Wednesday, June 25, 2025

” ವಿಟಾರ ಬ್ರೆಝಾ “ಕಾರು ಮಾರುಕಟ್ಟೆ ಗೆ ಬಿಡುಗಡೆಗೊಳಿಸಿದ ಪಾಣೆಮಂಗಳೂರು ಘಟಕ ಮಾಂಡೋವಿ ಸಂಸ್ಥೆ

ಬಂಟ್ವಾಳ: ಮಾರುತಿ ಸುಜುಕಿ ಕಂಪೆನಿಯ ಈ ವರ್ಷದ ನೂತನ ಅತ್ಯಾಧುನಿಕ ಸವಲತ್ತುಗಳನ್ನೊಳಗೊಂಡ ಪೆಟ್ರೋಲ್ ಎಂಜಿನ್ “ವಿಟಾರ ಬ್ರೆಝಾ” 1.5 ಕೆ ಮಾದರಿಯ ಕಾರನ್ನು ಪಾಣೆಮಂಗಳೂರು ಮಾಂಡೋವಿ ಮೋಟಾರ್ ಪ್ರೈವೇಟ್ ಲಿ.ಕಂಪೆನಿಯಲ್ಲಿ ಬಿಡುಗಡೆ ಮಾಡಲಾಯಿತು.


ಬಂಟ್ವಾಳ ಸ್ಟೇಟ್ ಬ್ಯಾಂಕ್ ನ ಸೀನಿಯರ್ ಮ್ಯಾನೇಜರ್ ಟಿ.ವಿ.ರವೀಂದ್ರ ಕುಮಾರ್ ವಾಹನದ” ಕೀ “ಯನ್ನು ಗ್ರಾಹಕ ಯತೀಶ್ ಹಾಗೂ ವೆಂಕಟರಮಣ ಪೈ ಅವರಿಗೆ ನೀಡುವ ಮೂಲಕ ಬಿಡುಗಡೆ ಮಾಡಲಾಯಿತು.
ಈ ಕಾರ್ಯಕ್ರಮದ ಲ್ಲಿ ಮುಖ್ಯ ಅತಿಥಿಯಾಗಿ ಬೆಂಗಳೂರು ಕೃಷಿ, ಮತ್ತು ಭೂ ಅಭಿವೃದ್ಧಿ ಬ್ಯಾಂಕ್ ನ ನಿರ್ದೇಶಕ ಸುದರ್ಶನ್ ಜೈನ್ ಹಾಗೂ ಉದ್ಯಮಿ ಯತೀನ್ ಪೂಜಾರಿ ಕಲ್ಲಡ್ಕ, ಹಾಗೂ ಮಾಂಡೋವಿ ಮೋಟಾರ್ ಸಂಸ್ಥೆಯ ವರ್ಕ್ಸ್ ಮ್ಯಾನೇಜರ್ ಗ್ರೇಸನ್ ಪಿಂಟೋ, ರೂರಲ್ ಸೇಲ್ಸ್ ವಿಭಾಗದ ಮುಖ್ಯಸ್ಥ ಪ್ರದೀಪ್ ಭಟ್, ಸುಜಿತ್ ಕುಮಾರ್, ಪೈನಾನ್ಸ್ ಮ್ಯಾನೇಜರ್ ಸುಪಾರ್ಶ್ವ ಜೈನ್ ಮತ್ತಿತರರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ವರ್ಷಾಂತ್ಯದ ಲ್ಲಿ ಅತೀ ಹೆಚ್ಚು ವ್ಯವಹಾರ ಮಾಡಿದ ರವಿ ರೈ ಹಾಗೂ ದಿಲೀಪ್ ಕುಮಾರ್ ಅವರನ್ನು ಗೌರವಿಸಲಾಯಿತು.
ಮುರಳೀಧರ್ ಕಾರ್ಯಕ್ರಮ ನಿರೂಪಿಸಿದರು.

