Monday, February 10, 2025

ವಿಟ್ಲಪಡ್ನೂರು: ಮಸೀದಿ ಉದ್ಘಾಟನೆ

ವಿಟ್ಲ ಪಡ್ನೂರು ಗ್ರಾಮದ ಕಡಂಬುವಿನಲ್ಲಿ ಪುನರ್ ನಿರ್ಮಿಸಲ್ಪಟ್ಟ ಕಡಂಬು ಜುಮ್ಮ ಮಸೀದಿಯ ಉದ್ಘಾಟನೆಯನ್ನು ಕಾಸರಗೋಡು ಸಂಯುಕ್ತ ಖಾಝಿ ಶೈಖುನಾ ಆಲಿಕುಟ್ಟಿ ನೆರವೇರಿಸಿದರು. ಬಳಿಕ ನಡೆದ ಧಾರ್‍ಮಿಕ ಕಾರ್‍ಯಕ್ರಮವನ್ನು ಶೈಖುನಾ ಬೇಕಲ ಇಬ್ರಾಹಿಂ ಮುಸ್ಲಿಯಾರ್ ಸಂಯುಕ್ತ ಖಾಝಿ ಉಡುಪಿ ಜಿಲ್ಲೆ ನೆರವೇರಿಸಿದರು.
ಈ ಕಾರ್‍ಯಕ್ರಮದಲ್ಲಿ ಚೆಂಗಳ ಅಬ್ದುಲ್ಲಾ ಫೈಝಿ ಮುಖ್ಯ ಪ್ರಭಾಷಣ ಮಾಡಿದರು. ಮುಖ್ಯ ಅತಿಥಿಗಳಾಗಿ ಅಬ್ದುಲ್ ಖಾದರ್ ಸಖಾಫಿ ಕಡಂಬು, ಕುಕ್ಕಿಲ ಅಬ್ದುಲ್‌ಖಾದರ್ ದಾರಿಮಿ ಮತ್ತು ಅಬ್ದುಲ್ ರಶೀದ್ ಸಖಾಫಿ ಇವರು ಭಾಗವಹಿಸಿದ್ದರು.
ಸಮಾರೋಪ ಸಮಾರಂಭದಲ್ಲಿ ಮಾಜಿ ಉಸ್ತುವಾರಿ ಸಚಿವ ರಮಾನಾಥ ರೈ ಅವರನ್ನು ಮಸೀದಿಯ ಆಡಳಿತ ಸಮಿತಿ ಅಧ್ಯಕ್ಷ ಜನಾಬ್ ಹಾಜಿ ಅಬ್ದುಲ್‌ಖಾದರ್ ಪೀಲಿವಲಚ್ಚಿಲ್ ಅವರು ಸನ್ಮಾನಿಸಿದರು.
ಅತಿಥಿಗಳಾಗಿ ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ಎಸ್ ಮಹಮ್ಮದ್, ಬಂಟ್ವಾಳ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಅಬ್ಬಾಸ್ ಆಲಿ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಮಾಧವ ಮಾವೆ, ಜೆಡಿಎಸ್ ಜಿಲ್ಲಾಧ್ಯಕ್ಷ ಹಾಜಿ ಮಹಮ್ಮದ್ ಕುಂಞಿ, ಪಿಎಫ್‌ಐ ರಾಷ್ಟ್ರೀಯ ಸಮಿತಿ ಸದಸ್ಯ ಕೆ.ಎಂ ಷರೀಫ್, ಎಸ್‌ಡಿಪಿಐ ರಾಷ್ಟ್ರೀ ಪ್ರಧಾನ ಕಾರ್‍ಯದರ್ಶಿ ಅಲ್ಫಾನ್ಸೊ ಫ್ರಾಂಕೊ ಮೊದಲಾದವರು ಭಾಗವಹಿಸಿದ್ದರು.
ಬಿ.ಕೆ ಅಬ್ದುಲ್‌ಖಾದರ್ ಅಲ್‌ಖಾಸಿಮಿ ಬಂಬ್ರಾಣ ಸ್ವಾಗತಿಸಿದರು. ಕಡಂಬು ಜುಮ್ಮಾ ಮಸೀದಿಯ ಖತೀಬ ಅಬ್ದುಲ್‌ರಹಿಮಾನ್ ಸಹದಿ ಪ್ರಸ್ತಾವಿಸಿದರು. ಯುಸೂಫ್ ಮುಸ್ಲಿಯಾರ್ ಎ ಬಿ ಕಡಂಬು ವಂದಿಸಿ ಕಾರ್‍ಯಕ್ರಮ ನಿರೂಪಿಸಿದರು.

