Wednesday, January 28, 2026

ಕೊರೊನಾ ನಿಯಂತ್ರಣ ಸಾಧಿಸುವಲ್ಲಿ ಪಿ.ಡಿ.ಒ.ಗಳ ಕಾರ್ಯ ತೃಪ್ತಿ ತಂದಿದೆ: ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ತಾಲೂಕಿನಲ್ಲಿ ಎಲ್ಲಾ ಇಲಾಖೆಯ ಅಧಿಕಾರಿಗಳ ಸಂಘಟಿತ ಹೋರಾಟ ಕೋವಿಡ್ ನಿಯಂತ್ರಣ ಸಾಧಿಸಲು ಸಾಧ್ಯವಾಯಿತು

ಬಂಟ್ವಾಳ: ತಾಲೂಕಿನ ಪ್ರತಿಯೊಬ್ಬ ಅಧಿಕಾರಿಗಳು ಕೊರೊನಾ ಸೊಂಕಿನ ಕೊಂಡಿ ತುಂಡು ಮಾಡಲು ಸರಕಾರದ ನಿಯಮಾನುಸಾರ ಪ್ರಯತ್ನ ಮಾಡಬೇಕು ಎಂದು ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಹೇಳಿದರು.

ಅವರು ತಾಲೂಕಿನಲ್ಲಿ ಕೋವಿಡ್ ನಿಯಂತ್ರಣ ಸಾಧಿಸಲು ಗ್ರಾ.ಪಂ.ಗಳು ಯಾವ ಕ್ರಮ ಗಳನ್ನು ಕೈಗೊಂಡಿದೆ ಎಂಬ ವಿಚಾರ ಕುರಿತಾಗಿ ಪಿ.ಡಿ.ಒ.ಗಳಿಂದ ಮಾಹಿತಿ ಪಡೆಯುವ ಸಲುವಾಗಿ ತಾ.ಪಂ.ಇ.ಒ.ರಾಜಣ್ಣ ಕರೆದ ಸಭೆಯಲ್ಲಿ ಮಾತನಾಡಿದರು.

ಬಂಟ್ವಾಳ ತಾಲ್ಲೂಕಿನಲ್ಲಿ ನಿನ್ನೆವರೆಗೆ 963 ಕೊರೊನಾ ಸೊಂಕಿತ ಪ್ರಕರಣಗಳು ಇದ್ದು ಅದರಲ್ಲಿ 877 ಮಂದಿ ಹೋಮ್ ಐಸೋಲೇಶನ್, 85 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಈವರಗೆ ತಾಲೂಕಿನಲ್ಲಿ ಕೊರೊನಾ ಸೊಂಕಿನಿಂದ

53 ಮಂದಿ ಸಾವನ್ನಪ್ಪಿದ ಬಗ್ಗೆ ಆರೋಗ್ಯ ಇಲಾಖಾ ಮಾಹಿತಿ ನೀಡಿದೆ ಎಂದು ಶಾಸಕರು ತಿಳಿಸಿದರು.

ಪ್ರಸ್ತುತ ಸಕ್ರೀಯವಾಗಿರುವ ಕೊರೊನಾ ಸೊಂಕಿತ ಪ್ರಕರಣಗಳ ಸಂಖ್ಯೆಯಲ್ಲಿ ಜಾಸ್ತಿಯಗಾದಂತೆ ಟಾಸ್ಕ್ ಫೋರ್ಸ್ ಸಮಿತಿ ಹಾಗೂ ಅಧಿಕಾರಿಗಳು ಜತೆಯಾಗಿ ಕೆಲಸ ಮಾಡಿ ಕೊರೊನಾ ಮುಕ್ತ ತಾಲೂಕು ಮಾಡಲು ಶ್ರಮ ಪಡಿ ಎಂದರು.

ಬಂಟ್ವಾಳ ತಾಲೂಕಿನ ಪಿ.ಡಿ.ಒ.ಗಳ ಹಾಗೂ ಎಲ್ಲಾ ಅಧಿಕಾರಿಗಳ ಸಂಘಟಿತವಾದ

ಉತ್ತಮ ರೀತಿಯ ಕಾರ್ಯವೈಖರಿಯ ಹಿನ್ನೆಲೆಯಲ್ಲಿ ಕೊರೊನಾ ನಿಯಂತ್ರಣಕ್ಕೆ ಬಂದಿದೆ ಎಂಬುದು ಸಂತೋಷ ಇದೆ.

