Friday, June 27, 2025

ಹಿಂದೂ‌ ಮಹಿಳೆಯ ಚಿಕಿತ್ಸೆಗೆ ಸ್ಪಂದಿಸಿದ ಮುಸ್ಲಿಂ ಫ್ಯಾಮಿಲಿ ಟ್ರಸ್ಟ್ : ಮತ್ತೊಮ್ಮೆ ಮಾನವೀಯತೆಗೆ ಸಾಕ್ಷಿಯಾದ ದಕ್ಷಿಣ ಕನ್ನಡ ಜಿಲ್ಲೆ

ಬಂಟ್ವಾಳ :ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೃಷ್ಣಾಪುರ ನಿವಾಸಿ ಸರೋಜಾ ಎನ್ನುವ ಮಹಿಳೆ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದ ಕಾರಣದಿಂದ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ತುರ್ತಾಗಿ ಮೂರು ತಿಂಗಳ ಹೊಂದೆ  ದಾಖಲಾಗಿದ್ದರು. ಕಡು ಬಡವರಾದ ಇವರ ಗಂಡ ಕೆಲವು ವರ್ಷಗಳ ಹಿಂದೆ ಕುಟುಂಬವನ್ನು ತೊರೆದು ಹೋಗಿದ್ದು, ಕಳೆದ ಒಂದು ತಿಂಗಳ ಹಿಂದೆಯೇ ರೋಗಿ ಗುಣಮುಖರಾಗಿದ್ದರೂ ಡಿಸ್ಚಾರ್ಜ್ ಮಾಡಿ ಹಣ ಪಾವತಿಸಲು ಸಾಧ್ಯವಾಗಿರಲಲ್ಲ.  ಇಂತಹಾ ಕಷ್ಟದ ಸಮಯದಲ್ಲಿ ಸಹಾಯ ಮಾಡಲು ಯಾರೂ ಇಲ್ಲದೆ ಕಂಗಾಲಾಗಿದ್ದ ರೋಗಿ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿಯೇ ಬಾಕಿಯಾಗಿದ್ದರು.  ವಿಷಯ ತಿಳಿದು ತಕ್ಷಣ ಸ್ಪಂದಿಸಿದ #ಆಲ್_ಇಂಡಿಯಾ_ಮುಸ್ಲಿಂ_ಡೆವಲಪ್ಮೆಂಟ್_ಫಾರಂ ಇದರ ರಾಜ್ಯ ಉಪಾಧ್ಯಕ್ಷರಾಗಿರುವ ಅಬೂಬಕರ್ ಸಜಿಪ ಇವರ ಫ್ಯಾಮಿಲಿ ಟ್ರಸ್ಟ್ ಆದ #ಸಜಿಪ_ಹಾಜಿ_ಅಬ್ದುಲ್_ಖಾದರ್_ಫ್ಯಾಮಿಲಿ_ಅಸೋಸಿಯೇಷನ್ ಅವರು ಆಸ್ಪತ್ರೆಯ ಬಿಲ್ ಭರಿಸುವ ಭರವಸೆ ನೀಡುವ ಮೂಲಕ  ರೋಗಿಯನ್ನು ಸಂತೈಸಿ, #ಸಜಿಪ_ಹಾಜಿ_ಅಬ್ದುಲ್_ಖಾದರ್_ಫ್ಯಾಮಿಲಿ_ಅಸೋಸಿಯೇಷನ್ ಹೆಸರಿನ ಅವರದೇ ಕುಟುಂಬ ಸದಸ್ಯರ ಟ್ರಸ್ಟ್ ಮೂಲಕ ಬೃಹತ್ ಮೊತ್ತದ ಹಣ ಹೊಂದಿಸಿ  ಇದರ ಅಧ್ಯಕ್ಷ ರಾದ ಎಂ.