ವಿಟ್ಲ: ವಿಟ್ಲ ಮೇಗಿನಪೇಟೆ ಶ್ರೀ ಮಹಮ್ಮಾಯಿ ಮಂದಿರದ ಜೀರ್ಣೊದ್ಧಾರ ಕಾರ್‍ಯವು ನಡೆಯುತ್ತಿದ್ದು ಇದರ ಪ್ರಯುಕ್ತ ಸನ್ನಿಧಿಯಲ್ಲಿ ಪ್ರತಿ ಶನಿವಾರ ನಡೆಯಲಿರುವ ಭಜನಾ ಕಾರ್‍ಯಕ್ರಮವನ್ನು ಕಣಿಯೂರು ಶ್ರೀ ಚಾಮುಂಡೇಶ್ವರೀ ಕ್ಷೇತ್ರದ ಶ್ರೀ ಮಹಾಬಲ ಸ್ವಾಮೀಜಿಯವರು ದೀಪ ಬೆಳಗಿಸಿ ಉದ್ಘಾಟಿಸಿದರು.
ಈ ಕಾರ್‍ಯಕ್ರಮದಲ್ಲಿ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಕೃಷ್ಣಯ್ಯ ಕೆ. ವಿಟ್ಲ ಅರಮನೆ, ಕಾರ್‍ಯಾಧ್ಯಕ್ಷ ಪದ್ಮನಾಭ ಗೌಡ, ಉಪಾಧ್ಯಕ್ಷ ಕೇಶವ ವಿಟ್ಲ, ಆರ್.ಕೆ ಆರ್ಟ್ಸ್ ಚಿನ್ನರ ಮನೆ ಇದರ ನಿರ್ದೇಶಕ ರಾಜೇಶ್ ವಿಟ್ಲ, ಶೀನ ವಿಟ್ಲ, ಹರೀಶ್ ಮೇಗಿನಪೇಟೆ ಮುಂತಾದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಆರ್.ಕೆ ಆರ್ಟ್ಸ್ ಚಿನ್ನರ ಮನೆಯವರಿಂದ ಕುಣಿತ ಭಜನೆ ನಡೆಯಿತು.
