ಬಂಟ್ವಾಳ: ಹೃದಯಾಘಾತದಿಂದ ಶಿಕ್ಷಕ ಸಾವನ್ನಪ್ಪಿದ ಘಟನೆ ಪುಂಜಾಲಕಟ್ಟೆಯಲ್ಲಿ ಇಂದು ನಡೆದಿದೆ.


ಮುಖ್ಯೋಪಾಧ್ಯಾಯ ರಾಮಾ ಪಿ. ಸಾಲಿಯಾನ್ (56) ಅವರು ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನರಾದರು.
ಅವರು ಇತ್ತೀಚಿಗೆ ಹೃದಯ ಸಂಬಂಧಿ ರೋಗದಿಂದ ಬಳಲುತ್ತಿದ್ದರು.
ಉಳಿ ಶಾಸಕರ ಮಾದರಿ ಹಿ.ಪ್ರಾ.ಶಾಲೆಯಲ್ಲಿ ಮುಖ್ಯೋಪಾಧ್ಯಾಯ ರಾಗಿ ಕೆಲಸ ಮಾಡುತ್ತಿದ್ದ ಇವರು ಇಂದು ಮುಂಜಾನೆ 5.30 ರ ವೇಳೆ ಮನೆಯಲ್ಲಿ ಹೃದಯಾಘಾತದಿಂದ ನಿಧನರಾದರು.
ಇವರು ಕಂಬಳ ಪ್ರಿಯರಾಗಿದ್ದರಲ್ಲದೆ ಕಂಬಳ ಕೋಣದ ಮಾಲಕ ಕೂಡ ಹೌದು.
ಕಂಬಳ ಕ್ರೀಡೆ ಯಲ್ಲಿ ಅನೇಕ ಪ್ರಶಸ್ತಿಯನ್ನು ಇವರ ಕೋಣಗಳು ಪಡೆದುಕೊಂಡಿತ್ತು.
ಪುಂಜಾಲಕಟ್ಟೆ ಸ್ವಸ್ತಿಕ್ ಪ್ರೆಂಡ್ಸ್ ಕ್ಲಬ್ ನೀಡುವ
ಸ್ವಸ್ತಿ ಶ್ರೀ ರಾಜ್ಯ ಪ್ರಶಸ್ತಿ ಸಹಿತ ಅನೇಕ ರಾಜ್ಯ ರಾಷ್ಟ್ರ ಮಟ್ಟದ ಪ್ರಶಸ್ತಿ ಗಳನ್ನು ಅವರು ಪಡೆದುಕೊಂಡಿದ್ದಾರೆ.
ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಸ್ವೀಕರಿಸಿರುವ ಇವರು ಸ್ಥಳೀಯ ವಾಗಿ ಎಲ್ಲರ ಅಚ್ಚುಮೆಚ್ಚಿನ ರಮಾ ಅಣ್ಣ ಎಂದು ಚಿರಪರಿಚಿತ ರಾಗಿದ್ದರು.
ತಾಂಬೂಲ ನಾಟಕ ಕಲಾ ತಂಡದ ಪ್ರಮುಖರು ಕೂಡಾ ಅಗಿದ್ದರು.
ಸಾಮಾಜಿಕ ಧಾರ್ಮಿಕ ಚಟುವಟಿಕೆಯಲ್ಲಿ ಇವರು ತೊಡಗಿಸಿಕೊಂಡಿದ್ದರು.
ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು , ಜಿ.ಪಂ.ಸದಸ್ಯ ತುಂಗಪ್ಪ ಎಂ.ಬಂಗೇರ, ಸ್ವಸ್ತಿಕ್ ಪ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ ಸಹಿತ ಅನೇಕ ಗಣ್ಯರು ಇವರಿಗೆ ಸಂತಾಪ ಸೂಚಿಸಿದ್ದಾರೆ