ಬಂಟ್ವಾಳ: ತುಳು ಜಾನಪದ ಕ್ರೀಡೆ ಕಂಬಳ ಆಯೋಜನೆ ಹಾಗೂ ವಿವಿಧ ಧಾರ್ಮಿಕ, ಆರೋಗ್ಯ, ಶಿಕ್ಷಣ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವ ಉಳಿ ಗ್ರಾಮದ ಕಕ್ಯಪದವು ಮೈರ ಶ್ರೀ ರಾಮಾಂಜನೇಯ ಗೆಳೆಯರ ಬಳಗ ಅವರಿಗೆ ಕರ್ನಾಟಕ ಸಂಘ ರತ್ನ ಪ್ರಶಸ್ತಿ ಲಭಿಸಿದೆ.
ಅಖಿಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನ ಸಮಿತಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಉಡುಪಿ ಜಿಲ್ಲಾ ಅಜೆಕಾರು ಹೋಬಳಿ ಕನ್ನಡ ಸಾಹಿತ್ಯ ಪರಿಷತ್, ಕರ್ನಾಟಕ ಬ್ಯಾಂಕ್ ಸಂಯುಕ್ತ ಆಶ್ರಯದಲ್ಲಿ ಕಾರ್ಕಳ ಬಾಹುಬಲಿ ಬೆಟ್ಟ ಶ್ರೀ ಗೋಮಟೇಶ್ವರ ಸನ್ನಿಧಿಯಲ್ಲಿ ಜ. 20ರಂದು ರಾತ್ರಿ ನಡೆದ ಬೆಳದಿಂಗಳ ತುಳು ಸಾಹಿತ್ಯ ಸಮ್ಮೇಳನದಲ್ಲಿ ಕರ್ನಾಟಕ ಸಂಘ ರತ್ನ ರಾಜ್ಯ ಮಟ್ಟದ ಗೌರವ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಶ್ರೀ ರಾಮಾಂಜನೇಯ ಗೆಳೆಯರ ಬಳಗದ ಅಧ್ಯಕ್ಷ ಉಮೇಶ್ ಪೂಜಾರಿ, ಮಾಜಿ ಅಧ್ಯಕ್ಷ, ನ್ಯಾಯವಾದಿ ರಂಜಿತ್ ಮೈರ, ಸುರೇಂದ್ರ ಕಂಚಲಪಲ್ಕೆ, ಶೇಖರ ಕಂಚಲಪಲ್ಕೆ, ಹರ್ಷಿತ್ ಪುಣ್ಕೆದಡಿ, ನಟೇಶ್ ಕುಕ್ಕಾಜೆ ಮತ್ತಿತರ ಸದಸ್ಯರು ಪ್ರಶಸ್ತಿಯನ್ನು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಸಮ್ಮೇಳನ ಗೌರವಾಧ್ಯಕ್ಷ ಬನ್ನಂಜೆ ಬಾಬು ಅಮೀನ್, ಅಧ್ಯಕ್ಷ ಶೇಖರ ಅಜೆಕಾರು, ಉದ್ಘಾಟಕ ಕಡಂದಲೆ ಸುರೇಶ್ ಭಂಡಾರಿ, ಕನ್ನಡ ಸಾಹಿತ್ಯ ಪರಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಹುರ್ಲಾಡಿ ರಘುವೀರ್ ಶೆಟ್ಟಿ, ಸುರೇಶ್ ಶೆಟ್ಟಿ ಗುರ್ಮೆ, ಉಡುಪಿ ವಾಸುದೇವ ಭಟ್, ಡಾ| ಸಂತೋಷ್ ಕುಮಾರ್ ಶೆಟ್ಟಿ, ಡಾ| ಗಣನಾಥ ಎಕ್ಕಾರ್, ಬಿ.ವಿ. ಮಲ್ಲಿಕಾರ್ಜುನಯ್ಯ, ಪುರಂದರ ಪೂಜಾರಿ, ರಾಧಾಕೃಷ್ಣ ಉಳಿತ್ತಡ್ಕ, ಜ್ಯೋತಿ ಗುರುಪ್ರಸಾದ್, ಎಚ್. ಗೋಪಾಲ್ ಭಂಡಾರಿ, ಗಣೇಶ್ ಕಾರ್ಣಿಕ್ ಮತ್ತಿತರರು ಉಪಸ್ಥಿತರಿದ್ದರು.

