Monday, February 2, 2026

ಲಾಕ್ ಡೌನ್ ಪರಿಣಾಮ ಹಸಿವಿನಿಂದ ಬಳಲುತ್ತಿರುವ ಕಾರಿಂಜದ ಮಂಗಗಳು. ಕಾರಿಂಜದ ವಾನರರ ಸ್ಥಿತಿ ಸಾಮಾಜಿಕ ಜಾಲತಾಣದಲ್ಲಿ ವೈರಲ್. ಕಾರಿಂಜ ದೇವಾಲಯದಲ್ಲಿರುವ ಮಂಗಗಳ ಹಸಿವು ನೀಗಿಸಲು ಸಹೃದಯರು ಮುಂದೆ ಬರಬೇಕಾಗಿದೆ.

ಬಂಟ್ವಾಳ: ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ ಒಂದರಲ್ಲಿ ಹಸಿವನ್ನು ತಾಳಲಾರದೆ ಹೊರಲಾಡುತ್ತಿರುವ ಮಂಗಗಳನ್ನು ನೋಡುತ್ತಿರುವಾಗ ನಿಜಕ್ಕೂ ಅಯ್ಯೋ ಎನಿಸಿದೆ ಇರದು.

ಇದು ಎಲ್ಲಿಯದೊ ದೃಶ್ಯ ವಲ್ಲ…ಬಂಟ್ವಾಳ ತಾಲೂಕಿನ ಇತಿಹಾಸ ಪ್ರಸಿದ್ಧ ದೇವಾಲಯ ಶ್ರೀ ಕ್ಷೇತ್ರ ಕಾರಿಂಜದಲ್ಲಿರುವ ದೇವ ಸ್ವರೂಪ ಕಾರಿಂಜ ಮಂಗಗಳ ಅವಸ್ಥೆ.

ಕೊರೊನಾ ಲಾಕ್ ಡೌನ್ ನ ಹಿನ್ನಲೆಯಲ್ಲಿ ದೇವಸ್ಥಾನಗಳಿಗೆ ಭಕ್ತರಿಲ್ಲದೆ ಸೊರಗುತ್ತಿರುವ ಪರಿಣಾಮ ಪ್ರಾಣಿಗಳಿಗೂ ಅದರ ಬಿಸಿ ತಟ್ಟಿದೆ ಎಂಬುದು ಕಾರಿಂಜದ ವಾನರರ ಸ್ಥಿತಿ ನೋಡಿದಾಗ ಗೊತ್ತಾಗುತ್ತದೆ.

ದೇವಸ್ಥಾನ ಗಳು ಎಲ್ಲವೂ ಬಂದ್ ಅಗಿವೆ ಹಾಗಾಗಿ ಭಕ್ತರಿಗೂ ಪ್ರವೇಶ ನಿರ್ಬಂಧ ಹೇರಿದೆ.

ಜನರಿಲ್ಲದೆ ಬಿಕೋ ಎನ್ನುತ್ತಿರುವ ಕಾರಿಂಜ ದೇವಾಲಯದ ಲ್ಲಿರು ನೂರಾರು ಮಂಗಗಳ ಅವಸ್ಥೆ ಹೇಳತೀರದಷ್ಟು ಶೋಚನೀಯ ಸ್ಥಿತಿಗೆ ತಲುಪಿದೆ ಎಂಬುದು ವಿಡಿಯೋ ದಲ್ಲಿ ಕಾಣುತ್ತಿದೆ.

ಹಸಿವನ್ನು ತಾಳಲಾರದೆ ದೇವಸ್ಥಾನ ದ ಅಂಗದಲ್ಲಿ ಹೊರಲಾಡುತ್ತಿರುವ ಮಂಗವೊಂದಾದರೆ , ದೊಡ್ಡ ಪ್ರಾಯದ ಮಂಗಗಳು ತಿಂದು ಉಳಿದ ಅನ್ನದ ಕಾಳುಗಳನ್ನು ತಿನ್ನುವ ದೃಶ್ಯ ನಿಜಕ್ಕೂ ಬೇಸರ ಉಂಟಾಗುತ್ತದೆ.

