ನವದೆಹಲಿ: ಸರ್ಕಾರದ ವಹಿವಾಟುಗಳನ್ನು ನಿರ್ವಹಿಸುತ್ತಿರುವ ಎಲ್ಲಾ ಏಜೆನ್ಸಿ ಬ್ಯಾಂಕುಗಳೂ ಹಣಕಾಸು ವರ್ಷದ ಕೊನೆ ದಿನವಾದ ಮಾರ್ಚ್ 31, ಭಾನುವಾರದಂದು ತೆರೆದಿರಬೇಕು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ನಿರ್ದೇಶನ ನೀಡಿದೆ.

2023-24ರ ಹಣಕಾಸು ವರ್ಷದಲ್ಲಿಯೇ ರಸೀದಿಗಳು ಮತ್ತು ಪಾವತಿಗಳಿಗೆ ಸಂಬಂಧಿಸಿದ ಎಲ್ಲಾ ಸರ್ಕಾರಿ ವಹಿವಾಟುಗಳನ್ನು ಲೆಕ್ಕಹಾಕಲು ಮಾರ್ಚ್ 31, 2024 ರಂದು ಸರ್ಕಾರಿ ರಸೀದಿಗಳು ಮತ್ತು ಪಾವತಿಗಳೊಂದಿಗೆ ವ್ಯವಹರಿಸುವ ಬ್ಯಾಂಕುಗಳ ಎಲ್ಲಾ ಶಾಖೆಗಳನ್ನು ವಹಿವಾಟುಗಳಿಗೆ ಮುಕ್ತವಾಗಿಡಲು ಭಾರತ ಸರ್ಕಾರ ವಿನಂತಿಸಿದೆ.
ಹೀಗಾಗಿ ಈ ಹಣಕಾಸು ವರ್ಷದ ಕೊನೆಯ ದಿನವಾದ ಮಾರ್ಚ್ 31 ಭಾನುವಾರ ಬ್ಯಾಂಕುಗಳಿಗೆ ಸಾರ್ವತ್ರಿಕ ರಜಾ ದಿನವಾದರೂ ಅಂದು ತೆರೆದಿರಬೇಕಾಗುತ್ತದೆ.
ಏಜೆನ್ಸಿ ಸರ್ಕಾರಿ ಬ್ಯಾಂಕುಗಳು
- ಬ್ಯಾಂಕ್ ಆಫ್ ಬರೋಡಾ
- ಬ್ಯಾಂಕ್ ಆಫ್ ಇಂಡಿಯಾ
- ಬ್ಯಾಂಕ್ ಆಫ್ ಮಹಾರಾಷ್ಟ್ರ
- ಕೆನರಾ ಬ್ಯಾಂಕ್
- ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ
- ಇಂಡಿಯನ್ ಬ್ಯಾಂಕ್
- ಇಂಡಿಯನ್ ಓವರ್ಸೀಸ್ ಬ್ಯಾಂಕ್
- ಪಂಜಾಬ್ ಅಂಡ್ ಸಿಂದ್ ಬ್ಯಾಂಕ್
- ಪಂಜಾಬ್ ನ್ಯಾಷನಲ್ ಬ್ಯಾಂಕ್
- ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
- ಯುಕೋ ಬ್ಯಾಂಕ್
- ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ
ಏಜೆನ್ಸಿ ಖಾಸಗಿ ಬ್ಯಾಂಕುಗಳು
- ಎಕ್ಸಿಸ್ ಬ್ಯಾಂಕ್
- ಸಿಟಿ ಯೂನಿಯನ್ ಬ್ಯಾಂಕ್
- ಡಿಸಿಬಿ ಬ್ಯಾಂಕ್
- ಫೆಡರಲ್ ಬ್ಯಾಂಕ್
- ಎಚ್ಡಿಎಫ್ಸಿ ಬ್ಯಾಂಕ್
- ಐಸಿಐಸಿಐ ಬ್ಯಾಂಕ್
- ಐಡಿಬಿಐ ಬ್ಯಾಂಕ್
- ಐಡಿಎಫ್ಸಿ ಬ್ಯಾಂಕ್
- ಇಂಡಸ್ಇಂಡ್ ಬ್ಯಾಂಕ್
- ಜಮ್ಮು ಅಂಡ್ ಕಾಶ್ಮೀರ್ ಬ್ಯಾಂಕ್
- ಕರ್ಣಾಟಕ ಬ್ಯಾಂಕ್
- ಕರೂರ್ ವೈಸ್ಯ ಬ್ಯಾಂಕ್
- ಕೋಟಕ್ ಮಹೀಂದ್ರ ಬ್ಯಾಂಕ್
- ಆರ್ಬಿಎಲ್ ಬ್ಯಾಂಕ್
- ಸೌತ್ ಇಂಡಿಯನ್ ಬ್ಯಾಂಕ್
- ಯೆಸ್ ಬ್ಯಾಂಕ್
- ಧನಲಕ್ಷ್ಮೀ ಬ್ಯಾಂಕ್
- ಬಂಧನ್ ಬ್ಯಾಂಕ್
- ಸಿಎಸ್ಬಿ ಬ್ಯಾಂಕ್
- ತಮಿಳುನಾಡ್ ಮರ್ಸಾಂಟೈಲ್ ಬ್ಯಾಂಕ್
- ಡಿಬಿಎಸ್ ಬ್ಯಾಂಕ್