ಕೆ. ಅಬ್ದುಲ್ ಖಾದರ್ ಹಾಜಿ ಹಾಗೂ ಇದರ ಸದಸ್ಯರೂ ಆದ ಎಸ್.ಅಬೂಬಕ್ಕರ್ ಸಜೀಪ ಖುದ್ದಾಗಿ ಆಸ್ಪತ್ರೆಗೆ ತೆರಳಿ ರೋಗಿಯನ್ನು ಡಿಸ್ಚಾರ್ಜ್ ಮಾಡಿಸಿ  ಅವರದೇ ಕಾರಿನಲ್ಲಿ ಸ್ವತಹಾ ಮೂಡಿಗೆರೆ ವರೆಗೆ ಕರೆದುಕೊಂಡು ಹೋಗಿ ಅವರ ಕುಟುಂಬಕ್ಕೆ ಒಂದು ತಿಂಗಳಿಗೆ ಬೇಕಾದ ಆಹಾರ ಸಾಮಗ್ರಿಗಳನ್ನು ಕೊಟ್ಟು ಮನೆಗೆ ಮರಳಿ ಮುಟ್ಟಿಸುವ
ಮೂಲಕ ಮಾನವೀಯತೆ ಮೆರೆದಿದ್ದಾರೆ.
ಎಂ.ಕೆ. ಅಬ್ದುಲ್ ಖಾದರ್ ಹಾಜಿ ಹಾಗೂ ಇದರ ಸದಸ್ಯರೂ ಆದ ಎಸ್.ಅಬೂಬಕ್ಕರ್ ಸಜೀಪ ಹಾಗೂ ಅವರ ಫ್ಯಾಮಿಲಿ ಅಸೋಸಿಯೇಷನ್ ನ ಎಲ್ಲಾ ಸಹೋದರರು ಯಾವುದೇ ಜಾತಿ ಧರ್ಮ ನೋಡದೆ ಸದಾ ಜೀವಪರ ಕೆಲಸಗಳಲ್ಲಿ ತಮ್ಮನ್ನು ತಾನು ತೊಡಗಿಸಿಕೊಂಡಿರುವವರಾಗಿದ್ದು,  ಕೋಮು ವೈಷಮ್ಯ ತುಂಬಿರುವ ಹಲವರ ನಡುವೆ ಸಮಾಜಕ್ಕೆ ಮಾದರಿಯಾಗಿದ್ದಾರೆ.
ಹಿಂದೂ ಮುಸ್ಲಿಂ ಧರ್ಮದ ನಡುವೆ ವಿಷ ಬೀಜ ಬಿತ್ತುವ ಹಲವಾರು ಜನರ ಮಧ್ಯೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಾನವೀಯತೆಗೆ ಸಾಕ್ಷಿಯಾಗುವ ಇಂತಹಾ ಕಾರ್ಯಗಳು ನಡೆಯುತ್ತಲೇ ಇರುವುದು ಬುದ್ಧಿವಂತರ ಜಿಲ್ಲೆಗೆ ಹೆಮ್ಮೆ ತರುತ್ತಿದೆ.
#ಸಜಿಪ_ಅಬ್ದುಲ್_ಖಾದರ್_ಹಾಜಿ_ಫ್ಯಾಮಿಲಿ_ಅಸೋಸಿಯೇಷನ್ ನ ಈ  ಮಾನವೀಯತೆಯ ಕಾರ್ಯ ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.

