Sunday, February 1, 2026

ವೈಕುಂಠ ಸಮಾರಾಧನೆ ವೇಳೆಯಲ್ಲೇ ಮೃತ ವ್ಯಕ್ತಿ ಪ್ರತ್ಯಕ್ಷ.!

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಎಂಬ ಗ್ರಾಮದಲ್ಲಿ ಮೃತಪಟ್ಟ ವ್ಯಕ್ತಿಯ ಸಮಾರಾಧನೆ ವೇಳೆಯಲ್ಲಿ ಅದೇ ವ್ಯಕ್ತಿ ಪ್ರತ್ಯಕ್ಷನಾದ ಅಚ್ಚರಿಯ ಘಟನೆ ನಡೆದಿದೆ.

ಮನೆಯವರು ಮೃತಪಟ್ಟಿದ್ದಾನೆ ಎಂದು ತಿಳಿದಿದ್ದ ವ್ಯಕ್ತಿ ಅಸಲಿಗೆ ಮೃತಪಟ್ಟಿರಲಿಲ್ಲ. ಶ್ರೀನಿವಾಸ ಎಂಬ ವ್ಯಕ್ತಿ ಜನವರಿ 26 ರಂದು ನಾಪತ್ತೆಯಾಗಿದ್ದರು. ಫೆಬ್ರವರಿ 3 ರಂದು ಕಲ್ಲುಂಜಕೆರೆಯಲ್ಲಿ ಕೊಳೆತ ಸ್ಥಿತಿಯಲ್ಲಿದ್ದ ಅನಾಥ ಶವ ಪತ್ತೆಯಾಗಿದ್ದು, ಶ್ರೀನಿವಾಸ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಕುಟುಂಬದವರು ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ.

10 ದಿನ ಕಳೆದರೂ ಶ್ರೀನಿವಾಸ ಮರಳಿ ಬಾರದ ಕಾರಣ ಮನೆಯವರು ವೈಕುಂಠ ಸಮಾರಾಧನೆ ನಡೆಸಿದ್ದಾರೆ. ವೈಕುಂಠ ಸಮಾರಾಧನೆ ನಡೆಯುವ ವೇಳೆಯಲ್ಲಿ ಶ್ರೀನಿವಾಸ ಮನೆಗೆ ಮರಳಿದ್ದಾನೆ ಎಂದು ಹೇಳಲಾಗಿದೆ.

More from the blog

ಫೆ.3 ಮತ್ತು 17ರಂದು ಪಣೋಲಿಬೈಲು ಕ್ಷೇತ್ರದಲ್ಲಿ ಅಗೇಲು ಸೇವೆ ಇಲ್ಲ 

ಬಂಟ್ವಾಳ : ತಾಲೂಕಿನ ಸಜೀಪಮೂಡ ಗ್ರಾಮದ ಕಾರಣಿಕ ಕ್ಷೇತ್ರ ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ಫೆಬ್ರವರಿ ತಿಂಗಳಿನಲ್ಲಿ ತಾ03 ಮತ್ತು17ರಂದು ಅಗೆಲು ಸೇವೆ ಇರುವುದಿಲ್ಲ ಉಳಿದ ಆದಿತ್ಯವಾರ ಮಂಗಳವಾರ ಶುಕ್ರವಾರ ಅಗೇಲು ಸೇವೆ...

ಬಂಟ್ವಾಳ ತಾಲೂಕು ಪಿಂಚಣಿದಾರರ ಸಂಘ : ಮಹಾಸಭೆ, ನೂತನ ಪದಾಧಿಕಾರಿಗಳ ಆಯ್ಕೆ 

ಬಂಟ್ವಾಳ : ಬಂಟ್ವಾಳ ತಾಲೂಕು ಪಿಂಚಣಿದಾರರ ಸಂಘ ಇದರ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಬಿ.ಸಿ.ರೋಡ್ ಸರಕಾರಿ ನೌಕರರ ಭವನದಲ್ಲಿ ಸಂಘದ ಕಾರ್ಯಕಾರಿ ಸಮಿತಿ ಅಧ್ಯಕ್ಷ ಪಿ .ಲೋಕನಾಥ ಶೆಟ್ಟಿ ಇವರ...

ಬಿ.ವಿ. ಕಾರಂತ ನೆನಪಿನ ಮಂಚಿ ನಾಟಕೋತ್ಸವ..

ಬಂಟ್ವಾಳ : ಬಿ ವಿ ಕಾರಂತ ರಂಗ ಭೂಮಿಕಾ ಟ್ರಸ್ಟ್ ವತಿಯಿಂದ ಬಿ.ವಿ. ಕಾರಂತ ನೆನಪಿನ ಮಂಚಿ ನಾಟಕೋತ್ಸವ ಮಂಚಿ ಕುಕ್ಕಾಜೆಯ ಸಿದ್ಧಿ ವಿನಾಯಕ ಭಜನಾ ಮಂದಿರದ ಸಭಾಂಗಣದಲ್ಲಿ ನಡೆಯಿತು. ಎರಡು ದಿವಸಗಳ ಈ...

ಸಾರಿಗೆ ಬಸ್‌ಗಳ ಮೇಲೆ, ನಿಲ್ದಾಣದಲ್ಲಿ ತಂಬಾಕು ಜಾಹೀರಾತು ತೆರವಿಗೆ ಸಚಿವ ರಾಮಲಿಂಗಾರೆಡ್ಡಿ ಸೂಚನೆ

ಬೆಂಗಳೂರು: ಸಾರಿಗೆ ಬಸ್, ಬಸ್ ನಿಲ್ದಾಣಗಳಲ್ಲಿ ತಂಬಾಕು ಉತ್ಪನ್ನಗಳ ಜಾಹೀರಾತುಗಳನ್ನು ಪ್ರದರ್ಶಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಿ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಮಹತ್ವದ ಆದೇಶ ಹೊರಡಿಸಿದ್ದಾರೆ. ಸಾರ್ವಜನಿಕರ ಹಿತದೃಷ್ಟಿಯಿಂದ ಈ ಕೂಡಲೇ ಜಾರಿಗೆ ಬರುವಂತೆ ಸಾರಿಗೆ...