ಬಂಟ್ವಾಳ: ಬಂಟ್ವಾಳ ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವತಿಯಿಂದ ನಬಾರ್ಡ್ ಯೋಜನೆಯಡಿ 25ಲಕ್ಷ ರೂ. ಅನುದಾನದಲ್ಲಿ ಮಣಿನಾಲ್ಕೂರುವಿನಲ್ಲಿ ಸಂತೆ ಮಾರುಕಟ್ಟೆ ಕಟ್ಟಡಕ್ಕೆ ಶಿಲಾನ್ಯಾಸ ಕಾರ್ಯಕ್ರಮ ಗುರುವಾರ ಜರಗಿತು.
ಬಂಟ್ವಾಳ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಕೆ. ಪದ್ಮನಾಭ ರೈ ಅವರು ಶಿಲಾನ್ಯಾಸ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾರುಕಟ್ಟೆ ಸಮಿತಿ ಉಪಾಧ್ಯಕ್ಷ ಚಂದ್ರಶೇಖರ ಕೋರ್ಯ, ಸದಸ್ಯರಾದ ಚಂದ್ರಶೇಖರ ರೈ, ಹರಿಶ್ಚಂದ್ರ ಪೂಜಾರಿ, ಕಾಂಚಲಾಕ್ಷಿ, ಅಲೋನ್ಸ್ ಮೆನೆಜಸ್, ತಾ.ಪಂ.ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಸಂಪತ್ ಕುಮಾರ್ ಶೆಟ್ಟಿ, ಎಪಿಎಂಸಿ ಕಾರ್ಯದರ್ಶಿ ಭಾರತಿ ಎಸ್., ಶಮಂತ್ ಕುಮಾರ್, ಮಣಿನಾಲ್ಕೂರು ಗ್ರಾ.ಪಂ.ಅಧ್ಯಕ್ಷೆ ಗೀತಾ ಶ್ರೀಧರ ಪೂಜಾರಿ, ಉಪಾಧ್ಯಕ್ಷ ದಿನೇಶ್, ಸದಸ್ಯರಾದ ಆದಂ ಕುಂಞ, ಡೆನ್ನಿಸ್ ಮೊರಾಸ್, ಪದ್ಮಾವತಿ, ಯಶೋದಾ, ಪ್ರಮುಖರಾದ ಉಮೇಶ್ ಆಳ್ವ ಕೊಟ್ರಿಂಜ, ಬಾಲಕೃಷ್ಣ ಪೂಜಾರಿ, ಪುರುಷೋತ್ತಮ ಪೂಜಾರಿ ಮಜಲು, ರಿಚಾರ್ಡ್ ಡಿಸೋಜ ಸರಪಾಡಿ, ಪೂವಪ್ಪ ಪೂಜಾರಿ, ಯೋಗೀಶ್ ಶೆಟ್ಟಿ ಆರುಮುಡಿ, ಸಂಜೀವ ಗಂಡಿ, ಹೈದರ್ ಅಜಿಲಮೊಗರು ಉಪಸ್ಥಿತರಿದ್ದರು.
