Monday, January 26, 2026

ನೈಸರ್ಗಿಕ ವಿಪತ್ತುಗಳಿಗೆ ಮೂಲ ಕಾರಣವೆ ಅರಣ್ಯ ನಾಶ : ಮನೋಜ್ ಮಿನೇಜಸ್ 

ಬಂಟ್ವಾಳ: ನೈಸರ್ಗಿಕ ವಿಪತ್ತುಗಳಿಗೆ  ಮೂಲ ಕಾರಣವೆ ಅರಣ್ಯನಾಶ. ಜಲ ನೆಲ ಪ್ರಾಣಿ ಸಂಕುಲಗಳು ದೇವರ ಆಸ್ತಿ ಅವುಗಳನ್ನು ಸರಿಯಾಗಿ ನಡೆಸುವ ಜವಾಬ್ದಾರಿ ನಮ್ಮದು. ಪರಿಸರ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ .ಕಳೆದ 5 ವರ್ಷಗಳಿಂದ ಶ್ರೀ ಕ್ಷೇತ್ರ ಧರ್ಮಸ್ಥಳದ ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮದಡಿಯಲ್ಲಿ 7 ಕೋಟಿ ಕಾಡುಹಣ್ಣಿನ ಗಿಡಗಳನ್ನು ನೆಟ್ಟು ರಕ್ಷಣೆ ಮಾಡಲಾಗುತ್ತಿದೆ ಎಂದು ಕೃಷಿ ವಿಭಾಗದ ಪ್ರಾದೇಶಿಕ ನಿರ್ದೇಶಕರಾದ ಮನೋಜ್ ಮಿನೇಜಸ್ ಹೇಳಿದರು.

ಅವರು ಸೋಮವಾರ ಬಂಟ್ವಾಳ ತಾಲೂಕಿನ ಕೊಯಿಲ ಗ್ರಾಮದ ಬಬ್ಬರ್ಯಬೈಲು ಇಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ ರಿ.) ಬಂಟ್ವಾಳ. ಪ್ರಗತಿ ಬಂದು ಸ್ವ- ಸಹಾಯ ಸಂಘಗಳ ಒಕ್ಕೂಟ ಬಂಟ್ವಾಳ ತಾಲೂಕು, ಉಪ ಅರಣ್ಯ ಇಲಾಖೆ ಬಂಟ್ವಾಳ ತಾಲೂಕು, ಶೌರ್ಯ ವಿಪತ್ತು ನಿರ್ವಹಣಾ ಘಟಕ ಬಂಟ್ವಾಳ ತಾಲೂಕು, ಇವುಗಳ ಸಹಯೋಗದೊಂದಿಗೆ ನಡೆದ ಸಾಮಾಜಿಕ ಅರಣ್ಯೀಕರಣ ಕಾರ್ಯಕ್ರಮದಡಿಯಲ್ಲಿ ಬಬ್ಬರ್ಯ ದೈವಸ್ಥಾನದ ವಠಾರದಲ್ಲಿ ಗಿಡ ನೆಟ್ಟು ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಗಳಾದ ಶ್ರೀ ಕೃಷ್ಣ ನಾಯ್ಕ್ ಉಪವಲಯ ಅರಣ್ಯಾಧಿಕಾರಿ ಬಂಟ್ವಾಳರವರು ಮಾತನಾಡುತ್ತಾ ಪ್ರಪಂಚದಲ್ಲಿ ಜನ ಸಂಕುಲ ಉತ್ತಮ ರೀತಿಯಲ್ಲಿ ಬದುಕಬೇಕಾದರೆ 33% ಮರಗಿಡಗಳು ಬೇಕು, ಅರಣ್ಯನಿಂದ ನಮಗೆ ಹಲವಾರು ಉಪಯೋಗಗಳಿದ್ದರು ನಾವು ಅಭಿವೃದ್ಧಿ ಹೆಸರಿನಲ್ಲಿ ಅರಣ್ಯ ನಾಶ ಮಾಡುತ್ತಾ ಬಂದಿದ್ದೇವೆ, ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಮಳೆಗಳು ಆಗುತ್ತದೆ ಆದರೆ ಮಳೆಯ ಬೀಳುವ ದಿನಗಳು ಕಡಿಮೆ ಆಗುತ್ತಿದೆ ಇದು ಹೆಚ್ಚಾಗಬೇಕು ಇದಕ್ಕೆ ಅರಣ್ಯದ ಅವಶ್ಯಕತೆ ಎಂದರು.