ಈಶ್ವರ ದೇವಾಲಯದ ಲ್ಲಿ ದೇವರ ನೈವೇದ್ಯ ಮಾಡಲು ಉಪಯೋಗಿಸುವ ಮೂರು ಕೆ.ಜಿ.ಅಕ್ಕಿಯ ಅನ್ನವನ್ನು ಮಂಗಗಳಿಗೆ ಆಹಾರದ ರೂಪದಲ್ಲಿ ಹಾಗೂ ಪಾರ್ವತಿ ದೇವಾಲಯ ದಲ್ಲಿ ಎರಡು ಕೆ.ಜಿ.ಅಕ್ಕಿಯ ನೈವೇದ್ಯ ಪ್ರಸಾದವನ್ನು ಇಲ್ಲಿರುವ ಮಂಗಗಳಿಗೆ ನೀಡುತ್ತಾರೆ. ‌

ಆದರೆ ಕೆಳಗೆ ತೀರ್ಥಬಾವಿಯ ಬಳಿ ಇರುವ ಮಂಗಗಳಿಗೆ ಈ ಪ್ರಸಾದ ಸಿಗುವುದಿಲ್ಲ… ಭಕ್ತರು ನೀಡಿದ ಅಹಾರವೇ ಮಂಗಗಳಿಗೆ ಜೀವನಾಧಾರ…

ಪ್ರಸ್ತುತ ಲಾಕ್ ಡೌನ್ ನಿಂದ ಭಕ್ತರಿಲ್ಲದೆ ಮಂಗಗಳ ಹೊಟ್ಟೆಗೆ ಹಿಟ್ಟಿಲ್ಲದ ಕೊರುಗುತ್ತಿದೆ.

ದೇವಾಲಯದ ಬಳಿಯಲ್ಲಿ ಇರುವ ಮಂಗಗಳಿಗೆ ದೇವಾಲಯದ ಲ್ಲಿ ನೀಡುವ ನೈವೇದ್ಯ ಪ್ರಸಾದ ಸಾಕಾಗದೆ ಭಕ್ತರು ನೀಡುವ ಆಹಾರಕ್ಕೆ ಹಾತೊರೆಯುತ್ತಿತ್ತು.

 

   *ಮೂರು ಕುಟುಂಬ*

ದೇವಾಲಯಕ್ಕೆ ಇತಿಹಾಸವಿದ್ದಂತೆ ಇಲ್ಲಿನ ವಾನರರಿಗೂ ಅನೇಕ ವರ್ಷಗಳ ಇತಿಹಾಸವಿದೆ.

ಇಲ್ಲಿ ನೂರಾರು ಮಂಗಗಳಿದ್ದರೂ ಕೂಡ ಮೂರು ಕುಟುಂಬ ಗಳಿವೆ.

ಈಶ್ವರ ದೇವಾಲಯ ದಲ್ಲಿ ಸುಮಾರು 150 ರಿಂದ 200 ಮಂಗಗಳಿದ್ದರೆ, ಪಾರ್ವತಿ ದೇವಾಲಯ ದಲ್ಲಿ 100 ರಿಂದ 150 ಮಂಗಗಳು ಮತ್ತು ಕೆಳಗೆ ಕಾರಿಂಜ ತೀರ್ಥ ಬಾವಿಯ ಸಮೀಪ 50 ರಿಂದ 100ಮಂಗಗಳು ವಾಸಮಾಡುತ್ತಿವೆ.

ಈ ಮೂರು ಕುಟುಂಬಗಳು ಅದರ ಗಡಿ ದಾಟಿ ಮುಂದೆ ಹೋಗುವಂತಿಲ್ಲ, ಹೋದರೆ ಗಲಾಟೆ ಅಗುತ್ತದೆ.

ಇಲ್ಲಿನ‌ ದೇವಾಲಯ ಮಂಗಗಳು ದೇವಾಲಯ ಬಿಟ್ಟು ತೋಟಕ್ಕೆ ಅಥವಾ ಕಾಡಿನಲ್ಲಿ ಹೋಗಿ ಹೊಟ್ಟೆ ತುಂಬಿಸಲು ಹೋಗುವುದಿಲ್ಲ ಎಂಬುದನ್ನು ಇಲ್ಲಿನ ಸ್ಥಳೀಯ ರು ಹೇಳುತ್ತಾರೆ.

