜನಿಕರಿಗೆ ಮಾಹಿತಿ ನೀಡಿ ಜಾಗೃತಿ ಮೂಡಿಸಲಾಯಿತು.
ಪೆಟ್ರೋನೆಟ್ ಮತ್ತು HPCL ಪೈಪ್ ಲೈನ್ ನ ಅಧಿಕಾರಿಗಳು ಮತ್ತು ಸಿಬ್ಬಂದಿ, MRPL, HPCL, IOCL ಮತ್ತು BPCL ನ ಮ್ಯೂಚುವಲ್ ಏಡ್ ಇಂಡಸ್ಟ್ರೀಸ್ ಅಧಿಕಾರಿಗಳು ಅಣಕು ಡ್ರಿಲ್ ನಲ್ಲಿ ಭಾಗವಹಿಸಿದರು.
ಕಾರ್ಖಾನೆಗಳ ಉಪನಿರ್ದೇಶಕರು ಎಂ.ಎಸ್. ಮಹದೇವ್, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿ ವಿಜಯಕುಮಾರ್, ಜಿಲ್ಲಾ ಅಗ್ನಿಶಾಮಕ ಅಧಿಕಾರಿ, ಭರತ್ ಕುಮಾರ್, ನಾರಾಯಣ, ಎಎಸ್ ಐ ಪೊಲೀಸ್ ಠಾಣೆ ಪುಂಜಾಲಕಟ್ಟೆ, ತಾಲೂಕು ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ, ಬೆಳ್ತಂಗಡಿ ಮಡಂತ್ಯಾರು ಗ್ರಾಮ ಪಂಚಾಯತ್ ಸದಸ್ಯರು, ಗ್ರಾಮಸ್ಥರು ಅಣಕು ಡ್ರಿಲ್ ನಲ್ಲಿ ಉಪಸ್ಥಿತರಿದ್ದರು.