ಮಂಗಳೂರು: ಬಜರಂಗದಳ ಕಾರ್ಯಕರ್ತನ ಮೇಲೆ ಗೂಂಡಾ ಕಾಯ್ದೆ ಹಾಕಿ ಗಡಿಪಾರು ಆದೇಶಿಸಿದ ಪೊಲೀಸ್ ಇಲಾಖೆ ಕ್ರಮದ ವಿರುದ್ಧ ವಿಶ್ವ ಹಿಂದು ಪರಿಷತ್, ಬಜರಂಗದಳ ತೀವ್ರ ಆಕ್ರೋಶ ಹೊರ ಹಾಕಿದೆ

ಕಾರ್ಯಕರ್ತ ಜಯ ಪ್ರಶಾಂತ್ ನ ಗಡಿಪಾರು ಮಾಡಿ ಆದೇಶ ಹೊರಡಿಸಿರುವ ಕುರಿತು ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯೆ ನೀಡಿರುವ ಬಜರಂಗದಳ ಮುಖಂಡ ಶಿವಾನಂದ ಮೆಂಡನ್ ಅವರು, ‘ಗಾಂಜಾ ಕೇಸಲ್ಲೋ, ಹುಡುಗಿ ಕೇಸಲ್ಲೋ, ಕೊಲೆ ಕೇಸಿನಲ್ಲೋ ಇಲ್ಲದ ಕಾರ್ಯಕರ್ತ ಕೇವಲ ಹಿಂದೂಗಳಿಗಾಗಿ, ದನ ಕಳ್ಳ ಸಾಗಾಟ ತಡೆದದ್ದು, ಮುಸ್ಲಿಮರಿಂದ ಹುಡುಗಿಯರ ರಕ್ಷಣೆ ಮಾಡಿದ್ದೇ ತಪ್ಪಾ…? ಎಂದು ಪ್ರಶ್ನಿಸಿ ಆಕ್ರೋಶ ಹೊರ ಹಾಕಿದ್ದಾರೆ.
ಜಿಲ್ಲೆಯಲ್ಲಿ ಮೊದಲ ಬಾರಿಗೆ ಬಜರಂಗದಳ ಕಾರ್ಯಕರ್ತನ ಮೇಲೆ ಗೂಂಡಾ ಕಾಯ್ದೆ ಪ್ರಕರಣ ವಿಧಿಸಲಾಗಿದೆ. ಇದು ರಾಜ್ಯ ಸರಕಾರದ ದಮನಕಾರಿ ನೀತಿಗೆ ನಿದರ್ಶನ ಇದರ ವಿರುದ್ಧ ಕಾನೂನು ಹೋರಾಟ, ಅಗತ್ಯವಿದ್ದರೆ ಬೀದಿಗಿಳಿದು ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.