ಪ್ರತಿಯೊಬ್ಬರೂ ಕೊರೊನಾ ವಿರುದ್ಧದ ಹೋರಾಟದಲ್ಲಿ ಭಾಗಿಯಾಗಿದ್ದೀರಿ , ಮುಂದಿನ ದಿನಗಳಲ್ಲಿಯೂ ಇದೇ ರೀತಿಯಲ್ಲಿ ಕೆಲಸ ನಿರ್ವಹಿಸಿ ಎಂದು ಅವರು ಹೇಳಿದರು.

ವ್ಯಾಕ್ಸಿನೇಷನ್‌ ಬಂದ ಕೂಡಲೇ ಗ್ರಾಮದ ಪ್ರತಿಯೊಬ್ಬರೂ ಲಸಿಕೆ ಪಡೆಯುವಂತೆ

ಆಯಾಯ ಗ್ರಾಮಗಳಲ್ಲಿ ಪಿ.ಡಿ.ಒ.ಗಳು  ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ಅವರು ತಿಳಿಸಿದರು.

ಸಭೆಯಲ್ಲಿ ಸೊಂಕಿತರ ಗಂಟಲು ದ್ರವ ಪರೀಕ್ಷೆ ನಡೆಸಿ ಕೂಡಲೇ ಪರೀಕ್ಷಾ ವರದಿ ಬರುತ್ತಿಲ್ಲ ಎಂಬ ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಸಮಸ್ಯೆಯ ಬಗ್ಗೆ ಅರೋಗ್ಯ ಇಲಾಖೆಯ ಅಧಿಕಾರಿಗಳಲ್ಲಿ ಕಾರಣ ಕೇಳಿ ಪ್ರತಿ ದಿನದ ಪರೀಕ್ಷಾ ವರದಿಗಳನ್ನು ನೀಡುವಂತೆ ತಿಳಿಸಿದರು.

ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ಗ್ರಾಮಗಳಲ್ಲಿ

ಪ್ರಾಥಮಿಕ ಸೊಂಕಿತರ ಮಾಹಿತಿ ಪಡೆದುಕೊಂಡು

ಕೊರೊನಾ ಸೊಂಕು ಹೆಚ್ಚಾಗದಂತೆ ಟಾಸ್ಕ್ ಫೋರ್ಸ್ ಹಾಗೂ ಅಧಿಕಾರಿಗಳು ಹೆಚ್ಚಿನ ನಿಗಾವಹಿಸಿ ಎಂದರು.

ಸಭೆಗೆ ಸರಿಯಾದ ಸಮಯಕ್ಕೆ ಬರದೆ ಸಮಯ ಪಾಲನೆ ಮಾಡದ ಪಿ.ಡಿ.ಒಗಳ ಮೇಲೆ ಗರಂ ಆದ ಶಾಸಕರು ಇ.ಒ.ಕರೆದ ಸಭೆಗೆ

ಸಮಯಕ್ಕೆ ಸರಿಯಾಗಿ ಬರುವುದಿಲ್ಲ ಅಂದರೆ ಏನರ್ಥ ಇ.ಒ.ಅವರ ಹಿಡಿತದಲ್ಲಿ ಪಿ.ಡಿ.ಒ.ಗಳು ಇಲ್ಲ ಎಂಬುದು ಸಾಬೀತಾಗಿದೆ.

ಈ ಬಗ್ಗೆ ಸಿ.ಎಸ್.ಗೆ ದೂರು ನೀಡುತ್ತೇನೆ ಎಂದು ಅವರು

ಮದುವೆ ಮನೆಗೆ ಬರುವ ರೀತಿಯಲ್ಲಿ ಮೀಟಿಂಗ್ ಗೆ ಬರುವುದು ಸರಿಯಾದ ಕ್ರಮ ಅಲ್ಲ ಎಂದರು.

ಮೀಟಿಂಗ್ ಗೆ ತಡವಾಗಿ ಬಂದ ಪಿ.ಡಿ.ಒ.ಗಳನ್ನು ತಾ.ಪಂ.ಇ.ಒ.ರಾಜಣ್ಣ ಶಾಸಕರ ಎದುರಿನಲ್ಲಿಯೇ ತರಾಟೆಗೆ ತೆಗೆದುಕೊಂಡ ಘಟನೆ ಕೂಡ ನಡೆಯಿತು.

