Friday, June 27, 2025

ಸೌದಿ ಅರೇಬಿಯಾದಿಂದ ಮಂಗಳೂರಿಗೆ ಚಾರ್ಟರ್ಡ್ ವಿಮಾನ – ಸರ್ಕಾರದಿಂದ ಅನುಮತಿ

ಮಂಗಳೂರು: ಕೊರೊನಾ ವೈರಸ್‌‌‌‌‌ ಹಿನ್ನೆಲೆ ಜಾರಿಯಾದ ಲಾಕ್‌‌ಡೌನ್‌‌‌ನ ಪರಿಣಾಮ ಸೌದಿ ಅರೇಬಿಯಾದಲ್ಲಿರುವ ಕನ್ನಡಿಗರು ಕೆಲಸ ಕಳೆದುಕೊಂಡು, ಬೆಂಬಲವನ್ನೂ ಕಳೆದುಕೊಂಡ ಬಳಿಕ ಅಂತಿಮವಾಗಿ ತಮ್ಮ ಮನೆಗಳಿಗೆ ಮರಳಲು ಭರವಸೆಯ ಆಶಾಕಿರಣ ದೊರತಿದೆ.

ಕೆಲವು ಕಂಪೆನಿಗಳು, ಯಾವುದೇ ಕೆಲಸವಿಲ್ಲದವರನ್ನು ವಾಪಸ್‌‌ ಕಳುಹಿಸುವ ವ್ಯವಸ್ಥೆ ಮಾಡಲು ಮಾಡಿದ ಪ್ರಯತ್ನ ಫಲ ನೀಡಿವೆ. ಈ ಪರಿಣಾಮವಾಗಿ, ಈ ಕಂಪೆನಿಗಳು ನೇಮಕ ಮಾಡಿದ ಖಾಸಗಿ ವಿಮಾನಗಳ ಮೂಲಕ ಈ ನೌಕರರು ನಗರಕ್ಕೆ ಮರಳಲಿದ್ದಾರೆ. ಮೇ 30ರ ಶನಿವಾರದಿಂದ ಈ ವಿಮಾನಗಳು ಕಾರ್ಯನಿರ್ವಹಿಸಲು ಆರಂಭಿಸಲಿವೆ. ಈ ಕಂಪನಿಗಳಲ್ಲಿ ಕೆಲಸ ಮಾಡಲು ಭೇಟಿ ವೀಸಾಗಳಲ್ಲಿ ಅಲ್ಲಿಗೆ ಹೋದವರು ಸಹ ಹಿಂದಿರುಗಲಿದ್ದಾರೆ.

