Friday, January 30, 2026

ಪಂಜಿಕಲ್ಲು ಪಂಚಾಯತ್ ವ್ಯಾಪ್ತಿಯ ಮೂರು ಗ್ರಾಮಗಳ 5 ಬೂತ್ ಸಮಿತಿಗಳ ಗ್ರಾ.ಪಂ. ಚುನಾವಣಾ ಪೂರ್ವ ಸಿದ್ಧತೆಯ ಸಭೆ

ಬಂಟ್ವಾಳ : ಭಾರತೀಯ ಜನತಾ ಪಕ್ಷದ ಸಂಗಬೆಟ್ಟು ಶಕ್ತಿಕೇಂದ್ರದ ಪಂಜಿಕಲ್ಲು ಪಂಚಾಯತ್ ವ್ಯಾಪ್ತಿಯ ಮೂರು ಗ್ರಾಮಗಳ 5 ಬೂತ್ ಸಮಿತಿಗಳ ಗ್ರಾ.ಪಂ. ಚುನಾವಣಾ ಪೂರ್ವ ಸಿದ್ಧತೆಯ ಬಗ್ಗೆ ಪ್ರಮುಖರು ಹಾಗೂ ಹಿರಿಯ ಕಾರ್ಯಕರ್ತರ ಸಭೆಯು ನಿನ್ನೆ ಪಂಜಿಕಲ್ಲು ಅಮೈ ಬಳಿ ನಡೆಯಿತು.

ಬಿಜೆಪಿ ಪ್ರಮುಖ ನಾರಾಯಣ ಭಂಡಾರಿ ಮಾತನಾಡಿ, ದೀನದಯಾಳ್ ಉಪಾಧ್ಯಾಯರು ರಾಷ್ಟ್ರೀಯ ಧ್ಯೇಯ ಧೋರಣೆಗಳ ಆಧಾರದ ಮೇಲೆ ಭಾರತೀಯ ಜನಸಂಘ ರಾಜಕೀಯ ಪಕ್ಷವನ್ನು ಸ್ಥಾಪಿಸಿದರು. ಅವರು ರೂಪಿಸಿದ ಸಿದ್ಧಾಂತದ ಮೇಲೆ ಇಂದು ಭಾರತೀಯ ಜನತಾ ಪಾರ್ಟಿಯು ಕಾರ್ಯನಿರ್ವಹಿಸುವ ಮೂಲಕ ಭಾರತವನ್ನು ವಿಶ್ವಗುರುವನ್ನಾಗಿಸುವ ಅವರ ಕನಸನ್ನು ಇಂದು ಸಾಕಾರಗೊಳಿಸುತ್ತಿದೆ ಎಂದರು.


ಪಂಜಿಕಲ್ಲು ಪಂಚಾಯತ್ ವ್ಯಾಪ್ತಿಯ ಚುನಾವಣಾ ಪ್ರಭಾರಿ ರಮೇಶ್ ಕುಡುಮೇರ್ ರವರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲಿ ಭಾಜಪ ಜಿಲ್ಲಾ ರೈತ ಮೋರ್ಚಾದ ಕಾರ್ಯದರ್ಶಿ ಸಂಜೀವ ಪೂಜಾರಿ ಪಿಲಿಂಗಾಲ್, ಬಂಟ್ವಾಳ ಬಿಜೆಪಿ ಕ್ಷೇತ್ರದ ಕೋಶಾಧಿಕಾರಿ ಪ್ರಕಾಶ್ ಅಂಚನ್, ಪಂಜಿಕಲ್ಲು ಪಂಚಾಯತ್ ಚುನಾವಣಾ ಸಹ ಪ್ರಭಾರಿ ಚಿದಾನಂದ ಕುಜ್ಲುಬೆಟ್ಟು, ನಿಕಟಪೂರ್ವ ಪಂಚಾಯತ್ ಉಪಾಧ್ಯಕ್ಷ ಲಕ್ಷ್ಮೀ ನಾರಾಯಣ ಗೌಡ, ಹಿರಿಯ ಕಾರ್ಯಕರ್ತ, ನಿವೃತ್ತ ಉಪನ್ಯಾಸಕ ನಾರಾಯಣ ಭಂಡಾರಿ, ಬೂತ್ ಸಮಿತಿಯ ಅಧ್ಯಕ್ಷರುಗಳಾದ ಪ್ರವೀಣ್ ಅಮೈ, ಆನಂದ ಪೂಜಾರಿ ಕೇಲ್ದೋಡಿ, ಶಶಿಧರ ಕೈಲಾರು, ಅಶ್ವಿನ್ ದಡ್ಡಲಕಾಡು, ಅಶೋಕ್ ಕೋಡಿಬೆಟ್ಟು, ಕರುಣೇಂದ್ರ ಪೂಜಾರಿ ಹಾಗೂ ಪಂಜಿಕಲ್ಲು ಪಂಚಾಯತ್ ಮಾಜಿ ಅಧ್ಯಕ್ಷೆ ಹರಿಣಾಕ್ಷಿ ಹಾಗೂ ಕೆ.ಎನ್.ಶೇಖರ್, ಕ್ಷೇತ್ರ ಹಿಂದುಳಿದ ವರ್ಗದ ಮೋರ್ಚಾದ ಕಾರ್ಯದರ್ಶಿ ಸಂತೋಷ್, ಜಿಲ್ಲಾ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಸದಸ್ಯ ಜೋಕಿಂ ಮಿನೇಜಸ್ ಹಾಗೂ ಪಂಚಾಯತ್‌ನ ಮಾಜಿ ಸದಸ್ಯರುಗಳು, ಪಕ್ಷದ ಹಿರಿಯ, ಕಿರಿಯ ಕಾರ್ಯಕರ್ತರ ಉಪಸ್ಥಿತಿಯಲ್ಲಿ ನಡೆಯಿತು.
ಪಂಡಿತ್ ದೀನದಯಾಳ್ ಉಪಾಧ್ಯಾಯರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮುಖಾಂತರ ಪ್ರಾರಂಭವಾದ ಸಭೆಯಲ್ಲಿ ಇತ್ತೀಚೆಗೆ ಅಗಲಿದ ಪಕ್ಷದ ಹಿರಿಯ ನಾಯಕರ ಸದ್ಗತಿಗಾಗಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.
ಸಭೆಯಲ್ಲಿ ಪಕ್ಷ ಸಂಘಟನೆಯ ಬಗ್ಗೆ ಸಂಜೀವ ಪೂಜಾರಿ ಪಿಲಿಂಗಾಲ್, ಪ್ರಕಾಶ್ ಅಂಚನ್, ನಾರಾಯಣ ಭಂಡಾರಿ, ಚಿದಾನಂದ ಕುಜ್ಲುಬೆಟ್ಟು ಮಾತನಾಡಿದರು.
ರಮೇಶ್ ಕುಡುಮೇರ್ ರವರು ಪಂಚಾಯತ್ ಚುನಾವಣೆಯ ಪೂರ್ವಭಾವಿಯ ಬಗ್ಗೆ ಮಾಹಿತಿವಿತ್ತು, ಮುಂದಿನ ರವಿವಾರ ದೊಳಗೆ ಎಲ್ಲಾ ಬೂತ್ ಸಮಿತಿಯ ಸಭೆ ಕರೆಯಲು ಕಾರ್ಯಕರ್ತರೊಂದಿಗೆ ಚರ್ಚಿಸಿ ದಿನ ನಿಗದಿಪಡಿಸಿದರು.

