ಬಂಟ್ವಾಳ: ಅಕಸ್ಮಿಕವಾಗಿ ಬೆಂಕಿ ತಗುಲಿ ಪ್ಯಾನ್ಸಿ ಅಂಗಡಿಯೊಂದು ಬೆಂಕಿಗೆ ಅಹುತಿಯಾಗಿ ನಷ್ಟ ಸಂಭವಿಸಿದ ಘಟನೆ ಇಂದು ಬೆಳಿಗ್ಗೆ ಮಾಣಿಯಲ್ಲಿ ನಡೆದಿದೆ.

ಧರ್ಣಪ್ಪ ಬರಿಮಾರು ಎಂಬವರ ಪ್ಯಾನ್ಸಿ ಅಂಗಡಿ ಬೆಂಕಿಗೆ ಅಹುತಿಯಾಗಿ ಸುಮಾರು ಒಂದು ಲಕ್ಷ ನಷ್ಟ ಸಂಭವಿಸಿದೆ .
ಮಾಣಿ ಜಂಕ್ಷನ್ ನಲ್ಲಿರುವ ಪ್ಯಾನ್ಸಿ ಅಂಗಡಿಗೆ ಇಂದು ಬೆಳಿಗ್ಗೆ ಸುಮಾರು 11 ಗಂಟೆಯ ವೇಳೆ ಆಕಸ್ಮಿಕವಾಗಿ ಬೆಂಕಿ ತಗಲಿದೆ.
ಅಂಗಡಿಗೆ ವಿದ್ಯುತ್ ಸಂಪರ್ಕ ಕೂಡಾ ಇಲ್ಲ . ಆದರೆ ಯಾವ ರೀತಿಯ ಲ್ಲಿ ಬೆಂಕಿ ತಗುಲಿದೆ ಎಂಬುದು ಇನ್ನೂ ಅಸ್ಪಷ್ಟ ವಾಗಿದೆ.
ಅಂಗಡಿ ಮಾಲಕ ಧರ್ಣಪ್ಪ ಅವರು ಸಾಮಾನು ತರಲೆಂದು ಪುತ್ತೂರು ಕಡೆಗೆ ಹೋಗಿದ್ದರು.
ಇವರು ವಾಪಾಸು ಬರುವ ವೇಳೆ ಅಂಗಡಿ ಬೆಂಕಿಗೆ ಅಹುತಿಯಾಗಿದೆ.
ಸ್ಥಳಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಅವರು ಬೇಟಿ ನೀಡಿದ್ದಾರೆ.
ವಿಟ್ಲ ಠಾಣಾ ಪೋಲೀಸರು ಸ್ಥಳ ಕ್ಕೆ ಅಗಮಿಸಿ ಪರಿಶೀಲನೆ ನಡೆಸಿದ್ದಾರೆ.