Friday, January 30, 2026

ಮಡಂತ್ಯಾರು ಸಿ.ಎ. ಬ್ಯಾಂಕ್ ವಿವಾದ ಅಧಿಕಾರಿಗಳ ಮಧ್ಯಸ್ಥಿಕೆಯಲ್ಲಿ ಸುಖಾಂತ್ಯ

ಬಂಟ್ವಾಳ : ಮಡಂತ್ಯಾರು ಸೇವಸಹಕಾರಿ ಬ್ಯಾಂಕ್ (ನಿ.) ಇದರ ಸಿಬ್ಬಂದಿಯೋರ್ವರು ಕರ್ತವ್ಯ ಮುಗಿಸಿ ವಾಪಾಸು  ಆಗುತ್ತಿದ್ದ ವೇಳೆ ಪುಂಜಾಲಕಟ್ಟೆ ಪೋಲೀಸರು ತಡೆದಿದ್ದರು ಎಂಬ ಕಾರಣಕ್ಕಾಗಿ ಪಡಿತರ ಯೂನಿಯನ್ ಸಂಘ ನೀಡಿದ ಕರೆಯಂತೆ ಬೆಳ್ತಂಗಡಿ ತಾಲೂಕಿನ್ಯದ್ಯಂತ ಪಡಿತರ ಸಾಮಾಗ್ರಿಗಳನ್ನು ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದರು.

ಈ ಹಿನ್ನಲೆಯಲ್ಲಿ ಸ್ಥಳಕ್ಕೆ ಬೆಳ್ತಂಗಡಿ ತಹಶೀಲ್ದಾರ್ ಗಣಪತಿ ಶಾಸ್ತ್ರಿ , ಬೆಳ್ತಂಗಡಿ ವೃತ್ತ ನಿರೀಕ್ಷಕ ಸಂದೇಶ್ , ಪುಂಜಾಲಕಟ್ಟೆ ಎಸ್. ಐ.ಸೌಮ್ಯ, ಯೂನಿಯನ್ ಅಧ್ಯಕ್ಷ ಸತೀಶ್ ಶೆಟ್ಟಿ, ಪ್ರಮುಖರಾದ ರಹಮಾನ್ ಪಡ್ಪು, ಜೋಯೆಲ್ ಮೆಂಡೋನ್ಸ್, ಬ್ಯಾಂಕ್ ಮ್ಯಾನೇಜರ್ ಅರವಿಂದ ಉಪಸ್ಥಿತಿ ಯಲ್ಲಿ ಮಾತುಕತೆ ನಡೆದು ಬಳಿಕ ಪ್ರಕರಣ ಸುಖಾಂತ್ಯ ನಡೆಯಿತು.
ಪುಂಜಾಲಕಟ್ಟೆ ಠಾಣಾ ಪೋಲೀಸರು ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಬ್ಯಾಂಕ್ ಸಿಬ್ಬಂದಿ ಐಡಿ ಕಾರ್ಡ್ ಹಾಕದೆ ಹೆಲ್ಮಟ್ ಧರಿಸದೆ ಸಂಚಾರ ಮಾಡುತ್ತಿದ್ದ ವೇಳೆ ಪೋಲೀಸರು ತಡೆದಿದ್ದರು.
ಐಡಿ ಕಾರ್ಡ್ ತೋರಿಸಿದ ಬಳಿಕ ಸಿಬ್ಬಂದಿ ಯನ್ನು ಬಿಟ್ಟಿದ್ದಾರೆ ಎಂಬ ಕಾರಣಕ್ಕಾಗಿ ಅವರು ಆರೋಪ ವ್ಯಕ್ತಪಡಿಸಿದ್ದರು.
ಇಂದು ಇವರೆಲ್ಲರ ಉಪಸ್ಥಿತಿ ಯಲ್ಲಿ ಪ್ರಕರಣ ಸುಖಾಂತ್ಯ.

