ಬಂಟ್ವಾಳ: ಮಾರಿಪಳ್ಳ ಬದ್ರೀಯ್ಯಿನ್ ಜುಮಾ ಮಸೀದಿ ಇದರ ಆಡಳಿ ಸಮಿತಿಯ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ನಡೆಯಿತು. ಪ್ರಸ್ತುತ ಸಾಲಿಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಸಿ. ಮಹ್ಮೂದ್ ಹಾಜಿ, ಉಪಾಧ್ಯಕ್ಷರಾಗಿ ಎಂ.ರಮ್ಲಾನ್, ಪ್ರಧಾನ ಕಾರ್ಯದರ್ಶಿಯಾಗಿ ಅಬೂಬಕರ್ ಪಿ., ಜೊತೆ ಕಾರ್ಯದರ್ಶಿಯಾಗಿ ಅಬ್ದುಲ್ ಸಲಾಂ, ಕೋಶಾಧಿಕಾರಿಯಾಗಿ ಎಂ.ಹುಸೈನ್, ಲೆಕ್ಕ ಪರಿಶೋಧಕರಾಗಿ ಇಬ್ರಾಹಿಂ ಅವರು ಆಯ್ಕೆಯಾಗಿದ್ದಾರೆ.