ಬಂಟ್ವಾಳ: ಬಂಟ್ವಾಳ ತಾಲೂಕು ಮಣಿನಾಲ್ಕೂರು ಗ್ರಾಮದ ಮಣಿನಾಲ್ಕೂರು ಸೇವಾ ಸಹಕಾರ ಸಂಘ, ಸರಪಾಡಿ ಇದರ ಆಡಳಿತ ಮಂಡಳಿಗೆ ಮುಂದಿನ ಐದು ವರ್ಷದ ಅವಧಿಗೆ ನೂತನ ಅಧ್ಯಕ್ಷರಾಗಿ ರಾಧಾಕೃಷ್ಣ ಮಯ್ಯ ಹಾಗೂ ಉಪಾಧ್ಯಕ್ಷರಾಗಿ ವಿಶ್ವನಾಥ ನಾಯ್ಕ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮಂಗಳವಾರ ಸಂಘದ ಕಚೇರಿಯಲ್ಲಿ ನೂತನ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆದಿದ್ದು, ರಿಟರ್ನಿಂಗ್ ಅಧಿಕಾರಿ ತ್ರಿವೇಣಿ ರಾವ್ ಕೆ. ಅವರು ಈ ಆಯ್ಕೆ ಪ್ರಕ್ರಿಯೆ ನಡೆಸಿದರು.
ಈ ಸಂದರ್ಭದಲ್ಲಿ ನೂತನ ನಿರ್ದೇಶಕರಾದ ಗೋಪಾಲ ಶೆಟ್ಟಿ, ಎನ್. ಧನಂಜಯ ಶೆಟ್ಟಿ, ಜೋಕಿಂ ಪಿಂಟೊ, ಕೃಷ್ಣಪ್ಪ, ನಾಣ್ಯಪ್ಪ ಪೂಜಾರಿ, ತಿಲಕ್ ಬಂಗೇರ, ದಯಾನಂದ ಶೆಟ್ಟಿ, ಪ್ರೇಮಾ ವಿ. ಆಳ್ವ, ವಸಂತಿ, ನಿಶಾಂತ್ ಕುಮಾರ್ ಶೆಟ್ಟಿ ಗಿರಿಧರ ಮಠದಬೆಟ್ಟು ಅವರು ಉಪಸ್ಥಿತರಿದ್ದರು. ಬ್ಯಾಂಕಿನ ಕಾರ್ಯ ನಿರ್ವಹಣಾಧಿಕಾರಿ ಸುಧಾಕರ ಶೆಟ್ಟಿ ಹಾಗೂ ಸಿಬಂದಿಗಳು ಸಹಕರಿಸಿದರು.
ಒಟ್ಟು 13 ಸ್ಥಾನಗಳಲ್ಲಿ ಒಂದು ಸ್ಥಾನಕ್ಕೆ ಅವಿರೋಧ ಆಯ್ಕೆಯಾಗಿದ್ದು, ಉಳಿದ 12 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಸಹಕಾರಿ ಧುರೀಣ ದಿ. ಸರಪಾಡಿ ಎನ್. ಸುಬ್ಬಣ್ಣ ಶೆಟ್ಟಿ ಅವರ ಅಭಿಮಾನ ಬಳಗದ, ಎನ್. ಧನಂಜಯ ಶೆಟ್ಟಿ ನಾಡಬೆಟ್ಟು ಅವರ ನೇತೃತ್ವದ ಬಿಜೆಪಿ ಬೆಂಬಲಿತ ಸ್ಪರ್ಧಿಗಳು ಎಲ್ಲ 12 ಸ್ಥಾನದಲ್ಲಿ ಜಯಗಳಿಸಿದ್ದು, ಆಡಳಿತ ಮಂಡಳಿಗೆ ಆಯ್ಕೆಯಾಗಿದ್ದರು. ರಾದಧಾಕೃಷ್ಣ ಮಯ್ಯ ಅವರು ಸತತ ಎರಡನೇ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.


