Saturday, July 5, 2025

ಆರ್.ಎಸ್.ಎಸ್. ನಿಷೇದ ಬಗೆಗಿನ ಸಚಿವರ ಬೇಜವಾಬ್ದಾರಿ ಹೇಳಿಕೆ ಖಂಡನೀಯ : ಪ್ರಭಾಕರ ಪ್ರಭು

ಬಂಟ್ವಾಳ : ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದಾಗ ಆರ್. ಎಸ್ ಎಸ್. ನಿಷೇಧಿಸುವ ತೀರ್ಮಾನ ಮಾಡುತ್ತೇವೆ ಎಂದು ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ ಖರ್ಗೆ ನೀಡಿರುವ ದುರಹಂಕಾರದ, ದುರ್ನಡತೆಯ ಬೇಜವಾಬ್ದಾರಿ ಹೇಳಿಕೆಯನ್ನು ಬಂಟ್ವಾಳ ಬಿಜೆಪಿ ಮುಖಂಡರಾದ ಪ್ರಭಾಕರ ಪ್ರಭು ತೀವ್ರವಾಗಿ ಖಂಡಿಸಿದ್ದಾರೆ.

ಅವರು ಈ ಬಗ್ಗೆ ಪತ್ರಿಕಾ ಹೇಳಿಕೆಯನ್ನು ನೀಡುತ್ತಾ ಸಚಿವ ಪ್ರಿಯಾಂಕ ಖರ್ಗೆಯವರು ಮೊದಲು ತನ್ನ ಸಂಬಂಧ ಪಟ್ಟ ಖಾತೆಯ ಇಲಾಖೆಯಲ್ಲಿ ಲೋಪ ದೋಷ ಗಳನ್ನು ಸರಿಪಡಿಸುವಲ್ಲಿ ತೀರ್ಮಾನ ಮಾಡಲಿ, ಹಾಗೂ ಗ್ರಾಮಾಂತರ ಪ್ರದೇಶ ಗಳಲ್ಲಿನ ಗ್ರಾಮ ಪಂಚಾಯತ್ ಗಳಲ್ಲಿ ನೂರಾರು ಸಮಸ್ಯೆ ಗಳಿಗೆ ಪರಿಹಾರ ಕಂಡುಕೊಳ್ಳಲು ಅಧಿಕಾರಿಗಳ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಿ! ಅದೂ ಬಿಟ್ಟು ಕೈಯಲ್ಲಿ ಆಗದ ಇಲ್ಲಸಲ್ಲದ ದುಸಾಹಸಕ್ಕೆ ಆಲೋಚನೆ ಮಾಡೋದು ಬೇಡ. ಇದೆಲ್ಲಾ ಸಚಿವರ ವ್ಯಕ್ತಿತ್ವಕ್ಕೆ ತಕ್ಕದಾದ ಹೇಳಿಕೆ ಅಲ್ಲ.

ಆರ್. ಎಸ್. ಎಸ್. ಸ್ಥಾಪನೆ ಯಾದಗಿನಿಂದ ನಿಷೇದದ ಬಗ್ಗೆ ಮಾತನಾಡಿದ ಅದೆಷ್ಟೋ ಮಂದಿ ಅತೀ ಬುದ್ದಿವಂತರು ಹೇಳದೇ ಕೇಳದೇ ದೇಶದಲ್ಲಿ ಕಣ್ಮರೆ ಯಾಗಿದ್ದಾರೆ. ಅದ್ರೆ ಆರ್. ಎಸ್. ಎಸ್. ಮಾತ್ರ ದಿನದಿಂದ ದಿನಕ್ಕೆ, ವರ್ಷದಿಂದ ವರ್ಷಕ್ಕೆ, ಬೆಳೆಯುತ್ತಾ ಬೆಳೆಯುತ್ತಾ ವಟವ್ರಕ್ಷ ದಂತೆ ಬೆಳೆದು ನಿಂತು ಇದೀಗ ಶತಮಾನೋತ್ಸವದ ಹೊಸ್ತಿಲಲ್ಲಿ ಬಂದು ನಿಂತಿದೆ. ದೇಶ ವ್ಯಾಪ್ತಿಯಲ್ಲಿ ಮೀರಿಕೊಂಡು ಪ್ರಪಂಚದಾದ್ಯಂತ ಪಸರಿಸಿಕೊಂಡಿದ್ದು ಜಗತ್ತಿನ ಅತೀ ದೊಡ್ಡದಾದ ಸಂಘಟನೆಯಾಗಿ ಸಾಗರವಾಗಿ ಹೊರಹೊಮ್ಮಿರುವುದು ತಮಗೆ ತಿಳಿದಿರಿಲ್ಲವೇ?.

ಮಲ್ಲಿಕಾರ್ಜುನ ಖರ್ಗೆ ಭೇಟಿ ನೆನಪಿಲ್ಲವೇ 2002ರಲ್ಲಿ ಜನವರಿಯಲ್ಲಿ ಬೆಂಗಳೂರಿನ ನಾಗವರದಲ್ಲಿ ನಡೆದ ರಾಷ್ಟೀಯ ಸ್ವಯಂ ಸೇವಕ ಸಂಘದ ಸಮರಸತಾ ಸಂಗಮಕ್ಕೆ ತಮ್ಮ ತಂದೆಯವರಾದ ಮಲ್ಲಿಕಾರ್ಜುನ ಖರ್ಗೆಯವರು ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದು ನೆನಪಿಲ್ಲವೇ ಎಂದೂ ಪ್ರಶ್ನಿಸಿದಾರೆ.

