Tuesday, January 27, 2026

ಮಾದಕದ್ರವ್ಯ ವ್ಯಸನದಿಂದ ಬದುಕು ಸರ್ವನಾಶ ಎಂದು ಬಿಂಬಿಸುವ ವಿಡಿಯೋ ತುಣುಕು ವೈರಲ್

ಬಂಟ್ವಾಳ: ಮಾದಕ ದ್ರವ್ಯ ವಿರೋಧಿ ದಿನಾಚರಣೆ ಅಂಗವಾಗಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಹೃಷಿಕೇಶ್ ಸೋನಾವಣೆ ನೇತ್ರತ್ವದಲ್ಲಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ತುಣುಕು ಮೂಲಕ ಜಾಗೃತಿ ಮೂಡಿಸುವ ಕಾರ್ಯ ಸಖತ್ ವೈರಲ್ ಆಗಿದೆ.

ಜಿಲ್ಲಾ ಪೋಲೀಸ್ ಇಲಾಖೆಯ ವಿಶೇಷ ಪ್ರಯತ್ನದ ಮೂಲಕ ಸಾರ್ವಜನಿಕರಿಗೆ ಜಾಗೃತಿಯನ್ನು ಮೂಡಿಸಲು ಸಣ್ಣ ಪ್ರಯತ್ನ ಹೆಚ್ಚು ಪರಿಣಾಮ ಕಾರಿಯಾಗಿದೆ.

ಕೊರೊನಾ ಲಾಕ್ ಡೌನ್ ನ‌ ಸಂಕಷ್ಟದ ಸಮಯದಲ್ಲಿ ಮಾದಕದ್ರವ್ಯ ದ ಬಗ್ಗೆ ಉಂಟಾಗುವ ದುಷ್ಪರಿಣಾಮಗಳ ವಿಚಾರಕ್ಕೆ ಸಂಬಂಧಿಸಿದಂತೆ ಕಾರ್ಯಕ್ರಮ ಮಾಡಿ ಜಾಗೃತಿ ಮೂಡಿಸಲು ಸಾಧ್ಯವಾಗದ ಸಂದರ್ಭದಲ್ಲಿ ಎಸ್. ಪಿ.ಹೃಷಿಕೇಶ್ ಸೋನಾವಣೆ ನೇತ್ರತ್ವದ ತಂಡ ಈ ಪ್ರಯತ್ನ ದ ಮೂಲಕ ಯಶಸ್ವಿಯಾಗಿದೆ.

*ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಹೃಷಿಕೇಶ್ ಸೋನಾವಣೆ*

ಕೊರೊನಾ ಲಾಕ್ ಡೌನ್ ನ ಹಿನ್ನೆಲೆಯಲ್ಲಿ ಶಾಲಾ ಕಾಲೇಜು ಗಳು ಬಂದ್ ಆಗಿವೆ , ಜೊತೆಗೆ ಸಾರ್ವಜನಿಕ ರು ಕೂಡ ಸಭೆ ಸೇರುವಂತಿಲ್ಲ , ಈ ಹಿನ್ನೆಲೆಯಲ್ಲಿ ಮಾದಕ ವಿರೋಧಿ ದಿನಾಚರಣೆ ಯನ್ನು ವಿಡಿಯೋ ತುಣುಕು ಮೂಲಕ ಜಾಗೃತಿ ಮೂಡಿಸುವ ಸಲುವಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡಲಾಗಿದೆ.

ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಮುಂದಿನ ದಿನಗಳಲ್ಲಿ ಪ್ರತಿಯೊಂದು ಶಾಲಾ ಕಾಲೇಜುಗಳಲ್ಲಿ ಮಾದಕದ್ರವ್ಯ ದ ಕಾರ್ಯಕ್ರಮ ದ ಮೂಲಕವೂ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತದೆ.

