Tuesday, January 27, 2026

ಮಂಗಳೂರು ಸಿಸಿಬಿ ಇನ್ಸ್‌ಪೆಕ್ಟರ್‌ ದಿಢೀರ್‌ ವರ್ಗಾವಣೆ

ಮಂಗಳೂರು: ಡ್ರಗ್ಸ್ ಪ್ರಕರಣ ದಿನಕ್ಕೊಂದು ಹೊಸ ತಿರುವು ಪಡೆದುಕೊಳ್ಳಿತ್ತಿದ್ದ ಸಂದರ್ಭದಲ್ಲಿ ಡ್ರಗ್ಸ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿದ್ದ ಮಂಗಳೂರು ಸಿಸಿಬಿ ಇನ್ಸ್‌ಪೆಕ್ಟರ್‌ ಶಿವಪ್ರಕಾಶ್ ನಾಯ್ಕ್ ದಿಢೀರ್‌ ವರ್ಗಾವಣೆ ಆಗಿದ್ದಾರೆ.
ಶಿವಪ್ರಕಾಶ್ ನಾಯ್ಕ್ ಅವರನ್ನು ವರ್ಗಾವಣೆ ಮಾಡಿದ್ದು ಅವರ ಜಾಗಕ್ಕೆ ಉಡುಪಿಯ ಕಾಪು ಠಾಣೆಯ ಸಿಐ ಆಗಿದ್ದ ಮಹೇಶ್ ಪ್ರಸಾದ್ ನೇಮಕವಾಗಿದ್ದಾರೆ. ಡ್ರಗ್ ಪೆಡ್ಲರ್ ಕಿಶೋರ್‌ನನ್ನು ಬಂಧಿಸಿದ್ದಕ್ಕೆ ಸಿಸಿಬಿ ಇನ್ಸ್‌ಪೆಕ್ಟರ್‌ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂಬ ಅನುಮಾನ ಕಾಡುತ್ತಿದೆ.
ಕಿಶೋರ್ ಶೆಟ್ಟಿಯನ್ನು ಪ್ರಕರಣದಿಂದ ಕೈಬಿಡಲು ಶಿವಪ್ರಕಾಶ್‌ ಮೇಲೆ ಒತ್ತಡ ಬಂದಿತ್ತು. ಕರಾವಳಿಯ ಪ್ರಭಾವಿ ಶಾಸಕರು ಬಂಧಿಸದಂತೆ ಒತ್ತಡ ಹೇರಿದ್ದರು ಎಂಬ ವಿಚಾರಗಳು ಮೂಲಗಳಿಂದ ತಿಳಿದು ಬಂದಿತ್ತು. ರಾಜಕಾರಣಿಯ ಒತ್ತಡಕ್ಕೆ ಮಣಿಯದೇ ಕಿಶೋರ್‌ನನ್ನು ಶಿವಪ್ರಕಾಶ್ ನಾಯ್ಕ್ ಬಂಧಿಸಿದ್ದರು. ಈ ಕಾರಣಕ್ಕೆ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂಬ ಮತು ಮಂಗಳೂರು ಪೊಲೀಸ್‌ ವಲಯದಿಂದ ಕೇಳಿ ಬರುತ್ತಿದೆ. ನಿರೂಪಕಿ ಅನುಶ್ರೀ ಹೆಸರು ಹೇಳಿದ್ದ ಡ್ಯಾನ್ಸರ್ ಕಿಶೋರ್ ರಕ್ಷಣೆಗೆ ಭಾರೀ ಒತ್ತಡ ಹೇರಲಾಗುತ್ತಿದೆ ಎಂಬ ಮಾಹಿತಿ ಸಿಕ್ಕಿತ್ತು. ಡ್ಯಾನ್ಸರ್ ಕಿಶೋರ್ ಅರೆಸ್ಟ್ ಆದ ದಿನವೇ ದೊಡ್ಡ ಲಾಬಿ ನಡೆದಿತ್ತು. ಪ್ರಕರಣದಿಂದ ಕಿಶೋರ್‌ನನ್ನು ಕೈ ಬಿಡುವಂತೆ ಕರಾವಳಿಯ ಶಾಸಕರೊಬ್ಬರು ಒತ್ತಡ ಹೇರುತ್ತಿದ್ದಾರೆ ಎಂಬ ಮಾಹಿತಿ ಇದೆ.

