ಬಂಟ್ವಾಳ: ಮಂಗಳೂರು ಬಿಸಿರೋಡ್ ಬೆಳ್ತಂಗಡಿ ಮತ್ತು ಬೆಳ್ತಂಗಡಿ ಬಿಸಿರೋಡ್ ಮಂಗಳೂರು ನಡುವೆ ಒಡಾಡುವ ಕೆ.ಎಸ್.ಆರ್.ಟಿ.ಸಿ ಬಸ್ ಗಳ ಸಂಖ್ಯೆ ಯನ್ನು ಹೆಚ್ಚು ಮಾಡುವಂತೆ ಒತ್ತಾಯಿಸಿ ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು ಅವರು ಇಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರಿಗೆ ಬೆಳಗಾವಿಯಲ್ಲಿ ಮನವಿ ಮಾಡಿದರು.


ಬೆಳ್ತಂಗಡಿ ಮಂಗಳೂರು ನಡುವೆ ಸಂಚರಿಸುವ ಸಾರಿಗೆ ಬಸ್ ಗಳ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ತೀರಾ ಕಡಿಮೆ ಯಾಗಿದ್ದು ಬಂಟ್ವಾಳ ಕ್ಷೇತ್ರ ದ ಸಾರ್ವಜನಿಕ ರಿಗೆ ವಿದ್ಯಾರ್ಥಿ ಗಳಿಗೆ ಗ್ರಾಮಾಂತರ ಭಾಗದಿಂದ ದಿನಿನಿತ್ಯ ಸಂಚರಿಸುವ ಕಾರ್ಮಿಕರಿಗೆ ಸಾಕಷ್ಟು ತೊಂದರೆಯಾಗುತ್ತಿದೆ ಎಂದು ಮನವಿಯ ಲ್ಲಿ ತಿಳಿಸಿದ್ದಾರೆ.
ಜೊತೆಗೆ ಬೆಳಿಗ್ಗೆ ಮತ್ತು ಸಂಜೆ ಹೊತ್ತಿನಲ್ಲಿ ಈ ಭಾಗಕ್ಕೆ ಸಂಚರಿಸುವ ವಿದ್ಯಾರ್ಥಿಗಳು ಬಸ್ ನಲ್ಲಿ ನೇತಾಡುವ ದ್ರಶ್ಯ ಕೂಡಾ ಕಾಣುತ್ತೇವೆ. ಒಂದು ಇದರಿಂದ ಯಾವುದೇ ದುರ್ಘಟನೆ ಗಳು ನಡೆಯುವ ಸಂದರ್ಭ ಕೂಡಾ ಇದೆ ಹಾಗಾಗಿ ಸಾರ್ವಜನಿಕ ರಿಗೆ ತೊಂದರೆಯಗುವಯದನ್ನು ತಪ್ಪಿಸಲು ಸೂಕ್ತ ವಾದ ವ್ಯವಸ್ಥೆ ಕಲ್ಲಿಸಲು ಮನವಿ ಮಾಡಿದರು.