*ಪ್ರಸ್ತುತ ತಾಲೂಕಿನ ಗ್ರಾ.ಪಂ.ಗಳಲ್ಲಿ ಸಕ್ರೀಯ ಇರುವ ಕೊರೊನಾ ಸೊಂಕಿತರ ಬಗ್ಗೆ ಪಿ.ಡಿ.ಒ.ಗಳು ನೀಡಿದ ಮಾಹಿತಿ*

 

ಅಮ್ಟಾಡಿ 40

ಅನಂತಾಡಿ 8

ಬಡಗಬೆಳ್ಳೂರು 11

ಬಡಗಕಜೆಕಾರು 8

ಬಾಳೆಪುಣಿ 35

ಬಾಳ್ತಿಲ 45

ಚನ್ನೈತ್ತೋಡಿ 79

ಗೋಳ್ತಮಜಲು 23

ಇಡ್ಕಿದು 6

ಇರಾ 27

ಕಡೇಶಿವಾಲಯ 6

ಕನ್ಯಾನ 18

ಕರಿಯಂಗಳ 9

ಕರೋಪಾಡಿ 32

ಕಾವಳಮೂಡೂರು 6

ಕಾವಳಪಡೂರು 16

ಕೆದಿಲ 12

ಕೇಪು 23

ಕೊಳ್ನಾಡು 5

ಕುಕ್ಕಿಪಾಡಿ 17

ಕುರ್ನಾಡು 9

ಮಂಚಿ 21

ಮಾಣಿ 4

ಮೇರೆಮಜಲು 29

ನರಿಕೊಂಬು 24

ನರಿಂಗಾಣ 15

ನಾವೂರ 28

ಪಜೀರು 11

ಪಂಜಿಕಲ್ಲು 16

ಪೆರ್ನೆ 8

ಪೆರುವಾಯಿ 8

ಪಿಲಾತಬೆಟ್ಟು 3

ಪುದು 15

ಪುಣಚ 23

ರಾಯಿ 11

ಸಜೀಪ ಮೂಡ 12

ಸಜೀಪ ಮುನ್ನೂರು 8

ಸಜೀಪ ನಡು 10

ಸಂಗಬೆಟ್ಟು 12

ತುಂಬೆ 33

ಉಳಿ 15

ವೀರಕಂಬ 12

ಮಣಿನಾಲ್ಕೂರು 10

ಇರ್ವತ್ತೂರು 9

ಅಮ್ಮುಂಜೆ 12

ಮಾಣಿಲ 8

ಬರಿಮಾರು 8

ಬೊಳಂತೂರು 9

ಅರಳ 12

ನೆಟ್ಲ ಮೂಡ್ನೂರು 12

ಸಾಲೆತ್ತೂರು 2

ಕಳ್ಳಿಗೆ 27

ಪೆರಾಜೆ 3

ಸಜೀಪ ಪಡು 4 ಸಕ್ರೀಯ ಕೊರೊನಾ ಸೊಂಕು ಪ್ರಕರಣಗಳು ಸೋಮವಾರದ ವರೆಗೆ ಇದೆ ಎಂಬ ಮಾಹಿತಿ ನೀಡಿದರು.

ಅತೀ ಹೆಚ್ಚು ಪ್ರಕರಣಗಳಿದ್ದ ಪುಣಚ ಗ್ರಾಮದಲ್ಲಿ

ವಾರದಲ್ಲಿ ಮೂರು ದಿನ ಸಂಪೂರ್ಣ ಲಾಕ್ ಡೌನ್ ವ್ಯವಸ್ಥೆ ‌ಮಾಡಿದ ಹಿನ್ನೆಲೆಯಲ್ಲಿ ಪ್ರಸ್ತುತ ಕೊರೊನಾ ಸೊಂಕಿತರ ಸಂಖ್ಯೆ ನಿಯಂತ್ರಣಕ್ಕೆ ಬಂದಿದೆ ಎಂಬ ವಿಚಾರ ಸಭೆಯಲ್ಲಿ ಪಿ.ಡಿ.ಒ ಗಮನಕ್ಕೆ ತಂದರು.

ಪ್ರಭಾರ ತಾಲೂಕು ಆರೋಗ್ಯ ಅಧಿಕಾರಿ ಜಯಪ್ರಕಾಶ್ ಉಪಸ್ಥಿತರಿದ್ದರು.

