ಬಂಟ್ವಾಳ: ತಾಲೂಕಿನ ಮಂಚಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ದಾರಿದೀಪ ಹಾಗೂ ಹೈಮಾಸ್ಕ್ ದೀಪಗಳನ್ನು ಸರಿಪಡಿಸುವಂತೆ ಒತ್ತಾಯಿಸಿ ಎಸ್ಡಿಪಿಐ ಮಂಚಿ ವಲಯ ಸಮಿತಿಯಿಂದ ಸೋಮವಾರ ಬಂಟ್ವಾಳ ತಾಪಂ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ ಅವರಿಗೆ ಮನವಿ ಸಲ್ಲಿಸಲಾಯಿತು.
ಇಲ್ಲಿನ ಹೈಮಾಸ್ಕ್ ಮತ್ತು ದಾರಿದೀಪಗಳು ಹದಗೆಟ್ಟು ಕೆಲವು ತಿಂಗಳಾಗುತ್ತಾ ಬಂದರೂ ಇದುವರೆಗೂ ಸರಿಪಡಿಸುವ ಕಾರ್ಯ ನಡೆದಿಲ್ಲ. ಈ ಬಗ್ಗೆ ಸರಿಪಡಿಸುವಂತೆ ಕೆಲ ತಿಂಗಳ ಹಿಂದೆಯೇ ಪಂಚಾಯತ್‌ಗೆ ಮನವಿ ಸಲ್ಲಿಸಲಾಗಿತ್ತು. ಆದರೆ, ಇದುವರೆಗೂ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಸರಿಪಡಿಸದೇ ಇದ್ದಲ್ಲಿ ಗ್ರಾಪಂ ಮುಂಭಾಗದಲ್ಲಿ ಧರಣಿ ನಡೆಸುವುದಾಗಿ ಸಂಘಟನೆಯು ಮನವಿಯಲ್ಲಿ ತಿಳಿಸಿದೆ.
ಈ ಸಂದರ್ಭದಲ್ಲಿ ಎಸ್ಡಿಪಿಐ ಮಂಚಿ ವಲಯ ಸಮಿತಿ ಅಧ್ಯಕ್ಷ ಫೈಝಲ್ ಮಂಚಿ, ಎಸ್ಡಿಪಿಐ ಬಂಟ್ವಾಳ ಸಮಿತಿ ಸದಸ್ಯ ಮಲಿಕ್ ಕೊಳಕೆ, ಪಿಎಫ್‌ಐ ಕುಕ್ಕಾಜೆ ಘಟಕಾಧ್ಯಕ್ಷ ಶಾಕಿರ್ ಕುಕ್ಕಾಜೆ, ಅಶ್ರಫ್ ಬಾಬುಕೋಡಿ, ನೌಫಲ್ ಕುಕ್ಕಾಜೆ ಸೈಟ್, ಫೈಝಾನ್ ಕುಕ್ಕಾಜೆ ಉಪಸ್ಥಿತರಿದ್ದರು.












