ಮಂಚಿ: ಮಂಚಿ ಮುಹಮ್ಮದಿಯ ಜುಮ್ಮಾ ಮಸೀದಿ ಧಾರ್ಮಿಕ ಕೇಂದ್ರದ ಉಪಯೋಗಕ್ಕಾಗಿ ಖಾದಿಮುಲ್ ಮರ್ಕಝ್ ಎಸ್.ಕೆ. ಹಸನ್ ಮುಸ್ಲಿಯಾರ್ ರವರು ಒದಗಿಸಿದ ಬೋರ್ ವೆಲ್ ಸೌಲಭ್ಯದ ಉದ್ಘಾಟನೆಯನ್ನು ಅಸ್ಸಯ್ಯದ್ ಮುಸ್ತಕ್ರುಹಮಾನ್ ಚಟ್ಟೆಕಲ್ ತಂಞಲ್ ಹಾಗೂ ಶೈಖುನಾ ಇಬ್ರಾಹಿಂ ಮುಸ್ಲಿಯಾರ್ ಮಂಚಿ ಉಸ್ತಾದ್ ಅವರು ಉದ್ಘಾಟಿಸಿದರು. ಈ ಸಂಧರ್ಭದಲ್ಲಿ ಹಾಜಿ ಎಸ್. ಕೆ. ಹಸನ್ ಮುಸ್ಲಿಯಾರ್, ಇರಾ ಗ್ರಾ.ಪಂ. ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ, ಮಸೀದಿಯ ಗೌರವಧ್ಯಕ್ಷ ಮೊಹಮ್ಮದ್ ಶಾಫಿ ಮಂಚಿ, ಅಧ್ಯಕ್ಷ ಬದ್ರುದ್ದಿನ್ ಹಾಜಿ ಮಂಚಿ, ಮಹಮ್ಮೂದ್ ಸಹದಿ, ಅಬ್ಬೂಬಕ್ಕರ್ ಸಿದ್ದೀಕ್ ಅಫ್ಲಾಲಿ ಕುಕ್ಕಾಜೆ, ಅಬ್ದುಲ್ ರಝಾಕ್ ಮುಸ್ಲಿಯಾರ್, ಜಮಾತ್ ಕಮಿಟಿ ಪದಾದಿಕಾರಿಗಳು ಹಾಗೂ ಜಮಾತರು ಉಪಸ್ಥಿತರಿದ್ದರು.















