Thursday, February 5, 2026

ಶಾಲಾ ವಾಹನದ ಸಂಚಾರ ನಿಯಮದಲ್ಲಿ ಬದಲಾವಣೆ ಮಾಡುವಂತೆ ತಹಶಿಲ್ದಾರರಿಗೆ ಟೆಂಪೋ ಚಾಲಕರ ಮಾಲಕರ ಮನವಿ

ಬಂಟ್ವಾಳ: ಶಾಲಾ ಮಕ್ಕಳ ಸಾಗಾಟ ಮಾಡುವ ವಾಹನಗಳಿಗೆ ಸಂಚಾರ ಕಾನೂನಿನಲ್ಲಿ ಸಡಿಲಿಕೆ ಮಾಡಬೇಕು ಎಂದು ಶನಿವಾರ ತಹಶಿಲ್ದಾರರಿಗೆ ಟೆಂಪೋ ಮಾಲಕರು ಹಾಗೂ ಚಾಲಕರು ಎಸ್.ವಿ.ಎಸ್.ಅಂಗ್ಲ ಮಾಧ್ಯಮ ಶಾಲೆಯ ಸಮೀಪ ಮನವಿ ಮಾಡಿದರು.
ಪೋಲೀಸರು ನಿತ್ಯ ಶಾಲಾ ಬಳಿ ಬಂದು ಪ್ರಕರಣ ದಾಖಲಿಸುವುದರಿಂದ ನಮಗೆ ದುಡಿಮೆ ಮಾಡಲು ಸಾಕಷ್ಟು ತೊಂದರೆ ಯಾಗುತ್ತಿದೆ ಎಂದು ದೂರಿದರು.

ವರ್ಷಕ್ಕೆ ನಾವು 33 ಸಾವಿರ ಟ್ಯಾಕ್ಸ್ ಕಟ್ಟುತ್ತೇವೆ. ಟೆಂಪೋ ವಾಹನದ ಆರ್.ಟಿ.ಒ.ಪ್ರಕಾರ 12 ಸೀಟುಗಳು ಇವೆ, ಅದರೆ ನಾವು 25 ಮಕ್ಕಳನ್ನು ಟೆಂಪೋ ಮೂಲಕ ಸಾಗಿಸುತ್ತೇವೆ.
ಇಷ್ಟು ದುಬಾರಿ ಟ್ಯಾಕ್ಸ್ ಕಟ್ಟಿ 12 ಮಕ್ಕಳ ಸಾಗಾಟ ಮಾಡಿದರೆ ನಮಗೆ ಬದುಕಲು ಸಾಧ್ಯವಿಲ್ಲ. ಹಾಗಾಗಿ ಕಾನೂನಿನಲ್ಲಿ ಅಥವಾ ಸಂಚಾರಿ ನಿಯಮದಲ್ಲಿ ತುಸು ರಿಯಾಯತಿ ನೀಡಬೇಕು ಎಂದು ಒತ್ತಾಯಿಸಿದರು..
ಇದೇ ರೀತಿ ಮುಂದುವರಿದರೆ ನಾವು ಮಕ್ಕಳನ್ನು ಶಾಲಾ ವಾಹನದಲ್ಲಿ ಕರೆದುಕೊಂಡು ಹೋಗಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದರು.
ಈ ಬಗ್ಗೆ ಎ.ಎಸ್.ಪಿ.ಜೊತೆ ಮಾತನಾಡಿ ವಿಶೇಷ ಸಭೆ ಕರೆಯುತ್ತೇನೆ ಎಂದರು.

More from the blog

ಕಟೀಲು 7 ಮೇಳಗಳ ಫೆ.05ರ ಸೇವೆಯಾಟಗಳ ವಿವರ ಇಲ್ಲಿದೆ..

ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇದರ 7 ಮೇಳಗಳ ಫೆ.05ರ ಸೇವೆಯಾಟಗಳ ವಿವರ ಈ ಕೆಳಗಿನಂತಿವೆ.. ಫೆ.05ರ ಸೇವೆಯಾಟಗಳ ವಿವರ : ವಿಜಯ ಶೆಟ್ಟಿ, ಕೆಳಗಿನ ಮನೆ, ಸಾಣೂರು,...

ಸುಮಂತ್ ಸಾವಿನ ಪ್ರಕರಣ : ಪೊಲೀಸರ ತನಿಖೆ ಚುರುಕು..

ಬೆಳ್ತಂಗಡಿ : ತಾಲೂಕಿನ ಓಡಿಲ್ನಾಳ ಗ್ರಾಮದ ಸಂಬೋಳ್ಯ ನಿವಾಸಿ ಸುಮಂತ್ ಸಾವನ್ನಪ್ಪಿ ಇಂದಿಗೆ 22 ದಿನ ಕಳೆದರೂ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಪಷ್ಟವಾದ ಸುಳಿವು ಸಿಕ್ಕಿಲ್ಲ. ಜ.14.ರಂದು ಬೆಳಿಗ್ಗೆ ಧನುಪೂಜೆಗೆಂದು ಮುಂಜಾನೆ ಮನೆಯಿಂದ ಹೋದ...

ಬಿ.ಸಿ.ರೋಡ್ – ಅಡ್ಡಹೊಳೆ ಚತುಷ್ಪಥ ಹೆದ್ದಾರಿಯಲ್ಲಿ ದಾರಿ ಸೂಚನಾ ಫಲಕ ಅಳವಡಿಕೆ..

ಬಂಟ್ವಾಳ: ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಬಿ.ಸಿರೋಡ್ - ಅಡ್ಡಹೊಳೆ ಚತುಷ್ಪಥ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಇದೀಗ ಕಮಾನು ಮಾದರಿಯಲ್ಲಿ ದಾರಿ ಸೂಚಕ ಫಲಕ ಅಳವಡಿಕೆಯ ಕಾರ್ಯ ಆರಂಭಗೊಂಡಿದೆ. ರಸ್ತೆ ನಿರ್ಮಾಣದ ಕಾಂಕ್ರೀಟ್ ಕಾಮಗಾರಿ...

ಬಂಟ್ವಾಳ : ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾಗಿ ಜಗದೀಶ್ ರೈ ತುಂಬೆ ಆಯ್ಕೆ

ಬಂಟ್ವಾಳ : ಬಿ.ಸಿ.ರೋಡಿನ  ಸರಕಾರಿ ನೌಕರರ ಭವನದಲ್ಲಿ ಫೆ. 09ರಂದು ನಡೆದ ದೈಹಿಕ ಶಿಕ್ಷಣ ಶಿಕ್ಷಕರ ಕಾರ್ಯಾಗಾರದಲ್ಲಿ ಜಗದೀಶ್ ರೈ ತುಂಬೆ ಅವರು ಎರಡು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾದರು. ಸಂಘದ ಪ್ರಧಾನ...