Monday, June 30, 2025

ಪ್ರತಿಯೊಬ್ಬ ಮತದಾರರು ಕಡ್ಡಾಯವಾಗಿ ಪರಿಶೀಲನೆ ಅಗತ್ಯ: ತಹಶೀಲ್ದಾರ್ ರಶ್ಮಿ. ಎಸ್.ಆರ್

ಬಂಟ್ವಾಳ: ರಾಜ್ಯ ಚುನಾವಣಾ ಆಯೋಗವು ಸಮಗ್ರ ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆ-2020ರಲ್ಲಿ ಮತದಾರರ ಪಟ್ಟಿಯ ಪರಿಶೀಲನಾ ಕಾರ್ಯಕ್ರಮವನ್ನು ಆರಂಭಿಸಲಾಗಿದ್ದು, ಎಲ್ಲಾ ಮತದಾರರು ಕಡ್ಡಾಯವಾಗಿ ಪರಿಶೀಲನೆ ಮಾಡುವುದು ಅಗತ್ಯವಾಗಿದೆ ಎಂದು ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್. ಮನವಿ ಮಾಡಿದ್ದಾರೆ.
ಸಮಗ್ರ ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆಯ ಕುರಿತು ಸಾಕಷ್ಟು ಮಂದಿಗೆ ಮಾಹಿತಿ ಕೊರತೆಯಿದ್ದು, ನಾವು ಆ ಕಾರ್ಯವನ್ನು ಮಾಡಬೇಕಿಲ್ಲ ಎಂದು ಸಾಕಷ್ಟು ಮಂದಿ ತಪ್ಪು ತಿಳಿವಳಿಕೆ ಹೊಂದಿದ್ದಾರೆ. ಮತದಾನದ ಹಕ್ಕಿರುವ ಪ್ರತಿಯೊಬ್ಬರೂ ಪರಿಷ್ಕರಣೆಯ ಕಾರ್ಯದಲ್ಲಿ ಪಾಲ್ಗೊಳ್ಳಬೇಕಿದೆ.
ಬಂಟ್ವಾಳ ತಾಲೂಕು ವ್ಯಾಪ್ತಿಗೆ ಬಂಟ್ವಾಳ, ಪುತ್ತೂರು  ಹಾಗೂ ಮಂಗಳೂರು ವಿಧಾನಸಭಾ ಕ್ಷೇತ್ರ ಗಳು ಬರುತ್ತಿದ್ದು, ಒಟ್ಟು ಸುಮಾರು 3 ಲಕ್ಷದಷ್ಟು ಮತದಾರರಿದ್ದಾರೆ. ಪರಿಷ್ಕರಣಾ ಕಾರ್ಯವು ಸೆ. 1ಕ್ಕೆ ಆರಂಭಗೊಂಡಿದ್ದು, ಈ ತನಕ ತಾಲೂಕಿನಲ್ಲಿ ಕೇವಲ ೨೫೦೦ರಷ್ಟು ಮತದಾರರು ಮಾತ್ರ ಪರಿಷ್ಕರಣೆ ನಡೆಸಿದ್ದಾರೆ. ಅ. 15ರವರೆಗೆ ಮಾತ್ರ ಅವಕಾಶವಿದ್ದು, ಅದರೊಳಗೆ ಎಲ್ಲಾ ಮತದಾರರು ಪರಿಷ್ಕರಣೆ ನಡೆಸಬೇಕಿದೆ.
ಮತದಾರರಿಗೆ ಅನುಕೂಲವಾಗುವ ದೃಷ್ಟಿಯಿಂದ ತಮ್ಮ ಮೊಬೈಲ್ ಮೂಲಕವೂ ಪರಿಷ್ಕರಣೆಗೆ ಆಯೋಗವು ಅವಕಾಶ ನೀಡಿದೆ. ಗೂಗಲ್ ಪ್ಲೆ ಸ್ಟೊರ್ ಮೂಲಕ ಓಟರ್ ಹೆಲ್ಪ್ಲೈನ್ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು, ಬಳಿಕ ಅದರಲ್ಲಿ ಇವಿಪಿಯನ್ನು ಆಯ್ಕೆ ಮಾಡಿ ಮುಂದುವರಿಯಬೇಕಿದೆ.
ಮತದಾರರು ಪರಿಷ್ಕರಣೆ ನಡೆಸುವ ವೇಳೆ ಮೊಬೈಲ್ ಸಂಖ್ಯೆಗೆ ಒಟಿಪಿ ಬರುತ್ತಿದ್ದು, ಅದನ್ನು ದಾಖಲಿಸಿ ಮುಂದುವರಿಯಬಹುದಾಗಿದೆ. ಇದರಲ್ಲಿ ತಪ್ಪುಗಳಿದ್ದರೆ ಸರಿಪಡಿಸಿಕೊಳ್ಳುವುದಕ್ಕೂ ಅವಕಾಶವಿದ್ದು, ಮತದಾರರ ಪರಿಷ್ಕರಣೆ ಪೂರ್ಣಗೊಂಡ ಬಳಿಕ ಮತದಾರರಿಗೆ ಆಯೋಗವು ಒಂದು ಸರ್ಟಿಫಿಕೇಟನ್ನು ಕೂಡ ಆ್ಯಪ್‌ನ ಮೂಲಕವೇ ನೀಡುತ್ತದೆ.
ಒಂದು ಮೊಬೈಲ್ ನ ಮೂಲಕ ಡೌನ್‌ಲೋಡ್ ಮಾಡಿದ ಆ್ಯಪ್ ಮೂಲಕ ಇತರ ಮತದಾರರು ಕೂಡ ತಮ್ಮ ಮೊಬೈಲ್ ಸಂಖ್ಯೆ ದಾಖಲಿಸಿ ಪರಿಷ್ಕರಣೆ ನಡೆಸಲು ಅವಕಾಶವಿದೆ. ಪ್ರಸ್ತುತ ಸರಳ ರೀತಿಯಲ್ಲಿ ಪರಿಷ್ಕರಣೆಗೆ ಅವಕಾಶವಿದ್ದು, ಹೀಗಾಗಿ ಈಗಲೇ ಪ್ರತಿಯೊಬ್ಬ ಮತದಾರರೂ ಪರಿಷ್ಕರಣೆ ನಡೆಸಬೇಕಿದೆ ಎಂದು ತಹಶೀಲ್ದಾರ್ ತಿಳಿಸಿದ್ದಾರೆ.