ಈ ಸಂದರ್ಭದಲ್ಲಿ ಶೌರ್ಯ ಘಟಕ ಪ್ರತಿನಿಧಿಗಳಿಗೆ ಹಣ್ಣಿನ ಗಿಡ ವಿತರಿಸಲಾಯಿತು.

ಕಾರ್ಯಕ್ರಮದ ವೇದಿಕೆಯಲ್ಲಿ ಜನಜಾಗೃತಿ ವೇದಿಕೆ ಬಂಟ್ವಾಳ ತಾಲೂಕು ಅಧ್ಯಕ್ಷ ರೊನಾಲ್ಡ್ ಡಿಸೋಜ, ಸಿದ್ದಕಟ್ಟೆ ವಲಯ ಅಧ್ಯಕ್ಷ ಜಗದೀಶ್ ಕೊಯ್ಲ, ,ಜಿಲ್ಲಾ ನಿರ್ದೇಶಕರಾದ ದಿನೇಶ್ ಡಿ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸಂತೋಷ್ ರಾಯೀ, ಹರಿಶ್ಚಂದ್ರ ಶೆಟ್ಟಿ ಬಬ್ಬರ್ಯಬೈಲು, ರಾಧಾಕೃಷ್ಣ ಆಚಾರ್ಯ, ಹರ್ಷೇಂದ್ರ ಹೆಗ್ಡೆ, ಶೌರ್ಯ ಸಮಿತಿಯ ಮಾಸ್ಟರ್ ಪ್ರಕಾಶ್ ,ಕ್ಯಾಪ್ಟನ್ ಕೃಷ್ಣಪ್ಪ ನಾಯ್ಕ, ಪ್ರವೀಣ್ ಪೂಜಾರಿ, ಸದಾನಂದ ನಾವೂರ, ಶಶಿಧರ ಆಚಾರ್ಯ, ಶ್ರೀಮತಿ ಶಾಲಿನಿ, ಜನಜಾಗೃತಿ ಮೇಲ್ವಿಚಾರಕ ಶ್ರೀ ನಿತೇಶ್ ಕೆ ಉಪಸ್ಥಿತರಿದ್ದರು.

ಬಂಟ್ವಾಳ ತಾಲೂಕು ಯೋಜನಾಧಿಕಾರಿ ಜಯನಂದ ಪಿ ಸ್ವಾಗತಿಸಿ, ವಲಯ ಮೇಲ್ವಿಚಾರಕಿ ಹರಿಣಾಕ್ಷಿ ವಂದಿಸಿ, ತಾಲೂಕು ಕೃಷಿ ಅಧಿಕಾರಿ ಭಾಸ್ಕರ್ ಕಾರ್ಯಕ್ರಮ ನಿರೂಪಿಸಿದರು.

ಉದ್ಘಾಟನಾ ಸಭಾ ಕಾರ್ಯಕ್ರಮದ ನಂತರ ಶೌರ್ಯ ತಂಡದ ಸದಸ್ಯರಿಂದ ಗಿಡ ನಾಟಿ ಮಾಡಲಾಯಿತು

More from the blog

ವೈಭವದಿಂದ ಜರುಗಿದ ಮಡಂತ್ಯಾರು ಮಂಡಲದ ಹಿಂದು ಸಂಗಮ ಕಾರ್ಯಕ್ರಮ..