More from the blog

ಕಟೀಲು 7 ಮೇಳಗಳ ಜ.27ರ ಸೇವೆಯಾಟಗಳ ವಿವರ ಇಲ್ಲಿದೆ..

ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇದರ 7 ಮೇಳಗಳ ಜ.27ರ ಸೇವೆಯಾಟಗಳ ವಿವರ ಈ ಕೆಳಗಿನಂತಿವೆ.. ಜ.27ರ ಸೇವೆಯಾಟಗಳ ವಿವರ : ಆಡಳಿತ ಮಂಡಳಿ, ಶ್ರೀ ಮಹಾಗಣಪತಿ ದೇವಸ್ಥಾನ,...

ತುಂಬೆಯಲ್ಲಿ ಪ್ರಸಕ್ತ ವರ್ಷ ನಿವೃತ್ತರಾಗುವವರಿಗೆ ಅಭಿನಂದನಾ ಸಮಾರಂಭ 

ಬಂಟ್ವಾಳ : ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದವರನ್ನು ಗೌರವಿಸಬೇಕಾದ್ದು ಅಗತ್ಯ. ಅವರ ಅರ್ಪಣಾ ಮನೋಭಾವ, ಶಿಸ್ತುಬದ್ಧ ಸೇವೆ, ವಿದ್ಯಾರ್ಥಿಗಳು ಮತ್ತು ಸಂಸ್ಥೆಯ ಏಳಿಗೆಗಾಗಿ ವಹಿಸಿದ ಪಾತ್ರ ಮತ್ತು ಕೊಡುಗೆಗಳನ್ನು ಸದಾ ಸ್ಮರಿಸಬೇಕು. ಈ ನಿಟ್ಟಿನಲ್ಲಿ...

Bantwal : ಕೃಷಿ ಭೂಮಿ, ಕೊರಗ ಸಮುದಾಯ ಭವನಕ್ಕೆ ಭೂಮಿ ಮಂಜೂರಾತಿ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ

ಬಂಟ್ವಾಳ: ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟ (ರಿ.) ಕರ್ನಾಟಕ ಕೇರಳ, ಕೊರಗ ಅಭಿವೃದ್ಧಿ ಸಂಘ ಬಂಟ್ವಾಳ ತಾಲೂಕು ಇವರ ಜಂಟಿ ಆಶ್ರಯದಲ್ಲಿ ಕೃಷಿ ಭೂಮಿ ಮಂಜೂರಾತಿ, ಹಾಗೂ ಕೊರಗ ಸಮುದಾಯ ಭವನ ನಿರ್ಮಾಣಕ್ಕೆ...

Bantwal : ರಥಸಪ್ತಮಿಯ ಪ್ರಯುಕ್ತ 108 ಸೂರ್ಯ ನಮಸ್ಕಾರ ಕಾರ್ಯಕ್ರಮ

ಬಂಟ್ವಾಳ : ಸಂಸ್ಕಾರ ಸಂಘಟನೆ ಸೇವೆಯ ಧ್ಯೇಯ ಉದ್ದೇಶಗಳನ್ನು ಹೊಂದಿರುವ ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿ( ರಿ) ಕರ್ನಾಟಕ ಕೇಂದ್ರ ಕಚೇರಿ ತುಮಕೂರು ನೇತ್ರಾವತಿ ವಲಯ ಮಂಗಳೂರು, ಬಂಟ್ವಾಳ ತಾಲೂಕು ವತಿಯಿಂದ ಜ....