ಇಂತಹ ದೈತ್ಯ ಸಂಘಟನೆ ಬಗ್ಗೆ ಮಾತನಾಡುವ ನೈತಿಕತೆಯೇ ಸಚಿವ ಪ್ರಿಯಾಂಕ ಖರ್ಗೆಯಲ್ಲಿ ಇಲ್ಲ ಎಂದೂ ಪ್ರಭುರವರು ಟೀಕಿಸಿದ್ದಾರೆ.

More from the blog

Bantwal Rain Damage: ಅನೇಕ ಮನೆಗಳಿಗೆ ಹಾನಿ

ಬಂಟ್ವಾಳ: ಜುಲೈ 3 ರಂದು ರಾತ್ರಿ ಸುರಿದ ಮಳೆಗೆ ತಾಲೂಕಿನ ಅನೇಕ ಕಡೆಗಳಲ್ಲಿ ಹಾನಿ ಸಂಭವಿಸಿದ್ದು, ಲಕ್ಷಾಂತರ ರೂ‌ ನಷ್ಟ ಸಂಭವಿಸಿದೆ. ನೆಟ್ಲ ಮುನ್ನೂರು ಗ್ರಾ.ಪಂ.ವ್ಯಾಪ್ತಿಯ ಏಮಾಜೆ ಭಜನಾ ಮಂದಿರ ಬಳಿಯ ದೇವಪ್ಪ...

Rural station: ಮೇಯಲು ಬಿಟ್ಟ ಕರುಗಳ ಕಳವು, ಸಿ.ಸಿ.ಟಿ.ವಿಯಲ್ಲಿ ದೃಶ್ಯ ಸೆರೆ

ಬಂಟ್ವಾಳ: ಮೇಯಲು ಹೋಗಿದ್ದ ಕರುಗಳು ನಾಪತ್ತೆ, ಕರುಗಳನ್ನು ಕಾರಿನಲ್ಲಿ ತುಂಬಿಸಿಕೊಂಡು ಕದ್ದುಕೊಂಡುವ ಹೋಗುವ ದೃಶ್ಯ ಸಿ.ಸಿ.ಕ್ಯಾಮರಾದಲ್ಲಿ ಸೆರೆಯಾಗಿರುವುದು,ಮಾಲೀಕರಿಗೆ ದೊರಕಿದ್ದು, ಇದೀಗ ಕರುಗಳನ್ನು ಪತ್ತೆ ಮಾಡಿಕೊಡಿ ಎಂದು ಬಂಟ್ವಾಳ ಗ್ರಾಮಾಂತರ ಪೋಲೀಸರಿಗೆ ದೂರು ನೀಡಿದ...

B. C. ROAD : ಜು.19ರಿಂದ 27ರವರೆಗೆ ಭಾರತ ದರ್ಶನ ಯಕ್ಷಗಾನ ತಾಳಮದ್ದಳೆ ನವಾಹ..

ಬಂಟ್ವಾಳ : ಬಿ.ಸಿ.ರೋಡಿನ ತುಳು ಶಿವಳ್ಳಿ ಸಭಾಭವನದಲ್ಲಿ ವಿಶ್ವಭಾರತಿ ಯಕ್ಷ ಸಂಜೀವಿನಿ ಟ್ರಸ್ಟ್ ಮುಡಿಪು ಅವರಿಂದ ತುಳು ಶಿವಳ್ಳಿ ಸೇವಾ ಟ್ರಸ್ಟ್ ಬಂಟ್ವಾಳ ತಾಲೂಕು ಸಹಭಾಗಿತ್ವದಲ್ಲಿ ಭಾರತ ದರ್ಶನ ಎಂಬ ಯಕ್ಷಗಾನ ತಾಳಮದ್ದಳೆ...

ಬ್ರೋಕರ್ ಗಳ ಮಾತಿಗೆ ತಲೆಕೆಡಿಸಿಕೊಳ್ಳುವುದಿಲ್ಲ, ಭ್ರಷ್ಟಾಚಾರಕ್ಕೆ ಅವಕಾಶ ನೀಡುವುದಿಲ್ಲ: ಬೇಬಿ ಕುಂದರ್….

ಬಂಟ್ವಾಳ : ಬ್ರೋಕರ್ ಗಳ ಮಾತಿಗೆ ತಲೆಕೆಡಿಸಿಕೊಳ್ಳುವುದಿಲ್ಲ, ಜನರ ಸಮಸ್ಯೆ ಪರಿಹಾರ ಮಾಡುತ್ತೇನೆ, ಭ್ರಷ್ಟಾಚಾರ ರಹಿತ ಕೆಲಸಕ್ಕೆ ಒತ್ತು ನೀಡುವುದಾಗಿ ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಬೇಬಿ‌ಕುಂದರ್ ತಿಳಿಸಿದ್ದಾರೆ. ನಗರ ಯೋಜನಾ ಪ್ರಾಧಿಕಾರದ...