More from the blog

ಬಂಟ್ವಾಳ : ಸಮಾಜ ಸೇವಾ ಸಹಕಾರಿ ಸಂಘ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಿಗೆ ಜಯ

ಬಂಟ್ವಾಳ : ಪ್ರತಿಷ್ಠಿತ ಸಮಾಜ ಸೇವಾ ಸಹಕಾರಿ ಸಂಘ ನಿಯಮಿತ ಬಂಟ್ವಾಳ ಇದರ ಮುಂದಿನ 5 ವರ್ಷಗಳ ಅವಧಿಯ ಆಡಳಿತ ಮಂಡಳಿಗೆ‌ ಭಾನುವಾರ‌ ಚುನಾವಣೆ ನಡೆದಿದ್ದು, ಸಹಕಾರ ಭಾರತಿಯ 17 ಮಂದಿ‌ ಅಭ್ಯರ್ಥಿಗಳು...

ಕೊಳ್ನಾಡು : ಬಾರೆಬೆಟ್ಟು ಮಂಟಮೆಯಲ್ಲಿ ಕಾಲಾವಧಿ ಜಾತ್ರೆ

ವಿಟ್ಲ : ಕೊಳ್ನಾಡು ಗ್ರಾಮದ ಕಾರಣಿಕದ ಪ್ರಸಿದ್ಧ ದೈವಕ್ಷೇತ್ರ 'ಬಾರೆಬೆಟ್ಟು ಮಂಟಮೆ'ಯ ಕಾಲಾವಧಿ ಜಾತ್ರೆಯು ವಿಜೃಂಭಣೆಯಿಂದ ಜರಗಿತು. ಶ್ರೀ ಮಲರಾಯಿ ಮತ್ತು ಬಂಟ ದೈವದ ದೈವದ ಕೊಟ್ಯದಾಯನ ನೇಮೋತ್ಸವ ನಡೆಯಿತು. ಇದೇ ಸಂದರ್ಭದಲ್ಲಿ ಶ್ರೀ ಮಲರಾಯಿ...

ಪಣೋಲಿಬೈಲು ಕ್ಷೇತ್ರದಲ್ಲಿ ಫೆ.12ರಿಂದ ಫೆ.16ರವರೆಗೆ ಅಗೇಲು ಸೇವೆ & ಕೋಲ ಸೇವೆ ಇಲ್ಲ

ಬಂಟ್ವಾಳ: ಸಜೀಪಮೂಡ ಗ್ರಾಮದ ಕಾರಣಿಕ ಕ್ಷೇತ್ರ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಫೆ.12ರಿಂದ ಫೆ.16ರವರೆಗೆ ಅಗೇಲು ಸೇವೆ ಮತ್ತು ಕೋಲ ಸೇವೆ” ಇರುವುದಿಲ್ಲ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ. ನಂದಾವರ ಶ್ರೀ ವಿನಾಯಕ ಶಂಕರ...

ಬೆಳ್ತಂಗಡಿ : ಗ್ರಾಮ ಆಡಳಿತಾಧಿಕಾರಿಗಳಿಂದ 2 ನೇ ಹಂತದ ಅನಿರ್ದಿಷ್ಟಾವಧಿ ಮುಷ್ಕರ

ಬೆಳ್ತಂಗಡಿ : ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಸಮಸ್ಯೆಗಳು ಮತ್ತು ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಮ ಆಡಳಿತ ಅಧಿಕಾರಿಗಳ ಕೇಂದ್ರ ಸಂಘದ ಮೇರೆಗೆ ಫೆ. 10 ರಿಂದ ಬೆಳ್ತಂಗಡಿಯಲ್ಲಿ...