ಬಂಟ್ವಾಳ: ಮಡಂತ್ಯಾರ್ ಪ್ರಾಥಮಿಕ ಸಹಕಾರಿ ಕೃಷಿ ಪತ್ತಿನ ಚುನಾವಣೆಯಲ್ಲಿ
ಮತದಾನದ ಹಕ್ಕನ್ನು ಪಡೆದಿರುವ ವ್ಯಕ್ತಿಗಳ ಮತವನ್ನು ಚುನಾವಣಾ ಫಲಿತಾಂಶದ ಮತ ಎಣಿಕೆಯಲ್ಲಿ ಪರಿಗಣಿಸಬಾರದು ಎಂದು ಕರ್ನಾಟಕ ಉಚ್ಚ ನ್ಯಾಯಲಯವು ಐತಿಹಾಸಿಕ ತೀರ್ಪನ್ನು ಹೊರಡಿಸಿದೆ.


ಮಡಂತ್ಯಾರ್ ಪ್ರಾಥಮಿಕ ಸಹಕಾರಿ ಕೃಷಿ ಪತ್ತಿನ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಅನರ್ಹ ಮತದಾರರನ್ನು ಬಳಸಿ, ಉಚ್ಚ ನ್ಯಾಯಲಯದಲ್ಲಿ ಸುಳ್ಳು ದಾಖಲೆಗಳನ್ನು ಮತ್ತು ಮಾಹಿತಿಗಳನ್ನು ನೀಡಿ ಅನರ್ಹ ಮತದಾರರಿಗೆ ಮತದಾನದ ಹಕ್ಕನ್ನು ಪಡೆದು ಮತ ಚಲಾಯಿಸಿರುತ್ತಾರೆ.
ಈ ಮಧ್ಯಂತರ ಆದೇಶದ ವಿರುದ್ಧ ಬಿ.ಜೆ.ಪಿ ಬೆಂಬಲಿತ ನಿರ್ದೇಶಕರು ಈ ರಿಟ್ ಅರ್ಜಿಯನ್ನು ಸಲ್ಲಿಸಿದ್ದು, ಇದಕ್ಕೆ ಪೂರಕವಾದ ಎಲ್ಲಾ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿ ಯಾವುದೇ ಕಾರಣಕ್ಕೂ ಅನರ್ಹ ಮತದಾರರಿಗೆ ನೀಡಿರುವ ಮತವನ್ನು ಚುನಾವಣಾ ಫಲಿತಾಂಶದಲ್ಲಿ ಪರಿಗಣಿಸಬಾರದು ಎಂದು ಪ್ರಬಲ ವಾದ ಮಂಡಿಸಲಾಗಿತ್ತು.
ಎರಡೂ ಅರ್ಜಿದಾರರ ವಾದ ,ವಿವಾದವನ್ನು
ಅಲಿಸಿದ ಉಚ್ಚ ನ್ಯಾಯಲಯವು ಕಾಂಗ್ರೆಸ್ ಬೆಂಬಲಿತರ ಪರ ವಾದವನ್ನು ತಳ್ಳಿ ಹಾಕಿ ಇತಿಹಾಸದಲ್ಲಿಯೇ ಮೊದಲ ಬಾರಿಗೆಂಬಂತೆ ಮತದಾನದ ಹಕ್ಕನ್ನು ಪಡೆದಿರುವ ವ್ಯಕ್ತಿಗಳ ಮತವನ್ನು ಚುನಾವಣಾ ಫಲಿತಾಂಶದ ಎಣಿಕೆಯ ಸಂದರ್ಭದಲ್ಲಿ ಪರಿಗಣಿಸಬಾರದು ಎಂದು ಐತಿಹಾಸಿಕ ತೀರ್ಪನ್ನು ನೀಡಿರುತ್ತದೆ.
ಉಚ್ಚ ನ್ಯಾಯಾಲಯದ ಈ ಆದೇಶ ಎಲ್ಲಾ ಅನರ್ಹ ಮತದಾರರಿಗೆ ಎಚ್ಚರಿಕೆಯ ಗಂಟೆಯಾಗಿದೆ ಎಂದೇ ಪರಿಗಣಿಸಲಾಗಿದ್ದು, ಯಾವುದೇ ಅರ್ಹತೆ ಇಲ್ಲದೆ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮತ್ತು ಚುನಾವಣೆಯಲ್ಲಿ ಪೌತಿತ್ವತೆಯನ್ನು ಹಾಳು ಮಾಡುವ ಉದ್ದೇಶದಿಂದ ಕಾನೂನು ಬಾಹಿರವಾಗಿ ಮತದಾನದ ಹಕ್ಕು ತಡೆದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ತೀವ್ರ ಮುಖಭಂಗವಾಗಿರುತ್ತದೆ ಎಂದು ಬಿಜೆಪಿ ಬೆಂಬಲಿತರು ಅಭಿಪ್ರಾಯ ಪಟ್ಟಿದ್ದಾರೆ.
ಬಿ.ಜೆ.ಪಿ ಬೆಂಬಲಿತರ ಪರವಾಗಿ ಉಚ್ಚ ನ್ಯಾಯಾಲಯದಲ್ಲಿ ವಕೀಲರಾದ ದೇವಿ ಪ್ರಸಾದ್ ಶೆಟ್ಟಿ ವಾದಿಸಿದ್ದರು.