ಕರ್ನಾಟಕದ ಎನ್‌‌ಆರ್‌ಐ ಫೋರಂನ ಮಾಜಿ ಉಪಾದ್ಯಕ್ಷೆ ಡಾ.ಆರತಿ ಕೃಷ್ಣ ಅವರು ಸಂಕಷ್ಟಕ್ಕೊಳಗಾದ ಭಾರತೀಯ ವಲಸಿಗ ಕಾರ್ಮಿಕರನ್ನು ಮರಳಿ ಊರಿಗೆ ತೆರಳುವ ಸಲುವಾಗಿ ಅನುಮೋದನೆ ಪಡೆಯುವ ನಿರ್ವಹಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ಬಗ್ಗೆ ಮಾತನಾಡಿದ ಅವರು, ಇಬ್ಬರು ಮಂಗಳೂರು ಉದ್ಯಮಿಗಳನ್ನು ಸಂಪರ್ಕಿಸಿದ್ದು, ಅವರನ್ನು ಚಾರ್ಟಡ್‌‌‌ ವಿಮಾನಗಳ ಮೂಲಕ ಮನೆಗೆ ಕಳುಹಿಸಲು ಬಯಸಿದ್ದರು. ಅಲ್ಲದೇ, ಸೌದಿ ಅರೇಬಿಯಾದ ಭಾರತೀಯ ರಾಯಭಾರಿ ಅಸುಫ್‌‌ ಸೈಯ್ಯದ್‌‌‌‌‌‌ ಅವರಿಗೆ ಪತ್ರ ಬರೆಯುವಂತೆ ಸಲಹೆ ನೀಡಿದ್ದು, ನಂತರ ಅವರು ವಿದೇಶಾಂಗ ಸಚಿವಾಲಯದಲ್ಲಿ ಕೊಲ್ಲಿ ವಿಭಾಗದ ಉಸ್ತುವಾರಿ ವಹಿಸಿರುವ ಜಂಟಿ ಕಾರ್ಯದರ್ಶಿ ಡಾ.ನಾಗೇಂದ್ರ ಪ್ರಸಾದ್‌‌ ಅವರಿಗೆ ಕಳುಹಿಸಲು ಕೋರಿದ್ದಾರೆ. ಬಳಿಕ ಆರ್ಥಿಕ ಸಂಬಂಧಗಳ ಕಾರ್ಯದರ್ಶಿ ಟಿ.ಎಸ್‌‌‌.ತಿರುಮೂರ್ತಿ ಅವರ ಬಳಿಯು ಈ ವಿಷಯವಾಗಿ ಮನವಿ ಮಾಡಿಕೊಂಡಿದ್ದೇನೆ. ಅಲ್ಲದೇ, ಈ ಬಗ್ಗೆ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್‌‌ ಶ್ರಿಂಗ್ಲಾ ಹಾಗೂ ನಾಗರಿಕ ವಿಮಾನಯಾನ ಸಚಿವ ಹರ್ದೀಪ್‌‌‌ ಸಿಂಗ್‌ ಪುರಿ ಅವರೊಂದಿಗೂ ಈ ವಿಷಯದ ಬಗ್ಗೆ ತೀರ್ಮಾನ ತೆಗೆದುಕೊಳ್ಳುವಂತೆ ಒತ್ತಾಯಿಸಿದ್ದೇನೆ. ಹಾಗಾಗಿ ಈ ಮನವಿ ಇದೀಗ ದೃಢಪಟ್ಟಿದೆ ಎಂದು ಆರತಿ ಕೃಷ್ಣ ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ಎಕ್ಸ್‌ಪರ್ಟೈಸ್ ಕಾಂಟ್ರಾಕ್ಟಿಂಗ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಕೆ ಎಸ್ ಶೇಖ್ ಕಾರ್ನೈರ್ ಹಾಗೂ ಅವರ ಸಹೋದರರು, ಮುಂದಿನ ವಾರದಲ್ಲಿ ಎರಡು ಬಾಡಿಗೆ ವಿಮಾನಗಳ ಮೂಲಕ ಜನರನ್ನು ಮಂಗಳೂರಿಗೆ ಕಳುಹಿಸಲು ಅನುಮತಿ ಪಡೆಯಲಾಗಿದೆ. ಮೊದಲ ಎರಡು ವಿಮಾನಗಳಲ್ಲಿ 360 ಜನರು ತೆರಳಲಿದ್ದಾರೆ. ಕಂಪೆನಿಯ ವತಿಯಿಂದ ನೇಮಕ ಮಾಡಲಾದ ಏಳು ವಿಮಾನಗಳ ಮೂಲಕ ಜನರು ನವದೆಹಲಿ, ತಿರುವನಂತಪುರಂ, ಹೈದರಾಬಾದ್ ಮತ್ತು ಚೆನ್ನೈಗೆ ಪ್ರಯಾಣಿಸಲಿದ್ದಾರೆ. ಭಾರತಕ್ಕೆ ತಲುಪಿದ ಬಳಿಕ ಅವರ ಪ್ರಯಾಣ ವೆಚ್ಚವನ್ನು ಹಾಗೂ ಕ್ವಾರಂಟೈನ್‌‌ ವೆಚ್ಚವನ್ನು ನಮ್ಮ ಕಂಪೆನಿಯೇ ಭರಿಸಲಿದೆ. ನಾವು ಆರು ವಾರಗಳಿಂದ ನಡೆಸುತ್ತಿರುವ ಪ್ರಯತ್ನವು ಅಂತಿಮವಾಗಿ ಯಶಸ್ಸು ಕಂಡಿದೆ ಎಂದು ಹೇಳಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ, ವಿದೇಶಾಂಗ ವ್ಯವಹಾರಗಳ ಸಚಿವ ಡಾ.ಸುಬ್ರಹ್ಮಣ್ಯಂ ಜೈಶಂಕರ್, ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಮತ್ತು ಕರ್ನಾಟಕದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಸಹೋದರರು ಕೃತಜ್ಞತೆ ಸಲ್ಲಿಸಿದ್ದಾರೆ. ಅಲ್ಲದೇ ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ನಾವು ಚಿರರುಣಿಯಾಗಿದ್ದೇವೆ. ಇಲ್ಲಿನ ಜನರ ಆಗಮನಕ್ಕೆ ಅನುಮತಿ ನೀಡಿದೆ ಅಲ್ಲದೇ ಅವರಿಗೆ ಕ್ವಾರಂಟೈನ್‌ ವ್ಯವಸ್ಥೆಯನ್ನೂ ಮಾಡಿದೆ ಎಂದರು.