ವಿಶೇಷ ತೆಗಳು: 7 ಕಲರ್ ಗಳಲ್ಲಿ ಈ ಕಾರು ಮಾರುಕಟ್ಟೆ ಯಲ್ಲಿ ಲಭ್ಯವಿರುತ್ತದೆ. ಪ್ರಾಜೆಕ್ಟ್ ರ್ ಹೆಡ್ ಲ್ಯಾಂಪ್, ಹೈ ಬ್ರೀಡ್ ಆಟೋಮ್ಯಾಟಿಕ್ ಕಾರ್ , ಡಿಯೋಲ್ ಟೋನ್ ಗಳಲ್ಲಿ ಲಭ್ಯ, ಇನ್ ಪೋಟೈನ್ ಮೆಂಟ್ ಸಿಸ್ಟಮ್ , ಲೆದರ್ ರ್ರಾಪ್ಡ್ ಸ್ಟಿಯರಿಂಗ್ ಇತ್ಯಾದಿ ಅನೇಕ ವೈಶಿಷ್ಟ್ಯಗಳನ್ನು ಹೊಂದಿದೆ.

More from the blog

ವೀರಕಂಭ ಗ್ರಾಮದ ರೈತರಿಗೆ ಕೃಷಿ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ..

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಕೃಷಿ ಇಲಾಖೆ ಬಂಟ್ವಾಳ ತಾಲೂಕು 2025-26 ನೇ ಸಾಲಿನ ರಾಷ್ಟ್ರೀಯ ನೈಸರ್ಗಿಕ ಕೃಷಿ ಅಭಿಯಾನ ಯೋಜನೆಯಡಿ ರೈತರಿಗೆ ಕೃಷಿ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ...

ಆಕ್ಸಿಯಂ-4 ಉಡಾವಣೆ ಯಶಸ್ವಿ – ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅಂತರಿಕ್ಷಯಾನ ಶುರು..

ಆಕ್ಸಿಯಮ್ 4 ಮಿಷನ್ ಬುಧವಾರ ಫ್ಲೋರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆಯಾಗಿದೆ. ಮಧ್ಯಾಹ್ನ ಭಾರತೀಯ ಕಾಲಮಾನ 12.01ಕ್ಕೆ ಆಕ್ಸಿಯಮ್-4 ಬಾಹ್ಯಾಕಾಶ ಯೋಜನೆಯ ಗಗನಯಾತ್ರಿಗಳನ್ನು ಹೊತ್ತ ಸ್ಪೇಸ್ಎಕ್ಸ್ ಫಾಲ್ಕನ್-9 ನೌಕೆ, ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ...

Rain Alert : ರಾಜ್ಯದಲ್ಲಿ ಮುಂಗಾರು ಚುರುಕು – ಕರಾವಳಿ ಸೇರಿ ಹಲವೆಡೆ 3 ದಿನ ಭಾರೀ ಮಳೆ ಸಾಧ್ಯತೆ..

ಮಂಗಳೂರು : ಕರ್ನಾಟಕದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಮುಂಗಾರು ಚುರುಕುಗೊಂಡಿದೆ. ಕರಾವಳಿ ಸೇರಿ ಹಲವೆಡೆ ಧಾರಾಕಾರ ಮಳೆಯಾಗುವ ಸಾಧ್ಯತೆ ಇದ್ದು, 6 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಮುಂಗಾರು ಆರಂಭವಾಗಿ 15 ದಿನಗಳು ಕಳೆದರೂ...

ರಾಜ್ಯ ಮಟ್ಟದ ಸಾಹಿತ್ಯ ಸ್ಪರ್ಧೆಯ ಬಹುಮಾನ ವಿತರಣೆ

ಬಂಟ್ವಾಳ : ಕವಿ‌, ಸಾಹಿತಿ, ಸಂಘಟಕ ಯುವವಾಹಿನಿಯ ಸಲಹೆಗಾರ ಬಿ ತಮ್ಮಯ ನೆನಪಿನ ರಾಜ್ಯಮಟ್ಟದ ಸಾಹಿತ್ಯ ಸ್ಪರ್ಧೆ ಆಯೋಜಿಸಲಾತ್ತು. ಈ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು, ಹೊಸಪೇಟೆ , ವಿಜಯನಗರ, ಬೆಂಗಳೂರು, ಚಿತ್ರದುರ್ಗ,...