ಬಂಟ್ವಾಳ: ಬಂಟ್ವಾಳ ತಾಲೂಕಿನ ಮಾಣಿಯಲ್ಲಿ ವಿದ್ಯುತ್ ಪವರ್ ಕಟ್, ವಯರ್ ಕಟ್ ಆದ್ರೆ ವಿದ್ಯುತ್ ಪೂರೈಕೆ ಜೊತೆಯಲ್ಲಿ ಬಿ.ಎಸ್.ಎನ್.ಎಲ್ ಮೊಬೈಲ್ ನೆಟ್ವರ್ಕ್ ಕೂಡ ಇರುವುದಿಲ್ಲ. ಇದಕ್ಕೆ ದೂರವಾಣಿ ಕೇಂದ್ರದ ಜನರೇಟರ್ ವ್ಯವಸ್ತೆ ಸರಿ ಇಲ್ಲ, ಉದ್ಯಮದ ನಷ್ಟ,ಖಾಸಗಿ ರಂಗದ ಸ್ಪರ್ದೆ ,ಸಿಬ್ಬಂದಿ ಕೊರತೆ ನಾನಾ ಕಾರಣ ಇರಬಹುದು. ಇದರಿಂದ ಗ್ರಾಹಕರಿಗೆ ತುಂಬಾ ತೊಂದರೆ ಆಗಿದೆ. ಇದರಿಂದ ಬೇಸತ್ತ ಕೆಲವು ಹಾಲಿ ಬಿ.ಎಸ್.ಎನ್.ಎಲ್ ಗ್ರಾಹಕರು ಇನ್ನಿತರ ಮೊಬೈಲ್ ನೆಟ್ವರ್ಕ್ ಕಂಪೆನಿಗಳಾದ ಐಡಿಯಾ, ಜಿಯೋ, ಏರ್ಟೆಲ್ ನತ್ತ ತಮ್ಮ ಬಿ.ಎಸ್.ಎನ್.ಎಲ್ ನಂಬರನ್ನು ಪೋರ್ಟೆಬಿಲಿಟಿ ಮಾಡುವತ್ತ ಮನಸ್ಸು ಮಾಡುತ್ತಿದ್ದಾರೆ. ಇನ್ನಾದರೂ ಬಿ.ಎಸ್.ಎನ್.ಎಲ್ ಈ ಸಮಸ್ಯೆ ಪರಿಹರಿಸದಿದ್ದರೆ ತನ್ನ ಕೆಟ್ಟ ಸೇವೆಯಿಂದ ಗ್ರಾಹಕರನ್ನು ಕಳೆದುಕೊಳ್ಳುವ ಸನ್ನಿವೇಶ ಮುಂದಿನ ದಿನಗಳಲ್ಲಿ ದಟ್ಟವಾಗಿದೆ. ಇನ್ನಾದರು ಸಂಬಂಧ ಪಟ್ಟವರು ಎಚ್ಚೆತ್ತುಕೊಳ್ಳಲಿ ಎಂದು ಆಶಿಸೋಣ.