ಆದರೆ ಪ್ರತಿಯೊಬ್ಬರಿಗೂ ಮಾದಕ ದ್ರವ್ಯ ಸೇವನೆಯಿಂದ ಆಗುವ ಪರಿಣಾಮಗಳ ಅರಿವಿರಬೇಕು, ಪೋಷಕರ ಹಾಗೂ ಜವಬ್ದಾರಿ ಯುತ ಪ್ರಜ್ಞಾವಂತ ನಾಗರೀಕರ ಸಹಕಾರ ಅತೀ ಅಗತ್ಯವಾಗಿ ಬೇಕಾಗಿದೆ, ಇಂತಹ ಮಾರಕ ವ್ಯಸನಗಳ ಬಗ್ಗೆ ಒಟ್ಟಾಗಿ ಸೇರಿ ವಿರೋಧಿಸುವ ಕೆಲಸ ಆಗಬೇಕು.

ಬಂಟ್ವಾಳ ಡಿ.ವೈ.ಎಸ್.ಪಿ.ವೆಲೆಂಟೈನ್ ಡಿ.ಸೋಜ ನೇತ್ರತ್ವದಲ್ಲಿ ಬಂಟ್ಚಾಳ ಪೋಲೀಸರ ತಂಡವೂ ಇಂತಹ ದೇ ಪ್ರಯತ್ನವನ್ನು ಮಾಡಿದೆ.

ಮಾದಕ ದ್ರವ್ಯ ಸೇವನೆಯ ನ್ನು ಮಾಡಿದರೆ ಏನೆಲ್ಲಾ ದುಷ್ಪರಿಣಾಮಗಳು ಆಗುತ್ತದೆ ಎಂಬುದರ ಬಗ್ಗೆ ಮಾಹಿತಿಯನ್ನು ಈ ವಿಡಿಯೋ ಮೂಲಕ ಜನತೆಗೆ ನೀಡಲಾಗಿದೆ.

ಬಣ್ಣದ ಬದುಕಿಗೆ ಮಾರುಹೋಗಿ ಮಾದಕ ದ್ರವ್ಯ ವ್ಯಸನಿಗಳಾದ ನವಸಮಾಜ ಯುವಕಯುವತಿಯರ ಬಾಳು ನರಕವಾದ ಬಗ್ಗೆ ತಿಳಿಸಿದ ಇಲಖೆ ಯಾವ ರೀತಿಯಲ್ಲಿ ಪ್ರಜ್ಞಾವಂತ ಸಮಾಜ ಎಚ್ಚೆತ್ತುಕೊಂಡು ವ್ಯಸನಗಳಿಂದ ದೂರಮಾಡಬೇಕು ಎಂಬುದರ ಬಗ್ಗೆ ನೀಡಿದ್ದಾರೆ.

ಜೊತೆಗೆ ಮಾದಕ ದ್ರವ್ಯ ಗಳ ಮಾರಾಟ ಸಾಗಾಟದ ಬಗ್ಗೆ ಯೂ ಪೋಲೀಸರಿಗೆ ಮಾಹಿತಿ ನೀಡಿ , ನಿಮ್ಮ ಮಾಹಿತಿ ಯನ್ನು ಗೌಪ್ಯವಾಗಿ ಇಡುವ ಭರವಸೆ ನೀಡಿದ್ದಾರೆ.

 *ಡಿ.ವೈ.ಎಸ್.ಪಿ.ವೆಲೆಂಟೈನ್ ಡಿ.ಸೋಜ* 

ಮಾದಕ ದ್ರವ್ಯ ಜೊತೆ ಶಾಂತಿಯುತ ಸ್ವಚ್ಛ ಹಾಗೂ ಸುಂದರ ಸಮಾಜ ನಿರ್ಮಾಣ ಕ್ಕೆ ಬಂಟ್ವಾಳದ ವಿದ್ಯಾವಂತ ನಾಗರೀಕರ ಸಹಕಾರ ನಿರಂತರವಾಗಿ ಪೋಲೀಸ್ ಇಲಾಖೆ ಬೇಕಾಗಿದೆ