More from the blog

ವಿಕಾಸ್ ಪುತ್ತೂರು ಅವರಿಗೆ ನೀಡಿದ ನೋಟಿಸ್ ಇಲಾಖೆಯ ಕಣ್ಣು ತಪ್ಪಿನಿಂದ ಆಗಿದ್ದಂತೆ!!!!

ಬಂಟ್ವಾಳ: ದ.ಕ.ಜಿಲ್ಲೆಯ ಬಂಟ್ವಾಳ ತಾಲೂಕಿನ ಬಿಜೆಪಿ ಯುವ ನಾಯಕ ವಿಕಾಸ್ ಪುತ್ತೂರು ಅವರಿಗೆ ದ್ವೇಷ ಭಾಷಣದ ಆರೋಪದ ಮೇಲೆ ಪೋಲೀಸ್ ಇಲಾಖೆ ನೀಡಿದ ನೋಟಿಸ್ ನ ವಿರುದ್ದ ಅಧಿವೇಶನದಲ್ಲಿ ವಿಧಾನ ಪರಿಷತ್ತು ಸದಸ್ಯ...

ಮಂಗಳೂರು : ಸ್ಟ್ರೀಟ್ ಫುಡ್ ಫೆಸ್ಟ್ ಗೆ ಚಾಲನೆ

ಮಂಗಳೂರು : ಕರಾವಳಿ ಉತ್ಸವದ ಅಂಗವಾಗಿ 3 ದಿನಗಳ ಸ್ಟ್ರೀಟ್ ಫುಡ್ ಫೆಸ್ಟ್ ಗೆ ಶುಕ್ರವಾರ ಚಾಲನೆ ನೀಡಲಾಯಿತು. ನಗರದ ಕದ್ರಿ ಪಾರ್ಕ್ ಮುಖ್ಯ ರಸ್ತೆಯಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ಖ್ಯಾತ ಚೆಫ್ ಶ್ರೀಯಾ...

Bantwal : ಫೆ.1ರಂದು ರಾಜ್ಯ ಸರಕಾರಿ ನೌಕರರ ಸಂಘದ ವಾರ್ಷಿಕ ಮಹಾಸಭೆ

ಬಂಟ್ವಾಳ : ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ವಾರ್ಷಿಕ ಮಹಾಸಭೆ ಹಾಗೂ ವಿಶ್ರಾಂತ ಸರಕಾರಿ ನೌಕರರು ಮತ್ತು ಸಾಧಕರಿಗೆ ಅಭಿನಂದನಾ ಸಮಾರಂಭ ಬಿ.ಸಿ.ರೋಡಿನ ಸರಕಾರಿ ನೌಕರರ ಸಭಾಭವನದಲ್ಲಿ ಫೆ.1ರಂದು ಭಾನುವಾರ ನಡೆಯಲಿದೆ. 2023-24...

ಫೆ.3ರಿಂದ 07ರವರೆಗೆ ಕಶೆಕೋಡಿ ಶ್ರೀ ಲಕ್ಮೀವೆಂಕಟರಮಣ ದೇವಸ್ಥಾನದ ಜಾತ್ರೆ ಹಾಗೂ ಬ್ರಹ್ಮರಥೋತ್ಸವ

ಬಂಟ್ವಾಳ: ಕಶೆಕೋಡಿ ಶ್ರೀ ಲಕ್ಮೀವೆಂಕಟರಮಣ ದೇವಸ್ಥಾನದ ಜಾತ್ರಮಹೋತ್ಸವ ಹಾಗೂ ಬ್ರಹ್ಮರಥೋತ್ಸವ ಬ್ರಹ್ಮ ಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತ್ರತ್ವದಲ್ಲಿ ಫೆ.3 ರಿಂದ 07 ರವರೆಗೆ ನಡೆಯಲಿದೆ ಎಂದು ಸುಧಾಕರ ಶೆಣೈ ಮರೋಳಿ...