ವಿಟ್ಲ: ಎಸ್‌ಎಸ್‌ಎಫ್ ಮಂಚಿ ಸೆಕ್ಟರ್ ವತಿಯಿಂದ ಮಂಚಿ ಸರಕಾರಿ ಪ್ರೌಢಶಾಲೆ ಮಂಚಿ ವಠಾರದಲ್ಲಿ ಸ್ವಚ್ಛತಾ ಕಾರ್ಯಕ್ರಮವು ಸೆಕ್ಟರ್ ಅಧ್ಯಕ್ಷರಾದ ಝುಬೈರ್ ಸಂಪಿಲರವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಸುನ್ನೀ ಮಹಲ್ ಸಾರಥಿ ಶೈಖುನಾ ಎಣ್ಮೂರು ಉಸ್ತಾದ್ ಅವರು ದುಆ ನಡೆಸಿದರು.
ಎಸ್‌ಎಸ್‌ಎಫ್ ಮಂಚಿ ಸೆಂಟರ್ ಅಧ್ಯಕ್ಷರಾದ ಬದ್ರುದ್ದೀನ್ ಹಾಜಿ ಮಂಚಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಫ್ ದ.ಕ ವೆಸ್ಟ್ ಝೋನ್ ಕೋಶಾಧಿಕಾರಿ ಝೈನುಲ್ ಆಬಿದ್ ನಈಮಿ, ಸುನ್ನೀ ಮಹಲ್ ಮುದರ್ರಿಸ್ ಸಾಲಿಂ ಸಅದಿ, ಎಸ್‌ಎಸ್‌ಎಫ್ ಬಂಟ್ವಾಳ ಡಿವಿಷನ್ ಕೋಶಾಧಿಕಾರಿ ಅಸ್ಲಂ ಸಂಪಿಲ, ಡಿವಿಷನ್ ಉಪಾಧ್ಯಕ್ಷರಾದ ಹಂಝ ಮಂಚಿ, ಎಸ್‌ಎಸ್‌ಎಫ್ ಮಂಚಿ ಸೆಕ್ಟರ್ ಉಸ್ತುವಾರಿ ಇಬ್ರಾಹಿಂ ಸುರಿಬೈಲ್, ಎಸ್‌ಎಸ್‌ಎಫ್ ಮಂಚಿ ಸೆಂಟರ್ ಸದಸ್ಯರಾದ ಮಹಮ್ಮದ್ ಮಂಚಿ, ಮಂಚಿ ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಇಬ್ರಾಹಿಂ ಮಂಚಿ-ಕೊಳ್ನಾಡು, ಎಸ್‌ಎಸ್‌ಎಫ್ ಮಂಚಿ ಸೆಕ್ಟರ್ ಕೋಶಾಧಿಕಾರಿ ಜಾಬಿರ್ ಪಡ್ಪು ಹಾಗೂ ಸೆಕ್ಟರ್ ಕಾರ್ಯಕಾರಿ ಸಮಿತಿ ಸದಸ್ಯರು, ಸೆಕ್ಟರ್ ವ್ಯಾಪ್ತಿಯ ಶಾಖೆಗಳ ನಾಯಕರು, ಕಾರ್ಯಕರ್ತರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸೆಕ್ಟರ್ ಕಾರ್ಯದರ್ಶಿ ಲುಕುಮಾನ್ ಕುಕ್ಕಾಜೆ ಸ್ವಾಗತಿಸಿದರು. ಸೆಕ್ಟರ್ ಪ್ರ. ಕಾರ್ಯದರ್ಶಿ ನೌಫಲ್ ಕಟ್ಟತ್ತಿಲ ವಂದಿಸಿದರು.

