ಬಂಟ್ವಾಳ: ಬಂಟ್ವಾಳ ತಾಲೂಕು ಇರ್ವತ್ತೂರು ಗ್ರಾಮದ ಮಣ್ಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವವು ಬ್ರಹ್ಮಶ್ರೀ ನಡ್ವಂತಾಡಿ ಬಾಲಕೃಷ್ಣ ಪಾಂಗಣ್ಣಾಯ ಅವರ ನೇತೃತ್ವದಲ್ಲಿ ವಿವಿಧ ವೈದಿಕ, ಧಾರ್ಮಿಕ,ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಮಾ.16ರಂದು ನಡೆಯಲಿದೆ.

ಬೆಳಗ್ಗೆ ದ್ವಾದಶ ನಾರಿಕೇಳ ಯಾಗ,ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಯಕ್ಷ ದಾಸ ಸಾಹಿತ್ಯ ಕಾರ್ಯಕ್ರಮ, ನಾಗಬನದಲ್ಲಿ ನಾಗತಂಬಿಲ, ಸಂಜೆ ದೈವಗಳಿಗೆ ಪರ್ವ, ಶ್ರೀ ರಂಗಪೂಜೆ, ದೇವರ ಬಲಿ ಉತ್ಸವ, ಕಟ್ಟೆಪೂಜೆ, ರಾತ್ರಿ ತಾಂಬೂಲ ಕಲಾವಿದರಿಂದ ಸಂಕಲೆ ತುಳು ನಾಟಕ ಪ್ರದರ್ಶನವಿದೆ. ಮಾ.17ರಂದು ಬೆಳಗ್ಗೆ ಸಂಪ್ರೋಕ್ಷಣೆ, ಮಹಾ ಮಂತ್ರಾಕ್ಷತೆ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ಎಂ.ನಾರಾಯಣ ಆಚಾರ್ಯ ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.