ಮಂಗಳೂರು: ಮಂಗಳೂರಿನ ವಿಮಾನ ನಿಲ್ದಾಣವನ್ನು ಮಾದರಿ ವಿಮಾನ ನಿಲ್ದಾಣವನ್ನಾಗಿ ಮಾಡುವ ಸಲುವಾಗಿ ಉಡನ್ ಯೋಜನೆಯಡಿ ಸೇರಿಸಲು ವಿಮಾನ ಸೇವೆ ಆಗ್ರಹಿಸಿ ಟ್ವಿಟರ್ ಅಭಿಯಾನ ಕೈಗೊಂಡಿದ್ದು, ಅಕ್ಟೋಬರ್ 4 ರಂದು ದಿನವೀಡಿ ಈ ಟ್ವಿಟರ್ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.


ಈ ಉಡಾನ್ ಯೋಜನೆಯಡಿಯಲ್ಲಿ ಬೆಳಗಾವಿ ವಿಮಾನ ನಿಲ್ದಾಣವು ಅನೇಕ ಸ್ಥಳಗಳಿಂದ ಬರುವ ವಿಮಾನಗಳು ದೊರಕಿರುವುದರಿಂದಾಗಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಪೈಪೋಟಿಯನ್ನು ನೀಡುತ್ತಿದೆ. ಹಾಗೂ ಬೆಳಗಾವಿಯು ಮಂಗಳೂರನ್ನು ಹಿಂದಿಕ್ಕಿ ಮುಂಚೂಣಿಯಲ್ಲಿದೆ.
ಉಡಾನ್ ಯೋಜನೆಯಡಿ ವಿಮಾನ ಸೇವೆ ಆರಂಭಿಸಲು #FlyfromIXE ಎಂಬ ಹ್ಯಾಶ್ ಟ್ಯಾಗ್ ನೊಂದಿಗೆ ಟ್ವಿಟರ್ ಅಭಿಯಾನ ಆರಂಭಗೊಂಡಿದ್ದು,ಈ ಅಭಿಯಾನಕ್ಕ 10 ಸಾವಿರಕ್ಕೂ ಹೆಚ್ಚು ಜನರಿಂದ ಟ್ವೀಟ್ ಆಗಿರುತ್ತಿದೆ. ಹಾಗೂ ರಾಜಕೀಯ ವ್ಯಕ್ತಿಯಾಗಿರುವ ಪ್ರಮೋದ್ ಮಧ್ವರಾಜ್ ಅವರು ಈ ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ.
ಈ ಟ್ವಿಟರ್ ಅಭಿಯಾನದಲ್ಲಿ ಮಂಗಳೂರಿಗೆ ಹೆಚ್ಚಿನ ವಿಮಾನ ಸೇವೆ ಆರಂಭಿಸುವ ಸಲುವಾಗಿ ಯೋಜನೆ ಹಾಕಿದ್ದು, ಕಳೆದ ಬಾರಿ ಲಾಕ್ ಡೌನ್ ವೇಳೆ ವಂದೇ ಭಾರತ್ ಮಿಷನ್ ಅಡಿ ಕೇರಳಕ್ಕೆ ಕೊಲ್ಲಿ ದೇಶಗಳಿಂದ ಅನೇಕ ವಿಮಾನಗಳು ಬಂದಿದ್ದು ಆದರೆ ಕೇವಲ 50 ವಿಮಾನಗಳು ಮಂಗಳೂರಿಗೆ ಬಂದಿದ್ದವು. ಇದೀಗ ವಿಮಾನ ಸೇವೆ ಭಾರತದ ಹಾಗೂ ಬೇರೆ ಬೇರೆ ದೇಶಗಳಿಂದ ಬರುವವರಿಗೆ ಸೇವೆ ಒದಗಿಸುವ ಸಲುವಾಗಿ ಈ ಎಲ್ಲಾ ಅಂಶಗಳನ್ನು ಟ್ವಿಟರ್ ಅಭಿಯಾನದಲ್ಲಿ ತಿಳಿಸಲಾಗಿದೆ