More from the blog

ಒಡಿಯೂರಿನಲ್ಲಿ ವಂದೇ ಮಾತರಂ ತುಳು ಸಾಹಿತ್ಯ ಸಮ್ಮೇಳನ ಉದ್ಘಾಟನೆ

ವಿಟ್ಲ: ಭಾರತ ವಿಶ್ವದ ಉಸಿರಾಗಿದ್ದು, ಯಾವ ಸೆಳೆತಕ್ಕೂ ಒಳಗಾಗಿಲ್ಲ. ವಂದೇ ಮಾತರಂ ಗೀತೆಗೆ ರಾಷ್ಟ್ರಭಕ್ತಿ ಉದ್ದೀಪಿಸುವ ಶಕ್ತಿಯಿದೆ. ಭಾಷೆ ಸಂಸ್ಕೃತಿ ಬಹಳ ದೊಡ್ಡದಾಗಿದ್ದು, ಇದರ ಉಳಿವಿಗೆ ಒಗ್ಗಟ್ಟಾಗುವ ಅಗತ್ಯವಿದೆ. ವಿಶ್ವ ವಿದ್ಯಾಲಯಗಳಲ್ಲಿ ತುಳು...

ವಿದ್ಯಾರ್ಜನೆ ಪಡೆದ ಸಂಸ್ಥೆಗೆ ನೀಡುವ ಸಹಾಯಸ್ತ ದೇವತಾ ಕಾರ್ಯಕ್ಕೆ ಸಮಾನ : ಪ್ರಭಾಕರ ಪ್ರಭು

ಬಂಟ್ವಾಳ : ಬಾಲ್ಯದಲ್ಲಿ ಬಾಹ್ಯ ಪ್ರಪಂಚದಲ್ಲಿನ ಆಗುಹೋಗುಗಳ ಬಗ್ಗೆ ಪರಿಚಯಿಸಿ ಪ್ರಾಥಮಿಕ ಶಾಲಾ ಪೂರ್ವ ಶಿಕ್ಷನವನ್ನು ನೀಡುತ್ತಿರುವ ಅಂಗನವಾಡಿಗಳ ಮೂಲಭೂತ ಸೌಕರ್ಯಗಳಿಗೆ ನೀಡುವ ಸಹಾಯಸ್ತಾವು ದೇವತಾ ಕಾರ್ಯಕ್ಕೆ ಸಮಾನವಾಗಿರುತ್ತದೆ ಎಂದೂ ಸಿದ್ದಕಟ್ಟೆ ಪ್ರಾಥಮಿಕ...

ಮಣಿಹಳ್ಳ : ಹಿಂದೂ ಯುವಸೇನೆ ಏಕಲವ್ಯ ಶಾಖೆ ಆಶ್ರಯದಲ್ಲಿ ಎಳ್ಳು ಗಂಟು ದೀಪೋತ್ಸವ..

ಬಂಟ್ವಾಳ : ಹಿಂದೂ ಯುವಸೇನೆ ಏಕಲವ್ಯ ಶಾಖೆ ಮಣಿಹಳ್ಳ ಇದರ ಆಶ್ರಯದಲ್ಲಿ ವಿಶ್ವ ಶಾಂತಿಗಾಗಿ, ಲೋಕ ಕಲ್ಯಾಣಾರ್ಥವಾಗಿ, ಶನಿದೋಷ ಪರಿಹಾರಕ್ಕಾಗಿ ಸಕಲ ಇಷ್ಟಾರ್ಥ ಸಿದ್ಧಿಗಾಗಿ ಜ. 24ರಂದು ಶನಿವಾರ ನಡೆದ ಸತತ 14...

ಜಿಲ್ಲೆಯಲ್ಲಿ ಹೆಚ್ಚಿದ ಚಿರತೆ ಉಪಟಳ : ದಾಳಿಗೆ ನಾಯಿ, ಕಾಡುಹಂದಿ ಬಲಿ

ಬಂಟ್ವಾಳ : ಚಿರತೆಯೊಂದು ನಾಯಿಯನ್ನು ಕೊಂದು ಕುತ್ತಿಗೆಯ ಭಾಗದಿಂದ ಮಾಂಸವನ್ನು ತಿಂದು ಹೋದ ಘಟನೆ ಬೆಳ್ತಂಗಡಿ ತಾಲೂಕಿನ ಮಾಲಾಡಿಯ ಗ್ರಾಮದ ಪುರಿ ಎಂಬಲ್ಲಿ ನಡೆದಿದೆ. ಆನಂದ ನಾಯರ್ ಎಂಬವರ ಮನೆಯಲ್ಲಿ ಸಾಕಿದ ಕಪ್ಪು ಬಣ್ಣದ...