More from the blog

ಬಡ ಮಗುವಿನ ಚಿಕಿತ್ಸೆ ನೆರವಿಗೆ ಮುಂದಾದ ಸಿದ್ದಕಟ್ಟೆ ಪ್ರಾ. ಕೃ. ಪತ್ತಿನ ಸಹಕಾರ ಸಂಘ…

ಬಂಟ್ವಾಳ : ತಾಲೂಕಿನ ಕರ್ಪೆ ಗ್ರಾಮದ ಕುಟ್ಟಿಕಳ ನಿವಾಸಿ ಹಿರಣ್ಯಾಕ್ಷ ಶಾಂತಿ ಹಾಗೂ ಸೌಮ್ಯ ದಂಪತಿಗಳ 5 ವರ್ಷದ ಪುಟ್ಟ ಹೆಣ್ಣು ಮಗು ಮನಸ್ವಿಳಿಗೆ ಅರೋಗ್ಯದಲ್ಲಿ ರಕ್ತದ ಕ್ಯಾನ್ಸರ್ ಇರುವುದರಿಂದ ಇನ್ನೂ ಹೆಚ್ಚಿನ...

ಕರ್ನಾಟಕದ ಕರಾವಳಿ ಸೇರಿ ಹಲವೆಡೆ ಜು. 3ರವರೆಗೆ ಭಾರಿ ಮಳೆ..

ಮಂಗಳೂರು : ರಾಜ್ಯದಾದ್ಯಂತ ಮಳೆಯ ಆರ್ಭಟ ಮುಂದುವರೆದಿದೆ. ಇಂದು (ಜೂನ್ 27) ಸಹ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆಯು ಹೈ ಅಲರ್ಟ್ ಘೋಷಿಸಿದೆ. ಕೊಡಗಿನಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದ್ದು, ರೆಡ್...

5 ವರ್ಷದ ಮಗುವಿನ ಚಿಕಿತ್ಸೆಗೆ ಸಂಗಬೆಟ್ಟು ಗ್ರಾ. ಪಂ ವತಿಯಿಂದ ಸಹಾಯಧನದ ಚೆಕ್ ಹಸ್ತಾಂತರ.. 

ಬಂಟ್ವಾಳ : ತಾಲೂಕಿನ ಕರ್ಪೆ ಗ್ರಾಮದ ಕುಟ್ಟಿಕಳ ನಿವಾಸಿ ಹಿರಣ್ಯಾಕ್ಷ ಶಾಂತಿ ಹಾಗೂ ಸೌಮ್ಯ ದಂಪತಿಗಳ 5 ವರ್ಷದ ಪುಟ್ಟ ಹೆಣ್ಣು ಮಗು ಮನಸ್ವಿಳಿಗೆ ಅರೋಗ್ಯದಲ್ಲಿ ರಕ್ತದ ಕ್ಯಾನ್ಸರ್ ಇರುವುದರಿಂದ ಅರೋಗ್ಯದ ವೆಚ್ಚಕ್ಕಾಗಿ...

Old Bridge : ಮಂಗಳೂರು ಎನ್.ಐ.ಟಿ.ಕೆ ಸಂಸ್ಥೆ ಅಧಿಕಾರಿಗಳಿಂದ ಪಾಣೆಮಂಗಳೂರು ಹಳೆ ಸೇತುವೆಯ ಸಾಮರ್ಥ್ಯ ಪರೀಕ್ಷೆ

ಬಂಟ್ವಾಳ: ಬ್ರಿಟಿಷ್ ಕಾಲದ ಪಾಣೆಮಂಗಳೂರು ಸೇತುವೆಯ ಸಾಮರ್ಥ್ಯ ಪರೀಕ್ಷೆ ನಡೆಸುವ ಉದ್ದೇಶದಿಂದ ಮಂಗಳೂರು ಎನ್.ಐ.ಟಿ.ಕೆ ಸಂಸ್ಥೆಯಿಂದ ಇಬ್ಬರು ಅಧಿಕಾರಿಗಳು ಆಗಮಿಸಿ, ಜಿಲ್ಲಾಧಿಕಾರಿ ಅವರಿಗೆ ವರದಿ ನೀಡಿದ್ದಾರೆ. ಹಳೆ ಸೇತುವೆ ಬಗ್ಗೆ ಸ್ಥಳ ವೀಕ್ಷಣೆಗೆ ಏನ್...