ಸಾಂದರ್ಭಿಕ ಚಿತ್ರ


ಬಂಟ್ವಾಳ: ನಕಲಿ ಪರ್ಮಿಟ್ ಸ್ರಷ್ಟಿ ಮಾಡಿ ಅಕ್ರಮವಾಗಿ ಮರಳು ಸಾಗಾಟ ಮಾಡುವ ಜಾಲವನ್ನು ಬಂಟ್ವಾಳ ಗ್ರಾಮಾಂತರ ಎಸ್.ಐ. ಪ್ರಸನ್ನ ಪತ್ತೆ ಹಚ್ಚಿ ಇಬ್ಬರು ಆರೋಪಿಗಳ ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲು ಮಾಡಿದ್ದಾರೆ, ಉಳಿದ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.
ಟಿಪ್ಪರ್ ಲಾರಿ ಚಾಲಕರಾದ ಅಬುಬಕ್ಕರ್ ಸಿದ್ದೀಕ್ ಮತ್ತು ಅಬ್ದುಲ್ ಖಾದರ್ ಬಂಧಿತ ಆರೋಪಿಗಳು.
ಲಾರಿ ಮಾಲಕ ಸೇರಿದಂತೆ ಆಶ್ರಪ್, ಜಾಬೀರ್ ಈ ಪ್ರಕರಣದಲ್ಲಿ ಆರೋಪಿಗಳಾಗುವ ಸಾಧ್ಯತೆಗಳಿದ್ದು ವಿಚಾರಣೆಯ ವೇಳೆ ಇನ್ನಷ್ಟು ಮಾಹಿತಿ ಗಳು ಲಭ್ಯವಾಗುವ ಸಾಧ್ಯತೆಗಳಿದ್ದು ಇನ್ನಷ್ಟು ಆರೋಪಿಗಳ ಬಂಧನ ಸಾಧ್ಯತೆ ಇದೆ.
ಬಂಟ್ವಾಳ ಗ್ರಾಮಾಂತರ ಪೋಲೀಸರು ಫರಂಗಿಪೇಟೆ ಜಂಕ್ಸನ್ ನಲ್ಲಿ ವಾಹನ ತಪಾಸಣೆ ಮಾಡುವ ವೇಳೆ ಈ ಪ್ರಕರಣ ಬೆಳಕಿಗೆ ಬಂದಿದೆ.
ನಕಲಿ ಪರ್ಮಿಟ್ ಪ್ರಿಂಟ್ ಮಾಡಿ ಅಕ್ರಮವಾಗಿ ಮರಳು ಸಾಗಾಟ ಮಾಡುವ ದಂಧೆ ಹಲವು ಸಮಯಗಳಿಂದ ಇವರು ಮಾಡುತ್ತಿದ್ದಾರೆ ಎನ್ನಲಾಗಿದ್ದು , ಇದರ ಹಿಂದೆ ರಾಜಕೀಯ ವ್ಯಕ್ತಿಯೋರ್ವರ ಕೈ ಕೆಲಸ ಮಾಡುತ್ತಿದೆ ಎನ್ನಲಾಗಿದೆ.
ಈ ಬಗ್ಗೆ ಸೂಕ್ತ ತನಿಖೆ ನಡೆಸಿ ನಕಲಿ ದಾಖಲೆ ಪತ್ರಗಳನ್ನು ಮಾಡುವ ಜಾಗ ಮತ್ತು ಬಳಕೆ ಮಾಡುತ್ತಿದ್ಧ ಸಾಮಾಗ್ರಿಗಳನ್ನು ಪೋಲೀಸರು ಇನ್ನಷ್ಟೇ ವಶಕ್ಕೆ ಪಡೆಯಬೇಕಾಗಿದೆ.