ಬಂಟ್ವಾಳ: ಕೋವಿಡ್ -19 ರೋಗದ ನಿಯಂತ್ರಣಕ್ಕಾಗಿ ಸರಕಾರ ನೀಡುವ ಲಸಿಕೆಯನ್ನು ವ್ಯವಸ್ಥಿತವಾಗಿ ವಿತರಿಸಲು ಕ್ರಮಕೈಗೊಳ್ಳಬೇಕು ಎಂದು ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಶಾಸಕರಾದ ರಾಜೇಶ್ ನಾಯ್ಕ್ ಅವರಿಗೆ ಬಂಟ್ವಾಳ ತಾಲೂಕು ಕುಲಾಲ ಹಿರಿಯ ನಾಗರಿಕರ ಕ್ಷೇಮಭಿವೃದ್ಧಿ ಸಂಘದ ಪರವಾಗಿ ಮನವಿ ಸಲ್ಲಿಸಲಾಯಿತು.


ಪ್ರಸ್ತುತ ಲಸಿಕೆಯು ಪ್ರಾಥಮಿಕ ಮತ್ತು ಸಮುದಾಯ ಅರೋಗ್ಯ ಕೇಂದ್ರದಲ್ಲಿ ವಿತರಿಸುತ್ತಿದ್ದು, ಜನರಿಗೆ ವಾಹನವಿಲ್ಲದೆ ಹೋಗಿ ಬರಲು ಕಷ್ಟವಾಗುತ್ತಿದೆ, ಹಾಗಾಗಿ ಪಲ್ಸ್ ಪೋಲಿಯೊ ಲಸಿಕೆ ನೀಡಿದಂತೆ ಕೋವಿಡ್ ಲಸಿಕೆಯನ್ನು ಗ್ರಾಮ ಪಂಚಾಯತು, ಶಾಲೆ, ಅಂಗನವಾಡಿಗಳಲ್ಲಿ ದಿನಾಂಕಗಳನ್ನು ನಿಗದಿಪಡಿಸಿ, ಪ್ರಥಮವಾಗಿ ಹಿರಿಯ ನಾಗರಿಕರಿಗೆ ನಂತರ 45 ವರ್ಷ ಮೇಲ್ಪಟ್ಟವರಿಗೆ ಕೊನೆಗೆ ಇತರರಿಗೆ ವಿತರಿಸುವರೇ ಕ್ರಮಕೈಗೊಳ್ಳಬೇಕಾಗಿ ವಿನಂತಿಸಲಾಗಿದೆ. ನಿಯೋಗದಲ್ಲಿ ಸಂಘದ ಕಾರ್ಯದರ್ಶಿ ಶೇಷಪ್ಪ ಮಾಸ್ಟರ್, ಸದಸ್ಯ ದೊಂಬಯ್ಯ ಕುಲಾಲ್, ಯುವವೇದಿಕೆ ಜಿಲ್ಲಾಧ್ಯಕ್ಷ ಸುಕುಮಾರ್ ಬಂಟ್ವಾಳ್, ಸಂಚಾಲಕ ಕಾರ್ತಿಕ್ ಮಯ್ಯರಬೈಲ್, ಪುನೀತ್ ಭಂಡಾರಿಬೆಟ್ಟು ವಿನೀಶ್ ಕಾಮಾಜೆ ಜೊತೆಗಿದ್ದರು.












