Friday, July 11, 2025

ಪತ್ರಕರ್ತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಸಿಎಂ ಗೆ ಮನವಿ

ಮಂಗಳೂರು: ಕೋರೋನಾ ಸೋಂಕಿನಿಂದ ಮೃತಪಟ್ಟ ಯಶವಂತ ಐಕಳ ಅವರ ಕುಟುಂಬಕ್ಕೆ ಆರ್ಥಿಕ ನೆರವು ನೀಡಬೇಕು.‌ ಪತ್ರಕರ್ತರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಲಾಯಿತು. ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು. ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್, ಪ್ರೆಸ್ ಕ್ಲಬ್ ಅಧ್ಯಕ್ಷ ಅನ್ನು ಮಂಗಳೂರು, ಪತ್ರಕರ್ತರ ಸಂಘದ ಕೋಶಾಧಿಕಾರಿ ಬಿ.ಎನ್.ಪುಷ್ಪರಾಜ್, ಪತ್ರಕರ್ತರ ಗೃಹ ನಿರ್ಮಾಣ ಸಹಕಾರ ಸಂಘದ ನಿರ್ದೇಶಕ ಸುಖ್ ಪಾಲ್ ಪೊಳಲಿ ಉಪಸ್ಥಿತರಿದ್ದರು.

More from the blog

ಬಂಟ್ವಾಳದಲ್ಲಿ ಡೆಂಗ್ಯೂ ವಿರೋಧಿ ಮಾಸಾಚರಣೆ ಮತ್ತು ಅರಿವು ಕಾರ್ಯಕ್ರಮ.. 

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಛೇರಿ, ಬಂಟ್ವಾಳ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಛೇರಿ ವತಿಯಿಂದ ಬಂಟ್ವಾಳ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ...

ಗುರುಪೂರ್ಣಿಮಾ ಪ್ರಯುಕ್ತ ಅಮ್ಟೂರಿನಲ್ಲಿ ಗುರುವಂದನಾ ಕಾರ್ಯಕ್ರಮ..

ಬಂಟ್ವಾಳ : ಬಿಜೆಪಿ ಜಿಲ್ಲಾ ಕಾರ್ಯದರ್ಶಿಯಾದ ದಿನೇಶ್ ಆಮ್ಟೂರು ಇವರ ನೇತೃತ್ವದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾಥಮಿಕ ಶಿಕ್ಷಣವನ್ನು ಮಾಡಲು ಪ್ರೇರಣೆ ಕೊಟ್ಟಂತಹ ಗುರುಗಳಾದ ಕಲ್ಲಡ್ಕ ಶ್ರೀ ರಾಮ ವಿದ್ಯಾ ಕೇಂದ್ರದ ಮುಖ್ಯೋಪಾಧ್ಯಾಯರಾದ...

ಗುರುಪೂರ್ಣಿಮಾ ಪ್ರಯುಕ್ತ ಪ್ರಸೂತಿ ತಜ್ಞೆ ವೆಂಕಮ್ಮರಿಗೆ ಬಿಜೆಪಿ ವತಿಯಿಂದ ಗೌರವರ್ಪಣೆ..

ಬಂಟ್ವಾಳ : ತಾಲೂಕಿನ ಕೊಡಂಬೆಟ್ಟು ಪರಿಸರದಲ್ಲಿ ನೂರಾರು ಮಂದಿಗಳ ಬಾಳಿನಲ್ಲಿ ಬೆಳಕು ಪ್ರಜ್ವಲಿಸಿದ ಪ್ರಸೂತಿ ತಜ್ಞೆ ವೆಂಕಮ್ಮ ಎಂಬವರಿಗೆ ಗುರು ಪೂರ್ಣಿಮಾ ದಿನಾಚರಣೆಯ ಪ್ರಯುಕ್ತ. ಬಿಜೆಪಿ ವತಿಯಿಂದ ಪಕ್ಷದ ನಾಯಕಿ ಸುಲೋಚನ ಜಿ....

ಕೆ.ಪಿ.ಸುಲೈಮಾನ್ ಹಾಜಿ ಕನ್ಯಾನ, ಹ್ಯಾಪಿ ಸ್ಟಾರ್ ಗ್ರೂಪ್ ಇವರ ವತಿಯಿಂದ ಸಾಮೂಹಿಕ ವಿವಾಹ..

ಬಂಟ್ವಾಳ : ಕೆ.ಪಿ.ಸುಲೈಮಾನ್ ಹಾಜಿ ಕನ್ಯಾನ (ಅಬುದಾಬಿ), ಹ್ಯಾಪಿ ಸ್ಟಾರ್ ಗ್ರೂಪ್ ಇವರ ವತಿಯಿಂದ ಜುಲೈ 13 ರಂದು ಮಂಗಳೂರಿನ ಫಾದರ್ ಮುಲ್ಲರ್ ಕನ್ವೆನ್ಷನ್ ಹಾಲ್ ನಲ್ಲಿ ನಡೆಯಲಿರುವ ಕೆ.ಪಿ.ಸುಲೈಮಾನ್ ಹಾಜಿ ಕನ್ಯಾನ...