ಬಂಟ್ವಾಳ: ಮಾಣಿ ಕುಲಾಲ ಸೇವಾ ಸಂಘ( ರಿ.)ಮಾಣಿ ಮಹಿಳಾ ಘಟಕಗ ಇದರ 2019-20 ನೇ ಸಾಲಿನ ನೂತನ ಅಧ್ಯಕ್ಷ ರಾಗಿ ರಾಜೀವಿಚಂದ್ರಶೇಖರ್ ಮಾಣಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.


ಗೌರವಾದ್ಯಕ್ಷರಾಗಿ ಸುಶೀಲಾಅನಂದ ಮಾಣಿ, ಉಪಾಧ್ಯಕ್ಷ ರಾಗಿ ಸರಸ್ವತಿ ಕೆದಿಲ, ಕಾರ್ಯದರ್ಶಿ ಯಾಗಿ ಸೌಭಾಗ್ಯನಾರಾಯಣ ಬಾಳ್ತಿಲ, ಜತೆ ಕಾರ್ಯದರ್ಶಿ ಯಾಗಿ ಆಶಾಲತಾದಿನೇಶ್ ಕುಲಾಲ್ ಶಂಭುಗ, ಕೋಶಾಧಿಕಾರಿ ಯಾಗಿ ಶೋಭಾಕೃಷ್ಣಪ್ಪ ಕುಲಾಲ್ ಕಲ್ಲಕರ್ಪೆ, ಸಂಘಟನಾ ಕಾರ್ಯದರ್ಶಿ ಹರಿಣಾಕ್ಷಿ ವಾಮನ ಕುಲಾಲ್ ನೇರಳಕಟ್ಟೆ, ಜತೆ ಸಂಘಟನಾ ಕಾರ್ಯದರ್ಶಿಯಾಗಿ ಉಷಾನಾಗೇಶ್ ಬರಿಮಾರ್, ಸಲಹೆಗಾರರಾಗಿ ಚಂದ್ರಾವತಿಸದಾಶಿವ ಕುಲಾಲ್ ಮಾಣಿ ಹಾಗೂ ಜತೆ ಸಲಹೆಗಾರರಾಗಿ ರಂಜಿತಮೋಹನ್ ಕುಲಾಲ್ ಕಜೆ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.