Saturday, June 28, 2025

ರಾಷ್ಟ್ರೀಯ ಸ್ವಯಂ ಸೇವಕ ಸಂಘದ 12 ಮಂದಿ ಹಿರಿಯರಿಗೆ ಗೌರವ

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ 71ನೇ ಜನ್ಮದಿನದ ಸೇವೆ ಹಾಗೂ ಸಮರ್ಪಣಾ ಕಾರ್ಯಕ್ರಮದ ಅಂಗವಾಗಿ ಬಿಜೆಪಿ ಮಂಚಿ ಶಕ್ತಿ ಕೇಂದ್ರದ ವತಿಯಿಂದ ರಾಷ್ಟ್ರೀಯ ಸ್ವಯಂ ಸೇವಕ ಸಂಘ, ಜನಸಂಘ, ಬಿಜೆಪಿಯಲ್ಲಿ ಸೇವೆ ಸಲ್ಲಿಸಿದ ಹಿರಿಯ ಕಾರ್ಯಕರ್ತರನ್ನು ಕುಕ್ಕಾಜೆ ಸಿದ್ಧಿವಿನಾಯಕ ಭಜನಾ ಮಂದಿರದಲ್ಲಿ ಗೌರವಿಸಲಾಯಿತು.

ಹಿರಿಯ ಕಾರ್ಯಕರ್ತರಾದ  ಉದಯನಾರಾಯಣ ಭಟ್ ಖಂಡಿಗ,  ಗಣೇಶ್ ಐತಾಳ್ ಚೌಕದಪಾಲು, ವಿಠ್ಠಲ ಪ್ರಭು ಪತ್ತುಮುಡಿ,  ರವೀಂದ್ರ ಶೆಟ್ಟಿ ಕುಕ್ಕಾಜೆ,  ಸಂಜೀವ ಆಚಾರ್ಯ ಕುಕ್ಕಾಜೆ,  ವೆಂಕಟರಮಣ ಆಚಾರ್ಯ ನೂಜಿಪ್ಪಾಡಿ,  ಗೋವಿಂದ ನಾಯಕ್ ನೂಜಿ,  ಜಯದೇವ ಭಟ್ ನೂಜಿ,  ಉಮೇಶ್ ನಾಯಕ್ ಪುಚ್ಚೆಕೆರೆ,  ಕೃಷ್ಣಪ್ಪ ಬೆಳ್ಚಡ ಚೌಕದಪಾಲು,  ನಾರಾಯಣ ಖಂಡಿಗ, ಗಣಪತಿ ಭಟ್ ಪುಚ್ಚೆಕೆರೆ ಇವರನ್ನು ಗೌರವಿಸಲಾಯಿತು. ಬಂಟ್ವಾಳ ಮಂಡಲ ಪ್ರಧಾನ ಕಾರ್ಯದರ್ಶಿ  ರವೀಶ್ ಶೆಟ್ಟಿ ಕರ್ಕಳ, ಮಂಡಲದ ಉಪಾಧ್ಯಕ್ಷರಾದ ಜಯರಾಮ ನಾಯ್ಕ ಕುಂಟ್ರಕಲ, ಜಿಲ್ಲಾ ಸಮಿತಿ ಆಹ್ವಾನಿತ ಸದಸ್ಯರಾದ  ಮಾಧವ ಮಾವೆ, ಕೊಳ್ನಾಡು ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ  ಶಿವಪ್ರಸಾದ್ ಶೆಟ್ಟಿ ಕರೋಪಾಡಿ, ಪ್ರಧಾನ ಕಾರ್ಯದರ್ಶಿ ಲೋಹಿತ್ ಅಗರಿ, ಶಕ್ತಿ ಕೇಂದ್ರದ ಪ್ರಭಾರಿಗಳಾದ  ನಂದರಾಮ ರೈ,  ಅಶ್ವಥ್ ಬಾಳಿಕೆ, ಮಂಚಿ ಗ್ರಾಮ ಪಂಚಾಯತ್ಅಧ್ಯಕ್ಷೆ  ಪುಷ್ಪಾ ಎಸ್ ಕಾಮತ್, ಮಂಚಿ ಪಂಚಾಯತ್ ಉಪಾಧ್ಯಕ್ಷರಾದ  ಮೋಹನ್ ದಾಸ್ ಶೆಟ್ಟಿ, ರೈತ ಮೋರ್ಚಾದ ಪ್ರಶಾಂತ್ ಶೆಟ್ಟಿ ಅಗರಿ ಉಪಸ್ಥಿತರಿದ್ದರು. ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಕೇಶವರಾವ್ ನೂಜಿಪ್ಪಾಡಿ ಧನ್ಯವಾದವಿತ್ತು, ಶಕ್ತಿ ಕೇಂದ್ರ ದ ಸಹಪ್ರಮುಖ್ ರಮೇಶ್ ರಾವ್ ಪತ್ತುಮುಡಿ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭ ಪಂಚಾಯತ್ ಸದಸ್ಯರು, ಬೂತ್ ಅಧ್ಯಕ್ಷರುಗಳು, ಬೂತ್ ಕಾರ್ಯದರ್ಶಿಗಳು, ಬೂತ್ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಅಶ್ವಥ್ ಬಾಳಿಕೆ ಪ್ರತಿಜ್ಞಾ ವಿಧಿ ಬೋಧಿಸಿದರು.