More from the blog

ಒಡಿಯೂರಿನಲ್ಲಿ ವಂದೇ ಮಾತರಂ ತುಳು ಸಾಹಿತ್ಯ ಸಮ್ಮೇಳನ ಉದ್ಘಾಟನೆ

ವಿಟ್ಲ: ಭಾರತ ವಿಶ್ವದ ಉಸಿರಾಗಿದ್ದು, ಯಾವ ಸೆಳೆತಕ್ಕೂ ಒಳಗಾಗಿಲ್ಲ. ವಂದೇ ಮಾತರಂ ಗೀತೆಗೆ ರಾಷ್ಟ್ರಭಕ್ತಿ ಉದ್ದೀಪಿಸುವ ಶಕ್ತಿಯಿದೆ. ಭಾಷೆ ಸಂಸ್ಕೃತಿ ಬಹಳ ದೊಡ್ಡದಾಗಿದ್ದು, ಇದರ ಉಳಿವಿಗೆ ಒಗ್ಗಟ್ಟಾಗುವ ಅಗತ್ಯವಿದೆ. ವಿಶ್ವ ವಿದ್ಯಾಲಯಗಳಲ್ಲಿ ತುಳು...

ವಿದ್ಯಾರ್ಜನೆ ಪಡೆದ ಸಂಸ್ಥೆಗೆ ನೀಡುವ ಸಹಾಯಸ್ತ ದೇವತಾ ಕಾರ್ಯಕ್ಕೆ ಸಮಾನ : ಪ್ರಭಾಕರ ಪ್ರಭು

ಬಂಟ್ವಾಳ : ಬಾಲ್ಯದಲ್ಲಿ ಬಾಹ್ಯ ಪ್ರಪಂಚದಲ್ಲಿನ ಆಗುಹೋಗುಗಳ ಬಗ್ಗೆ ಪರಿಚಯಿಸಿ ಪ್ರಾಥಮಿಕ ಶಾಲಾ ಪೂರ್ವ ಶಿಕ್ಷನವನ್ನು ನೀಡುತ್ತಿರುವ ಅಂಗನವಾಡಿಗಳ ಮೂಲಭೂತ ಸೌಕರ್ಯಗಳಿಗೆ ನೀಡುವ ಸಹಾಯಸ್ತಾವು ದೇವತಾ ಕಾರ್ಯಕ್ಕೆ ಸಮಾನವಾಗಿರುತ್ತದೆ ಎಂದೂ ಸಿದ್ದಕಟ್ಟೆ ಪ್ರಾಥಮಿಕ...

ಮಣಿಹಳ್ಳ : ಹಿಂದೂ ಯುವಸೇನೆ ಏಕಲವ್ಯ ಶಾಖೆ ಆಶ್ರಯದಲ್ಲಿ ಎಳ್ಳು ಗಂಟು ದೀಪೋತ್ಸವ..

ಬಂಟ್ವಾಳ : ಹಿಂದೂ ಯುವಸೇನೆ ಏಕಲವ್ಯ ಶಾಖೆ ಮಣಿಹಳ್ಳ ಇದರ ಆಶ್ರಯದಲ್ಲಿ ವಿಶ್ವ ಶಾಂತಿಗಾಗಿ, ಲೋಕ ಕಲ್ಯಾಣಾರ್ಥವಾಗಿ, ಶನಿದೋಷ ಪರಿಹಾರಕ್ಕಾಗಿ ಸಕಲ ಇಷ್ಟಾರ್ಥ ಸಿದ್ಧಿಗಾಗಿ ಜ. 24ರಂದು ಶನಿವಾರ ನಡೆದ ಸತತ 14...

ಜಿಲ್ಲೆಯಲ್ಲಿ ಹೆಚ್ಚಿದ ಚಿರತೆ ಉಪಟಳ : ದಾಳಿಗೆ ನಾಯಿ, ಕಾಡುಹಂದಿ ಬಲಿ

ಬಂಟ್ವಾಳ : ಚಿರತೆಯೊಂದು ನಾಯಿಯನ್ನು ಕೊಂದು ಕುತ್ತಿಗೆಯ ಭಾಗದಿಂದ ಮಾಂಸವನ್ನು ತಿಂದು ಹೋದ ಘಟನೆ ಬೆಳ್ತಂಗಡಿ ತಾಲೂಕಿನ ಮಾಲಾಡಿಯ ಗ್ರಾಮದ ಪುರಿ ಎಂಬಲ್ಲಿ ನಡೆದಿದೆ. ಆನಂದ ನಾಯರ್ ಎಂಬವರ ಮನೆಯಲ್ಲಿ ಸಾಕಿದ ಕಪ್ಪು ಬಣ್ಣದ...