ಮಂಗಳೂರು: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಶಾಂತಿ ಕಾಪಾಡುವ ಉದ್ದೇಶದಿಂದ ಮಂಗಳೂರು ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ ಮತ್ತೆ 13 ಮಂದಿ ಅಪರಾಧ ಹಿನ್ನೆಲೆಯವರನ್ನು ಗಡೀಪಾರು ಮಾಡಿ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಬೋಳಾರದ ಜ್ಞಾನೇಶ್ ನಾಯಕ್, ಕುದ್ರೋಳಿಯ ಫಹಾದ್, ಉಳ್ಳಾಲ ಮೊಗವೀರ ಪಟ್ಣದ ಧನುಷ್ ಆಲಿಯಾಸ್ ರಮಿತ್ ರಾಜ್, ಕಾವೂರಿನ ಮೊಹಮ್ಮದ್ ಸುಹೇಬ್, ಮೂಡುಶೆಡ್ಡೆಯ ದೀಪಕ್ ಆಲಿಯಾಸ್ ದೀಪು, ಕಾಟಿಪಳ್ಳ ಕೃಷ್ಣಾಪುರದ ಸಾಹಿಲ್ ಇಸ್ಮಾಯಿಲ್, ಉಳ್ಳಾಲ ಬಸ್ತಿಪಡು³ವಿನ ಮೊಹಮ್ಮದ್ ಶಕೀರ್, ಉಳ್ಳಾಲ ಮೇಲಂಗಡಿಯ ಇಬ್ರಾಹಿಂ ಖಲೀಲ್, ಕುದ್ರೋಳಿಯ ಧನುಷ್, ಬಜಾಲ್ ನಂತೂರಿನ ನೌಫಾಲ್ ಆಲಿಯಾಸ್ ಟೊಪ್ಪಿ ನೌಫಾಲ್, ಮರೋಳಿಯ ಹವಿತ್ ಪೂಜಾರಿ, ಅರ್ಕುಳದ ಕೌಶಿಕ್ ನಿಹಾಲ್ ಮತ್ತು ಬೆಳುವಾಯಿಯ ಸಂತೋಷ್ ಶೆಟ್ಟಿ ಅವರನ್ನು ಗಡೀಪಾರು ಮಾಡಲಾಗಿದೆ.
ಚುನಾವಣೆ ಹಿನ್ನೆಲೆಯಲ್ಲಿ ಇದುವರೆಗೆ ಒಟ್ಟು 51 ಮಂದಿಯನ್ನು ಗಡೀಪಾರು ಮಾಡಿದಂತಾಗಿದೆ.