ಬಂಟ್ವಾಳ: ಪದ್ಮಶಾಲಿ ದ.ಕ.ಜಿಲ್ಲಾ ಮಹಾಸಭಾ ವತಿಯಿಂದ 27ನೇ ಪದ್ಮಶಾಲಿ ಅವಿಭಜಿತ ಜಿಲ್ಲಾ ಮಟ್ಟದ ಕ್ರೀಡೋತ್ಸವ ಬಂಟ್ವಾಳ ತಾಲೂಕು ಸಂಗಬೆಟ್ಟು ಶ್ರೀ ವೀರಭದ್ರ ಸ್ವಾಮೀ ಮಹಮ್ಮಾಯಿ ದೇವಸ್ಥಾನದ ಮೈದಾನದಲ್ಲಿ ಡಿ. 23ರಂದು ಜರಗಲಿದೆ.
ದ.ಕ. ಜಿಲ್ಲಾ ಪದ್ಮಶಾಲಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಎಂ.ಜಯರಾಂ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿರುವರು. ಬಾರ್ಕೂರು ಶ್ರೀ ಬ್ರಹ್ಮಲಿಂಗ ವೀರಭದ್ರ ದುರ್ಗಾಪರಮೇಶ್ವರಿ ದೇವಸ್ಥಾನ ಆಡಳಿತ ಮೊಕ್ತೇಸರ ಸಿ. ಪುರುಷೋತ್ತಮ ಶೆಟ್ಟಿಗಾರ್ ಕ್ರೀಡಾಕೂಟವನ್ನು ಉದ್ಘಾಟಿಸಲಿರುವರು. ಜಿಲ್ಲಾ ಪದ್ಮಶಾಲಿ ವಿದ್ಯಾವರ್ಧಕ ಸಂಘದ ಮಾಜಿ ಅಧ್ಯಕ್ಷ ಎಸ್. ಸದಾನಂದ ಶೆಟ್ಟಿಗಾರ್ ಅವರು ಧ್ವಜಾರೋಹಣ ನಡೆಸಲಿರುವರು. ರಜತ ಮಹೋತ್ಸವ ಸಮಿತಿ ಅಧ್ಯಕ್ಷ ಎಸ್. ಶ್ರೀನಿವಾಸ್ ಶೆಟ್ಟಿಗಾರ್ ಮಂಗಳೂರು ಕ್ರೀಡಾಜ್ಯೋತಿಯನ್ನು ಹಸ್ತಾಂತರಿಸಲಿರುವರು. ಜಿಲ್ಲಾ ಪದ್ಮಶಾಲಿ ವಿದ್ಯಾವರ್ಧಕ ಸಂಘದ ಮಾಜಿ ಅಧ್ಯಕ್ಷ ಪಿ. ಪ್ರಭಾಕರ ಉಡುಪಿ ಕ್ರೀಡಾಕೂಟಕ್ಕೆ ಚಾಲನೆ ನೀಡಲಿರುವರು.
ಸಂಜೆ ಸಮಾರೋಪದಲ್ಲಿ ಉಡುಪಿ ಜಿಲ್ಲಾ ಪದ್ಮಶಾಲಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಓಂಪ್ರಕಾಶ್ ಡಿ. ಶೆಟ್ಟಿಗಾರ್ ಅಧ್ಯಕ್ಷತೆ ವಹಿಸಲಿರುವರು. ಉದ್ಯಮಿ ಮೋಹನ್ ಶೆಟ್ಟಿಗಾರ್ ಉಜಿರೆ ಮತ್ತು ಪ್ರಗತಿಪರ ಕೃಷಿಕ ಜಿ.ಆರ್. ಚಿತ್ತರಂಜನ್ ಬಹುಮಾನ ವಿತರಿಸಲಿರುವರು. ಮಾಜಿ ಅಧ್ಯಕ್ಷ ಗಿರೀಶ್ ಶೆಟ್ಟಿಗಾರ್ ವಿಟ್ಲ ಸಮಾರೋಪ ಭಾಷಣ ಮಾಡಲಿರುವರು. ಈ ಸಂದರ್ಭದಲ್ಲಿ ಸಾಧಕರನ್ನು ಸಮ್ಮಾನಿಸಲಾಗುವುದು ಎಂದು ಸಮಿತಿ ಪ್ರಕಟನೆ ತಿಳಿಸಿದೆ.

