ಬಂಟ್ವಾಳ: ಮಂಚಿ ಹಾಗೂ ಇರಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಕುಕ್ಕಾಜೆ ಪರಿಸರದಲ್ಲಿ ಇಂದು ಕೊರೊನ ಲಾಕ್ ಡೌನ್ ಸಂಕಷ್ಟ ಪೀಡಿತ ಸುಮಾರು 60 ಕುಟುಂಬಗಳಿಗೆ ಇರಾ ಗ್ರಾಮ ಪಂಚಾಯತ್ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ, ಮಂಚಿ ಗ್ರಾಮ ಪಂಚಾಯತ್ ಸದಸ್ಯ ಸಮೀಯುಲ್ಲಾ, ಸಾಮಾಜಿಕ ಕಾರ್ಯಕರ್ತ ಉಸ್ಮಾನ್ ಕುಕ್ಕಾಜೆ ನೇತೃತ್ವದಲ್ಲಿ ಜಾತಿ ಮತ ಭೇದವಿಲ್ಲದೆ ದಾನಿಗಳ ನೆರವಿನೊಂದಿಗೆ ದಿನ ಬಳಕೆ ಆಹಾರ ಪದಾರ್ಥಗಳ ಕಿಟ್ ವಿತರಿಸಲಾಯಿತು.



ಮಹಮ್ಮದ್ ಇರಾ, ಮೊಯಿದಿನ್ ಕಲ್ಲಮರೈ, ಮೊಹಮ್ಮದ್ ಪದವು, ಮೊಯಿದಿ ಕುಂಞಿ ದರ್ಬೆ, ಅಹಮ್ಮದ್ ಬಾವ ಕುಕ್ಕಾಜೆ, ಇಬ್ರಾಹಿಂ ಬೈಲ್, ಉಸ್ಮಾನ್ ಪದವು, ಸಮದ್ ಕುಕ್ಕಾಜೆ ಇವರ ವಿಶೇಷ ಸಹಕಾರದ ಮೂಲಕ ಮಂಚಿ ಇರಾ ಗ್ರಾಮಗಳ ವ್ಯಾಪ್ತಿಯಲ್ಲಿ ಈ ತನಕ ಒಟ್ಟು 320 ಕುಟುಂಬಗಳಿಗೆ ಕಿಟ್ ವಿತರಿಸಲಾಗಿದ್ದು, ಈ ತಂಡದ ವಿಶೇಷ ಸಾಧನೆಯಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಜನರ ಸಂಕಷ್ಟಗಳಿಗೆ ಸ್ಪಂದಿಸುವ ಗುರಿ ಹೊಂದಿರುವ ಈ ತಂಡದ ಸೇವೆಯನ್ನು ಊರಿನ ಜನ ಸಾಮಾನ್ಯರು ಶ್ಲಾಘಿಸಿದ್ದಾರೆ.












