ಬಂಟ್ವಾಳ: ಪುರಸಭೆಯ ಅಧಿಕಾರ ಹಸ್ತಾಂತರ ವಿಳಂಬದ ಬಗ್ಗೆ ಬಂಟ್ವಾಳ ವಿಧಾನಸಭಾ ಕ್ಷೇತ್ರ ಸಮಿತಿ ವತಿಯಿಂದ ಬುಧವಾರ ಬಂಟ್ವಾಳ ಪುರಸಭೆಯ ಮುಖ್ಯಾಧಿಕಾರಿ ರೇಖಾ ಜೆ.ಶೆಟ್ಟಿ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಬಂಟ್ವಾಳ ಪುರಸಭೆಯ ಚುನಾವಣೆ ನಡೆದು ಸುಮಾರು 10 ತಿಂಗಳು ಕಳೆದರೂ ಚುನಣಾಯಿತ ಸದಸ್ಯರ ಅಧಿಕಾರ ಸ್ವೀಕಾರ ಮತ್ತು ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕಾ ಪ್ರಕ್ರಿಯೆ ಇನ್ನೂ ನಡೆದಿಲ್ಲ. ಇದರಿಂದ ಪುರಸಭಾ ವ್ಯಾಪ್ತಿಯ ಅಭಿವೃದ್ಧಿ ಕಾರ್ಯಕ್ಕೆ ತೊಡಕು ಉಂಟಾಗಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಕೆಲವು ರಾಜಕೀಯ ಪಕ್ಷದ ಪ್ರತಿನಿಧಿಗಳು ಮೀಸಲಾತಿ ಬಗ್ಗೆ ನ್ಯಾಯಾಲದಲ್ಲಿ ತಕರಾರು ಎತ್ತಿದ್ದು, ಈ ಕಾರಣದಿಂದಾಗಿ ಅಧಿಕಾರ ಹಸ್ತಾಂತರ ವಿಳಂಬವಾಗುತ್ತಿದೆ. ಆದುದರಿಂದ ಈ ಸಂಬಂಧ ಬಾಕಿ ಇರುವ ದಾವೆಗಳನ್ನು ತ್ವರಿತ ನ್ಯಾಯಾಲಯಗಳಲ್ಲಿ ವಿಲೇವಾರಿ ನಡೆಸುವಂತೆ ರಾಜ್ಯಪಾಲರ ಮೂಲಕ ವಿನಂತಿಸುತ್ತಿದ್ದೇವೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಬಂಟ್ವಾಳ ಕ್ಷೇತ್ರ ಸಮಿತಿಯ ಅಧ್ಯಕ್ಷ ಯೂಸುಫ್ ಆಲಡ್ಕ, ಕಾರ್ಯದರ್ಶಿ ಇಸ್ಮಾಯಿಲ್ ಭಾವ, ಪುರಸಭಾ ಸದಸ್ಯರಾದ ಮುನಿಷ್ ಅಲಿ, ಇದ್ರಿಸ್ ಪಿಜೆ, ಕ್ಷೇತ್ರ ಸಮಿತಿಯ ಸದಸ್ಯರಾದ ಮಜೀದ್ ಆಲಡ್ಕ, ಇಸಾಕ್ ತಲಪಾಡಿ ಹಾಜರಿದ್ದರು.
