ಬಂಟ್ವಾಳ : ಜಿಲ್ಲಾ ಆಡಳಿತ ಮತ್ತು ತಾಲೂಕು ಆಡಳಿತ , ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ , ಕಂದಾಯ ಇಲಾಖೆ ಬಂಟ್ವಾಳ ಮತ್ತು ಭಾರತೀಯ ಜೈನ್ ಮಿಲನ್ ಬಂಟ್ವಾಳ ಶಾಖೆ ಇದರ ಸಂಯುಕ್ತ ಆಶ್ರಯದಲ್ಲಿ ಮಹಾವೀರ ಜಯಂತಿ ಕಾರ್ಯಕ್ರಮವನ್ನು ಮಿನಿವಿಧಾನ ಸೌಧದ ಸಭಾಂಗಣದಲ್ಲಿ ತಾಲೂಕು ತಹಶೀಲ್ದಾರ್ ಸಣ್ಣರಂಗಯ್ಯ ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿದರು.

ಜೈನ ಧರ್ಮವು ವಿಶ್ವಕ್ಕೆ ಶಾಂತಿ ಸಹಬಾಳ್ವೆ ಅಹಿಂಸಾ ತತ್ವವನ್ನು ಸಾರಿದ ಭಗವಾನ್ ಶ್ರೀ ಮಹಾವೀರರ ಪುಣ್ಯಜನ್ಮದಿನದಂದು ಜೈನಭಾಂದವರಲ್ಲದೆ ಸರಕಾರದ ಮೂಲಕ ರಾಷ್ಟ್ರೀಯ ಹಬ್ಬ ಗಳ ಆಚರಣಾ ಸಮಿತಿ ಮೂಲಕ ಆಚರಿಸುವುದು ಶ್ಲಾಘನೀಯ ಹಾಗೂ ಮಹಾವೀರರ ಸಂದೇಶವನ್ನು ನಾವೆಲ್ಲಾ ಪಾಲಿಸುವುದು ಔಚಿತ್ಯವೂ ಎಂದು ಭಾರತೀಯ ಜೈನ್ ಮಿಲನ್ ವಲಯ-೮ರ ಉಪಾಧ್ಯಕ್ಷ ವೀರ್ ಸುದರ್ಶನ್ ಜೈನ್ ನುಡಿದರು. ಭಾರತೀಯ ಜೈನ್ ಮಿಲನ ಘಟಕದ ಅಧ್ಯಕ್ಷ ವೀರ್ ಬ್ರಿಜೇಶ್ ಜೈನ್ ಅಧ್ಯಕ್ಷತೆ ವಹಿಸಿದ್ದರು. ದ.ಕ.ಜಿಲ್ಲಾ ಪಂ.ಉಪಕಾರ್ಯದರ್ಶಿ ಮತ್ತು ಬಂಟ್ವಾಳ ತಾಲೂಕು ಸಹಾಯಕ ಚುನಾವಣಾ ಅಧಿಕಾರಿ ಮಹೇಶ್ , ಉಪತಹಶೀಲ್ದಾರ್ ರಾಜೇಶ್ ನಾಕ್, ರಾಷ್ಟ್ರೀಯ ಹಬ್ಬ ಗಳ ಆಚರಣಾ ಸಮಿತಿ ವಿಷಯ ನಿರ್ವಾಹಕ ಎನ್.ವಿಶುಕುಮಾರ್, ಭಾರತೀಯ ಜೈನ್ ಮಿಲನ್-8 ರ ಕಾರ್ಯದರ್ಶಿ ಸುಭಾಸ್ಚಂದ್ರ ಜೈನ್ , ಜೈನ ಸಮಾಜದ ಹಿರಿಯರಾದ ವೀರ್ ಜೀನ್ ರಾಜ ಅರಿಗ, ಜೈನ್ ಮಿನ್ ಕಾರ್ಯದರ್ಶಿ ವೀರಾಂಗನಾ ಗೀತಾ ಜಿನಚಂದ್ರ, ಕೋಶಾಧಿಕಾರಿ ಚಂದ್ರಕಾಂತ್ ಜೈನ್ ಪೆರಿಯಾರ್, ಬಂ.ಜೈನ್ ಮಿಲನ್ ನ ನಿಯೋಜಿತ ಅಧ್ಯಕ್ಷ ಡಾ.ಸುದೀಪ್ , ಕಾರ್ಯದರ್ಶಿ ಸನ್ಮತಿ ಜಯಕೀರ್ತಿ, ಕೋಶಾಧಿಕಾರಿ ಅಜಿತ್ ಕುಮಾರ್ ಜೈನ್, ಉಪಾಧ್ಯಕ್ಷ ರಾಜಪ್ರಸಾದ್ ಆರಿಗ, ಜೈನ್ ಮಿಲನ್ ಸದಸ್ಯರುಗಳಾದ ಸ್ವಪ್ನ ಚಂದ್ರಪ್ರಭ, ಭರತ್ ರಾಜ್ ಜೈನ್, ಮಹಾವೀರ್ ಜೈನ್ , ಧನಂಜಯ ಹೆಗಡೆ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಂತರ ಜೈನ್ ಮಿಲನ್ ಎಲ್ಲಾ ಪದಾಧಿಕಾರಿಗಳು ಬಂ.ತಾಲೂಕು ಸರಕಾರಿ ಆಸ್ಪತ್ರೆಗೆ ತೆರಳಿ ಹಣ್ಣು ಹಂಪಲು ವಿತರಿಸಿದರು. ಬಂ ತಾಲೂಕಿನ ಜಿನ ಚೈತ್ಯಾಲಯ ಗಳಲ್ಲಿ ಇಡೀ ದಿನ ಮಹಾವೀರ ಜಯಂತಿ ಪ್ರಯುಕ್ತ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಮಿಲನ್ ಎಲ್ಲಾ ಪದಾಧಿಕಾರಿಗಳು ಎಲ್ಲಾ ಬಸದಿಗಳಿಗೆ ತೆರಳಿ ಮಹಾವೀರರ ಸಂದೇಶವನ್ನು ಜೈನ ಶ್ರಾವಕರಿಗೆ ತಿಳಿಸಿ ದರು.