More from the blog

ಪಂತಡ್ಕ : ಎಸ್.ಕೆ.ಎಸ್.ಬಿ.ವಿ ವತಿಯಿಂದ ಸಮಸ್ತ ನೂರನೇ ಸ್ಥಾಪಕ ದಿನಾಚರಣೆ..

ಬಂಟ್ವಾಳ : ನೆಟ್ಲಮುಡ್ನೂರು ಗ್ರಾಮದ ತರ್ಬಿಯತುಲ್ ಇಸ್ಲಾಂ ಮದ್ರಸ ಪಂತಡ್ಕ ಇದರ ವಿದ್ಯಾರ್ಥಿ ಸಂಘಟನೆ ಎಸ್.ಕೆ.ಎಸ್.ಬಿ.ವಿ ವತಿಯಿಂದ ಸಮಸ್ತ ನೂರನೇ ಸ್ಥಾಪಕ ದಿನಾಚರಣೆ ಕಾರ್ಯಕ್ರಮ ಮದ್ರಸ ವಠಾರದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸ್ಥಳೀಯ...

ಬಡ ಮಗುವಿನ ಚಿಕಿತ್ಸೆ ನೆರವಿಗೆ ಮುಂದಾದ ಸಿದ್ದಕಟ್ಟೆ ಪ್ರಾ. ಕೃ. ಪತ್ತಿನ ಸಹಕಾರ ಸಂಘ…

ಬಂಟ್ವಾಳ : ತಾಲೂಕಿನ ಕರ್ಪೆ ಗ್ರಾಮದ ಕುಟ್ಟಿಕಳ ನಿವಾಸಿ ಹಿರಣ್ಯಾಕ್ಷ ಶಾಂತಿ ಹಾಗೂ ಸೌಮ್ಯ ದಂಪತಿಗಳ 5 ವರ್ಷದ ಪುಟ್ಟ ಹೆಣ್ಣು ಮಗು ಮನಸ್ವಿಳಿಗೆ ಅರೋಗ್ಯದಲ್ಲಿ ರಕ್ತದ ಕ್ಯಾನ್ಸರ್ ಇರುವುದರಿಂದ ಇನ್ನೂ ಹೆಚ್ಚಿನ...

ಕರ್ನಾಟಕದ ಕರಾವಳಿ ಸೇರಿ ಹಲವೆಡೆ ಜು. 3ರವರೆಗೆ ಭಾರಿ ಮಳೆ..

ಮಂಗಳೂರು : ರಾಜ್ಯದಾದ್ಯಂತ ಮಳೆಯ ಆರ್ಭಟ ಮುಂದುವರೆದಿದೆ. ಇಂದು (ಜೂನ್ 27) ಸಹ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಹವಾಮಾನ ಇಲಾಖೆಯು ಹೈ ಅಲರ್ಟ್ ಘೋಷಿಸಿದೆ. ಕೊಡಗಿನಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದ್ದು, ರೆಡ್...

5 ವರ್ಷದ ಮಗುವಿನ ಚಿಕಿತ್ಸೆಗೆ ಸಂಗಬೆಟ್ಟು ಗ್ರಾ. ಪಂ ವತಿಯಿಂದ ಸಹಾಯಧನದ ಚೆಕ್ ಹಸ್ತಾಂತರ.. 

ಬಂಟ್ವಾಳ : ತಾಲೂಕಿನ ಕರ್ಪೆ ಗ್ರಾಮದ ಕುಟ್ಟಿಕಳ ನಿವಾಸಿ ಹಿರಣ್ಯಾಕ್ಷ ಶಾಂತಿ ಹಾಗೂ ಸೌಮ್ಯ ದಂಪತಿಗಳ 5 ವರ್ಷದ ಪುಟ್ಟ ಹೆಣ್ಣು ಮಗು ಮನಸ್ವಿಳಿಗೆ ಅರೋಗ್ಯದಲ್ಲಿ ರಕ್ತದ ಕ್ಯಾನ್ಸರ್ ಇರುವುದರಿಂದ ಅರೋಗ್ಯದ ವೆಚ್ಚಕ್ಕಾಗಿ...