ದಾನಿಗಳು ಅಥವಾ ಕಿಟ್ ನೀಡುವ ಸಂಘಸಂಸ್ಥೆಗಳು ಕಾರಿಂಜ ದ ವಾನರರ ಸ್ಥಿತಿ ಗತಿ ನೋಡಿ ಅದಕ್ಕೂ ಆಹಾರ ನೀಡಬೇಕಾದ ಅನಿವಾರ್ಯತೆ ಇದೆ ಎಂಬುದು ಸ್ಥಳೀಯರ ವಿನಂತಿ.

More from the blog

Panemangaluru : ಸ್ಕೂಟರ್ ಗೆ ಕಾರು ಡಿಕ್ಕಿ – ಸವಾರನಿಗೆ ಗಾಯ

ಬಂಟ್ವಾಳ: ಕಾರು ಡಿಕ್ಕಿಯಾಗಿ ಸ್ಕೂಟರ್ ಸವಾರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಪಾಣೆಮಂಗಳೂರು ಸರ್ವೀಸ್ ರಸ್ತೆಯಲ್ಲಿ ನಡೆದಿದೆ. ಸ್ಕೂಟರ್ ಸವಾರ ನರಿಕೊಂಬು ನಿವಾಸಿ ಮುಸ್ತಫಾ ಗಾಯಗೊಂಡ ವ್ಯಕ್ತಿಯಾಗಿದ್ದಾನೆ. ಸ್ಕೂಟರ್ ಸವಾರ ಮುಸ್ತಫಾ ಅವರು ನರಿಕೊಂಬು ರಸ್ತೆಯಿಂದ...

ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಯಕ್ಷಗಾನ ತಾಳಮದ್ದಳೆ

ವಿಟ್ಲ: ಪುಣಚ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಯಕ್ಷಕಲಾ ಪ್ರತಿಷ್ಠಾನ ಪುಣಚ ಇವರಿಂದ ಮಾಸಿಕ 'ರಾವಣ ವಧೆ' ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಭಾಗವತರಾಗಿ ಬಟ್ಯಮೂಲೆ ಲಕ್ಷ್ಮೀನಾರಾಯಣ ಭಟ್. ಚೆಂಡೆ ಮದ್ದಳೆಯಲ್ಲಿ ಡಾ. ಶ್ರೀ ಪ್ರಕಾಶ್ ಬಂಗಾರಡ್ಕ...

ವಿಕಸಿತ ಭಾರತಕ್ಕೆ ಭದ್ರ ತಳಹದಿ : ನಳಿನ್‌ ಕುಮಾರ್ ಕಟೀಲ್

ಮಂಗಳೂರು : ಪ್ರಧಾನಿ ಮೋದಿ ಅವರ ವಿಕಸಿತ ಭಾರತ ಸಾಕಾರಗೊಳಿಸಲು ಈ ಬಜೆಟ್ ಭದ್ರ ತಳಹದಿಯಾಗಿದೆ. ಕೃಷಿ, ಶಿಕ್ಷಣ, ಕೈಗಾರಿಕೆ, ಗ್ರಾಮೀಣಾಭಿವೃದ್ಧಿ, ಪ್ರವಾಸೋದ್ಯಮ ಸಹಿತ ಎಲ್ಲ ಕ್ಷೇತ್ರಗಳ ಅಭಿವೃದ್ಧಿಗೆ ಆದ್ಯತೆ ನೀಡಿರುವ, ದೇಶದ...

ಪ್ರಧಾನಿ ಮೋದಿ ಅವರ ವಿಕಸಿತ ಭಾರತ ಸಾಕಾರಗೊಳಿಸುವ ಯುವಶಕ್ತಿ ಆಧಾರಿತ ಬಜೆಟ್ : ಕ್ಯಾ. ಬ್ರಿಜೇಶ್ ಚೌಟ

ನವದೆಹಲಿ: ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿರುವ ಕೇಂದ್ರ ಸರ್ಕಾರದ 2026-27ನೇ ಸಾಲಿನ ಬಜೆಟ್, ಭಾರತದ ಅಭಿವೃದ್ಧಿ ಪಥದಲ್ಲಿ ನಿರ್ಣಾಯಕ ಮೈಲಿಗಲ್ಲು ಆಗಿದ್ದು, ಇದು ಜನರ ನಿರೀಕ್ಷೆ ಹಾಗೂ ಸಾಮೂಹಿಕ ಸಹಭಾಗಿತ್ವದೊಂದಿಗೆ...