ಮಡಂತ್ಯಾರು : ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ದಿ ವರ್ಷದ ಅಂಗವಾಗಿ, ಮಡಂತ್ಯಾರು ಮಂಡಲದ ಹಿಂದು ಸಂಗಮ ಕಾರ್ಯಕ್ರಮವು ಜ. 25 ಭಾನುವಾರದಂದು ಮಡಂತ್ಯಾರಿನಲ್ಲಿ ಅತ್ಯಂತ ವೈಭವ ಮತ್ತು ಶಿಸ್ತಿನೊಂದಿಗೆ ನಡೆಯಿತು. ಸಂಜೆ ನಾಲ್ಕು ಗಂಟೆಗೆ...

ತುಳುನಾಡ ಜಾತ್ರೆ – ಶ್ರೀ ಒಡಿಯೂರು ರಥೋತ್ಸವ, ಬ್ರಹ್ಮಕಲಶೋತ್ಸವ ಹೊರೆ ಕಾಣಿಕೆ, ಉಗ್ರಾಣ ಮುಹೂರ್ತ

ವಿಟ್ಲ: ಜ.27 ಮತ್ತು 28 ರಂದು ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನದಲ್ಲಿ ನಡೆಯಲಿರುವ ತುಳುನಾಡ ಜಾತ್ರೆ -ಶ್ರೀ ಒಡಿಯೂರು ರಥೋತ್ಸವ, ಬ್ರಹ್ಮಕಲಶೋತ್ಸವ, ವಂದೇ ಮಾತರಂ ತುಳು ಸಾಹಿತ್ಯ ಸಮ್ಮೇಳನದ ಅಂಗವಾಗಿ ಹಸಿರುವಾಣಿ...

ಬಲಿಷ್ಠ ಭಾರತದ ನಿರ್ಮಾಣ ಪ್ರತಿಯೊಬ್ಬರ ಜವಾಬ್ದಾರಿ : ತಹಶೀಲ್ದಾರ್ ಜಿ. ಮಂಜುನಾಥ್

ಬಂಟ್ವಾಳ : ಬಲಿಷ್ಠ ಭಾರತದ ನಿರ್ಮಾಣ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಎಲ್ಲರನ್ನು ಒಳಗೊಂಡ ಸಮೃದ್ಧ ಭಾರತವನ್ನು ಸಂವಿಧಾನದ ಶಕ್ತಿಯಜೊತೆ ನಿರ್ಮಿಸೋಣ ಎಂದು ತಾಲೂಕು ದಂಡಾಧಿಕಾರಿ ಹಾಗೂ ತಹಶೀಲ್ದಾರ್ ಜಿ ಮಂಜುನಾಥ್ ಹೇಳಿದರು. ಬಂಟ್ವಾಳ ತಾಲೂಕು ರಾಷ್ಟ್ರೀಯ...

ಸುಭದ್ರ ಜಾತ್ಯತೀತ ಹಿಂದು ಸಮಾಜ ನಿರ್ಮಾಣವಾಗಬೇಕು – ವಜ್ರದೇಹಿ ಶ್ರೀ

ವಿಟ್ಲ: ಹಿಂದು ಸಮಾಜ ಪ್ರಸಕ್ತ ಪರಿಸ್ಥಿತಿಯಲ್ಲೂ ಎಚ್ಚೆತ್ತುಕೊಳ್ಳದಿದ್ದರೆ ಹಿಂದುಗಳು ಗಂಡಾಂತರ ಪರಿಸ್ಥಿತಿಯನ್ನು ಎದುರಿಸಬೇಕಾಗಬಹುದು. ಜಾತಿ ಸಮುದಾಯಗಳು ಒಟ್ಟಾಗಿ ಸುಭದ್ರ ಜಾತ್ಯತೀತ ಹಿಂದು ಸಮಾಜ ನಿರ್ಮಾಣವಾಗಬೇಕು. ಹೀಗಾದಾಗ ಮಾತ್ರ ರಾಜಕೀಯ ಷಡ್ಯಂತ್ರಗಳನ್ನು ಮೆಟ್ಟಿ ಮುನ್ನಡೆಯ...