ಬಂಟ್ವಾಳ: ಪೆರಾಜೆ ಗ್ರಾಮದ ಸಾದಿಕುಕ್ಕು ಗುಡ್ಡಚಾಮುಂಡೇಶ್ವರಿ ದೈವದ ಚಾಕರಿ ಮಾಯಿಲಪ್ಪ ಕುಲಾಲ್ (74) ಅವರು ಇಂದು ಬೆಳಿಗ್ಗೆ ಮಂಗಳೂರು ಖಾಸಗಿ ಆಸ್ಪತ್ರೆ ಯಲ್ಲಿ ಕೊನೆಯುಸಿರೆಳೆದರು.
ಕಳೆದ ಮೂರು ದಿನಗಳ ಹಿಂದೆ ಅನಾರೋಗ್ಯದಿಂದ ಖಾಸಗಿ ಆಸ್ಪತ್ರೆ ಸೇರಿದ ಇವರು ತಲೆಗೆ ಸಂಬಂಧಿಸಿದ ಕಾಯಿಲೆಯಿಂದ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.
ನೇರಳಕಟ್ಟೆ ವ್ಯವಸಾಯ ಸೇವಾ ಸಹಕಾರಿ ಸಂಘದ ಗುಮಾಸ್ತರಾಗಿ ಕೆಲಸ ನಿರ್ವಹಿಸಿ ನಿವೃತ್ತರಾದವರು. ಕೊಡುಗೈದಾನಿಯಾಗಿದ್ದ
ಅವರು ಅಪ್ಪಟ್ಟ ಕೃಷಿಕರು ಹೌದು.

ಗ್ರಾಮ ದೈವ ಗುಡ್ಡಚಾಮುಂಡಿ ದೈವದ ಚಾಕರಿ ಮಾಡುತ್ತಿದ್ದರು. ಊರಿನಲ್ಲಿ ಸಾಮಾಜಿಕ ವಾಗಿ ಗುರುತಿಸಿ ಕೊಂಡು ಅನೇಕ ಧಾರ್ಮಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.
ಇವರು ಪತ್ನಿ ಹಾಗೂ ಆರು ಗಂಡು ಒಂದು ಹೆಣ್ಣು ಮಗಳ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ.