ಬಂಟ್ವಾಳ: ಮಂಗಳೂರು ವೈದ್ಯರಿಗೂ ಕೋರೋನಾ ಪಾಸಿಟಿವ್. ಮಂಗಳೂರಿನ 5 ಪಿ.ಜಿ. ವೈದ್ಯರಿಗೆ ಕೊರೋನಾ ಧೃಡ. ಕೋವಿಡ್ ಆಸ್ಪತ್ರೆ, ಲೇಡಿಗೋಷನ್, ಕೆ.ಎಂ.ಸಿ. ಆಸ್ಪತ್ರೆಗಳಲ್ಲಿ ಕೆಲಸ ಮಾಡುತ್ತಿದ್ದ 5 ಜನರಿಗೆ ಕೊರೊನಾ ಸೋಂಕು ತಗುಲಿದ್ದು, 30 ಜನ ವೈಧ್ಯಕೀಯ ಸಿಬ್ಬಂದಿಗಳನ್ನು ಕ್ವಾರಂಟೈನ್ ಮಾಡಲಾಗಿದೆ.

28 ವರ್ಷದ ವೈದ್ಯ, 28 ವರ್ಷದ ಇಬ್ಬರು ವೈದ್ಯೆಯರು, 27 ವರ್ಷದ ಇಬ್ಬರು ವೈದ್ಯೆಯರಿಗೆ ಸೋಂಕು ದೃಢಪಟ್ಟಿದೆ. ಪಾಸಿಟಿವ್ ಬಂದ ಎಲ್ಲಾ ವೈದ್ಯರು ನಗರದ ಖಾಸಗಿ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದವರು ಎಂದು ತಿಳಿದು ಬಂದಿದೆ. ನಗರದ ಫ್ಲ್ಯಾಟ್ ಒಂದರ ವೈದ್ಯರಿಗೆ ಪಾಸಿಟಿವ್ ಹಿನ್ನಲೆ, ಫ್ಲ್ಯಾಟ್ ಸೀಲ್‌ಡೌನ್‌ಗೆ ಸಿದ್ದತೆ ನಡೆಸಲಾಗುತ್ತಿದ್ದು, ಈ ಬಗ್ಗೆ ಜಿಲ್ಲಾಡಳಿತದಿಂದ ಅಧಿಕೃತ ಮಾಹಿತಿ ಇನ್ನಷ್ಟೇ ಬರಬೇಕಿದೆ.