More from the blog

5 ವರ್ಷದ ಮಗುವಿನ ಚಿಕಿತ್ಸೆಗೆ ಸಂಗಬೆಟ್ಟು ಗ್ರಾ. ಪಂ ವತಿಯಿಂದ ಸಹಾಯಧನದ ಚೆಕ್ ಹಸ್ತಾಂತರ.. 

ಬಂಟ್ವಾಳ : ತಾಲೂಕಿನ ಕರ್ಪೆ ಗ್ರಾಮದ ಕುಟ್ಟಿಕಳ ನಿವಾಸಿ ಹಿರಣ್ಯಾಕ್ಷ ಶಾಂತಿ ಹಾಗೂ ಸೌಮ್ಯ ದಂಪತಿಗಳ 5 ವರ್ಷದ ಪುಟ್ಟ ಹೆಣ್ಣು ಮಗು ಮನಸ್ವಿಳಿಗೆ ಅರೋಗ್ಯದಲ್ಲಿ ರಕ್ತದ ಕ್ಯಾನ್ಸರ್ ಇರುವುದರಿಂದ ಅರೋಗ್ಯದ ವೆಚ್ಚಕ್ಕಾಗಿ...

Old Bridge : ಮಂಗಳೂರು ಎನ್.ಐ.ಟಿ.ಕೆ ಸಂಸ್ಥೆ ಅಧಿಕಾರಿಗಳಿಂದ ಪಾಣೆಮಂಗಳೂರು ಹಳೆ ಸೇತುವೆಯ ಸಾಮರ್ಥ್ಯ ಪರೀಕ್ಷೆ

ಬಂಟ್ವಾಳ: ಬ್ರಿಟಿಷ್ ಕಾಲದ ಪಾಣೆಮಂಗಳೂರು ಸೇತುವೆಯ ಸಾಮರ್ಥ್ಯ ಪರೀಕ್ಷೆ ನಡೆಸುವ ಉದ್ದೇಶದಿಂದ ಮಂಗಳೂರು ಎನ್.ಐ.ಟಿ.ಕೆ ಸಂಸ್ಥೆಯಿಂದ ಇಬ್ಬರು ಅಧಿಕಾರಿಗಳು ಆಗಮಿಸಿ, ಜಿಲ್ಲಾಧಿಕಾರಿ ಅವರಿಗೆ ವರದಿ ನೀಡಿದ್ದಾರೆ. ಹಳೆ ಸೇತುವೆ ಬಗ್ಗೆ ಸ್ಥಳ ವೀಕ್ಷಣೆಗೆ ಏನ್...

ಕುದ್ರೋಳಿಯಲ್ಲಿ ವಿಶ್ವಶಾಂತಿಗಾಗಿ ಶತ ಸೀಯಾಳಾಭಿಷೇಕ..

ಮಂಗಳೂರು: ಜಗತ್ತಿನಾದ್ಯಂತ ಯುದ್ಧದ ಕಾರ್ಮೋಡ ಆವರಿಸಿರುವುದರಿಂದ ವಿಶ್ವ ಶಾಂತಿಗಾಗಿ ಶ್ರೀ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮತ್ತು ಅಭಿವೃದ್ಧಿ ಸಮಿತಿ ನೇತೃತ್ವದಲ್ಲಿ ಗುರುವಾರ ಬೆಳಗ್ಗೆ ಶತ ಸೀಯಾಳಾಭಿಷೇಕ, ಮಹಾರುದ್ರಾಭಿಷೇಕ ಮತ್ತು ವಿಶೇಷ...

Bantwal : ಮಾದಕ ದ್ರವ್ಯ ಮುಕ್ತ ಸಮಾಜಕ್ಕಾಗಿ” ಅಭಿಯಾನ – 2025 ಕಾರ್ಯಕ್ರಮ..

ಬಂಟ್ವಾಳ: ದ.ಕ.ಜಿಲ್ಲಾ ಪೋಲೀಸ್ ಇಲಾಖೆ, ಬಂಟ್ವಾಳ ವೃತ್ತದ ಪೋಲೀಸ್ ಠಾಣೆಯ ಹಾಗೂ ಶಿಕ್ಷಣ ಇಲಾಖೆ, ರೋಟರಿ ಕ್ಲಬ್ ಬಂಟ್ವಾಳ ಲೊರೆಟ್ಟೊ ಹಿಲ್ಸ್, ಬಂಟ್ವಾಳ ಟೌನ್ ಮೊಡಂಕಾಪು ಇವರ ಸಂಯುಕ್ತ ಆಶ್ರಯದಲ್ಲಿ " ಮಾದಕ...