ಬಂಟ್ವಾಳ: ಬಜರಂಗದಳ ಕರ್ನಾಟಕ ದಕ್ಷಿಣ ಪ್ರಾಂತ ಸಹ ಸಂಚಾಲಕ ರಘು ಸಕಲೇಶಪುರ ಇವರನ್ನು ವಿರೋಧಿ ಗಳ ಕುಮ್ಮಕ್ಕಿನಿಂದ ಪೋಲಿಸ್ ಇಲಾಖೆ ಹಾಗೂ ರಾಜ್ಯ ಸರಕಾರ ಹಾಸನ ಜಿಲ್ಲೆ ಯಿಂದ ಗಡೀಪಾರು ಮಾಡಿದ್ದು.
ಇದನ್ನು ಖಂಡಿಸಿ ಹಾಗೂ ತಕ್ಷಣ ಗಡೀಪಾರು ನ್ನು ಹಿಂಪಡೆದುಕೊಳ್ಳಬೇಕೆಂದು ಆಗ್ರಹಿಸಿ ವಿಶ್ವ ಹಿಂದೂ ಪರಿಷತ್ ಬಜರಂಗದಳ ಬಂಟ್ವಾಳ ಪ್ರಖಂಡ ಇದರ ವತಿಯಿಂದ ರಾಜ್ಯಪಾಲ ರಿಗೆ ಬಂಟ್ವಾಳ ತಹಸಿಲ್ದಾರರ ಮೂಲಕ ಮನವಿ ನೀಡಲಾಯಿತು.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲಾ ಗೋರಕ್ಷಾ ಪ್ರಮುಖ್ ಅಶೋಕ್ ಶೆಟ್ಟಿ ಸರಪಾಡಿ, ಬಜರಂಗದಳದ ಪ್ರಮುಖ ರಾದ ಗುರುರಾಜ್ ಬಂಟ್ವಾಳ, ಬಜರಂಗದಳ ಬಂಟ್ವಾಳ ಪ್ರಖಂಡ ಸಂಚಾಲಕ ಅಕೇಶ್ ಬೆಂಜನಪದವು, ವಿಟ್ಲ ಪ್ರಖಂಡ ವಿಶ್ವ ಹಿಂದೂ ಪರಿಷತ್ ಸಹ ಕಾರಿಯದರ್ಶಿ ಲೋಹಿತ್ ಪನೋಲಿಬೈಲ್, ಅಶ್ವಥ್ ಪುಂಜಾಲಕಟ್ಟೆ, ತಿಲಕ್, ದರ್ಶನ್, ವಿಶು, ಪ್ರದೀಪ್, ಅಭಿಷೇಕ್ ಉಪಸ್ಥಿತರಿದ್ದರು.