More from the blog

ಬೋಳಂತೂರು : ಮನೆ ದುರಸ್ತಿ ಶ್ರಮದಾನ ಕಾರ್ಯಕ್ರಮ..

ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ.)ವಿಟ್ಲ ಇದರ ಕಲ್ಲಡ್ಕ ವಲಯ ಶೌರ್ಯ ವಿಪತ್ತು ನಿರ್ವಹಣಾ ಘಟಕ ಹಾಗೂ ಭೀಮ್ ಸಂಜೀವಿನಿ ಬೋಳಂತೂರು ಇದರ ಜಂಟಿ...

ಮಾಣಿಲ – ಸಾಮೂಹಿಕ ಲಕ್ಷ್ಮೀ ಪೂಜೆ : ಧಾರ್ಮಿಕ ಸಭೆ..

ವಿಟ್ಲ: ಕೋಪ, ಅಹಂಕಾರ, ಗರ್ವಗಳೆಲ್ಲವೂ ಬದುಕಿಗೆ ಎಂದೂ ಪ್ರಯೋಜನಕ್ಕೆ ಬಾರವು. ಉದ್ರೇಕ ರೋಷ, ದ್ವೇಷಗಳಿಂದ ಏನೂ ಸಾಧಿಸಲಾಗದು. ಭ್ರಮೆಯಿಂದ ಹೊರಬೇಕಾದರೆ ಗುರುಶಕ್ತಿಯನ್ನು ಅರಿತುಕೊಳ್ಳುವ ಜ್ಞಾನವನ್ನು ಹೊಂದಬೇಕು. ಎಲ್ಲರನ್ನೂ ಎಲ್ಲವನ್ನೂ ಪ್ರೀತಿಸುತ್ತಾ ಸಾಗೋಣ ಎಂದು...

ಫರಂಗಿಪೇಟೆ: ರಾಷ್ಟ್ರೀಯ ಹೆದ್ದಾರಿ ಸ್ವಚ್ಛತಾ ಅಭಿಯಾನ

ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ ೭೫ರ ಮಂಗಳೂರು- ಬಿ.ಸಿ.ರೋಡು ಹೆದ್ದಾರಿಯನ್ನು ತ್ಯಾಜ್ಯ ಮುಕ್ತಗೊಳಿಸುವ ನಿಟ್ಟಿನಲ್ಲಿ ಸ್ವಚ್ಛತೆಗಾಗಿ ನಿಮ್ಮೊಂದಿಗೆ ನಾವು, ನಮ್ಮೊಂದಿಗೆ ನೀವು ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಇದರ ಭಾಗವಾಗಿ ಅಡ್ಯಾರ್ ನಿಂದ ಫರಂಗಿಪೇಟೆ ಮೂಲಕ ಕಡೆಗೋಳಿವರೆಗೆ...

Strike : ಜು. 9ರ ಕಾರ್ಮಿಕರ ಅಖಿಲ ಭಾರತ ಮುಷ್ಕರ ಯಶಸ್ವಿಗೊಳಿಸಲು ಕಾಮ್ರೇಡ್ ಪಿ.ಪಿ ಅಪ್ಪಣ್ಣ ಕರೆ

ಬಂಟ್ವಾಳ : ಜುಲೈ 9 ರಂದು ಕಾರ್ಮಿಕ ಕಾಯ್ದೆಗಳ ತಿದ್ದುಪಡಿ ವಿರೋಧಿಸಿ ಹಾಗೂ ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ವಿರೋಧಿಸಿ ಕಾರ್ಮಿಕ ಸಂಘಟನೆಗಳಿಂದ ಅಖಿಲ ಭಾರತ ಮುಷ್ಕರಕ್ಕೆ ಕರೆ ನೀಡಿದ್ದು ಈ...