More from the blog

ಬಂಟ್ವಾಳ ಸಹಾಯಕ ಪೊಲೀಸ್ ಅಧೀಕ್ಷಕರಾಗಿ ಯಶ್ ಕುಮಾರ್ ಶರ್ಮಾ ನೇಮಕ

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಉಪ ವಿಭಾಗ, ಸಹಾಯಕ ಪೊಲೀಸ್ ಅಧೀಕ್ಷಕರಾಗಿ ಯಶ್ ಕುಮಾರ್ ಶರ್ಮಾ, ಐಪಿಎಸ್ (ಕೆಎನ್ 2023) ನೇಮಿಸಲಾಗಿದೆ. ಬಳ್ಳಾರಿ ನಗರ ಉಪ ವಿಭಾಗ, ಬಳ್ಳಾರಿ ಜಿಲ್ಲೆಗೆ ಸಹಾಯಕ ಪೊಲೀಸ್...

B.C. Road : ಮಂಗಳೂರು ಉಪವಿಭಾಗ ಮಟ್ಟದ ಬೆಂಕಿ ನಿಯಂತ್ರಣ ತರಬೇತಿ ಕಾರ್ಯಗಾರ

ಬಂಟ್ವಾಳ: ಅರಣ್ಯ ಇಲಾಖೆ ಮಂಗಳೂರು ವಿಭಾಗದ( ಬಂಟ್ವಾಳ, ಬೆಳ್ತಂಗಡಿ,ಮಂಗಳೂರು) ವತಿಯಿಂದ ಮಂಗಳೂರು ಉಪವಿಭಾಗ ಮಟ್ಟದ ಬೆಂಕಿ ನಿಯಂತ್ರಣ ತರಬೇತಿ ಕಾರ್ಯಗಾರ ಬಿಸಿರೋಡಿನ ರೋಟರಿ ಕ್ಲಬ್ ನ ಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ತಾಲೂಕು ಆರೋಗ್ಯಾಧಿಕಾರಿ ಅಶೋಕ್...

ಕಟೀಲು 7 ಮೇಳಗಳ ಜ.29ರ ಸೇವೆಯಾಟಗಳ ವಿವರ ಇಲ್ಲಿದೆ..

ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇದರ  7 ಮೇಳಗಳ ಜ.29ರ ಸೇವೆಯಾಟಗಳ ವಿವರ ಈ ಕೆಳಗಿನಂತಿವೆ.. ಜ.29ರ ಸೇವೆಯಾಟಗಳ ವಿವರ : ಉಮೇಶ್ ಅತಿಕಾರಿ, ಮುಳಿಂಜೆಗುತ್ತು, 'ಶ್ರೀ ಕೃಪಾ',...

ಬೆಂಗಳೂರಿಗಿಂತ ಮಂಗಳೂರಿನಲ್ಲಿ ವಾಯು ಗುಣಮಟ್ಟ ಕಳಪೆ – ಅಚ್ಚರಿ ವರದಿ ಬಹಿರಂಗ..!

ಮಂಗಳೂರು : ರಾಜ್ಯದ ವಿವಿಧ ನಗರಗಳಲ್ಲಿ ವಾಯು ಗುಣಮಟ್ಟ (AQI) ಆತಂಕಕಾರಿ ಮಟ್ಟಕ್ಕೆ ತಲುಪಿದ್ದು, ಈ ಪೈಕಿ ರಾಜಧಾನಿ ಬೆಂಗಳೂರಿಗಿಂತ ಮಂಗಳೂರಿನಲ್ಲಿ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿರುವುದು ವರದಿಯಾಗಿದೆ. ವರದಿಗಳ ಪ್ರಕಾರ, ಕರಾವಳಿ ಕರ್ನಾಟಕದ ಜಿಲ್ಲೆಗಳಾದ...