ಬಂಟ್ವಾಳ: ಬಂಟ್ವಾಳ ತಾಲೂಕು ಮಾಣಿ ಗ್ರಾಮದ ಶಂಭುಗ-ಬಾಲಮಂಟಮೆಯಲ್ಲಿ ಅರಸು ಶ್ರೀ ಗುಡ್ಡೆಚಾಮುಂಡಿ, ಪ್ರಧಾನಿ ಶ್ರೀ ಪಂಜುರ್ಲಿ, ಬಂಟೆದಿ ಶ್ರೀ ಮಲೆಕೊರತಿ ದೈವಗಳ ಕಾಲಾವಧಿ ನೇಮ ಜಾತ್ರೆಯು ಡಿ.26ರಂದು ಬುಧವಾರ ನಡೆಯಲಿದೆ. ಆ ಪ್ರಯುಕ್ತ ಡಿ.19ರಂದು ಬೆಳಿಗ್ಗೆ 11 ಗಂಟೆಗೆ ಗಣಹೋಮ ಮತ್ತು ಗೊನೆ ಕಡಿಯಲಾಗುವುದು.
ಡಿ.26ರಂದು ಬೆಳಿಗ್ಗೆ 10ಗಂಟೆಗೆ ಮಾಣಿಗುತ್ತುವಿನಿಂದ ಶ್ರೀ ದೈವದ ಭಂಡಾರ ಹೊರಟು 11ಕ್ಕೆ ಶಂಭುಗ ಸ್ಥಾನಕ್ಕೆ ಆಗಮನ. ಮಧ್ಯಾಹ್ನ 12.30ಕ್ಕೆ ಪ್ರತಿಷ್ಠಾ ದಿನಾಚರಣೆಯ ಪ್ರಯುಕ್ತ ತಂಬಿಲ ಸೇವೆ, ಮಧ್ಯಾಹ್ನ 1 ಗಂಟೆಗೆ ಅನ್ನಸಂತರ್ಪನೆ ಸಂಜೆ 6 ಗಂಟೆಗೆ ಅರಸು ಶ್ರೀ ಗುಡ್ಡೆಚಾಮುಂಡಿ ದೈವದ ನೇಮ,ರಾತ್ರಿ 10 ಗಂಟೆಗೆ ಪ್ರಧಾನಿ ಶ್ರೀ ಪಂಜುರ್ಲಿ ದೈವದ ನೇಮ, 11ಕ್ಕೆ ಬಂಟೆದಿ ಶ್ರೀ ಮಲೆಕೊರತಿ ದೈವದ ನೇಮ,ರಾತ್ರಿ 12 ಗಂಟೆಗೆ ಭಂಡಾರ ಇಳಿಕೆ ಮಾಡಲಾಗುತ್ತದೆ ಎಂದು ದೈವಸ್ಥಾನದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

