ಮಾಣಿ ಪೆರಾಜೆ ಶ್ರೀರಾಮಚಂದ್ರಾಪುರ ಮಠದ ಶಿಲಾಮಯ ಗರ್ಭಗುಡಿಯಲ್ಲಿ ಶ್ರೀರಾಮ ದೇವರ ಪ್ರತಿಷ್ಠೆ, ಬ್ರಹ್ಮಕಲಶ ಸಮಾರಂಭದ ಹತ್ತಾರು ದಿನಗಳಲ್ಲಿ ವಿವಿಧ ರೀತಿಯಲ್ಲಿ ಸಹಕರಿಸಿದ ಕಾರ್ಯಕರ್ತರ ಸಮಾವೇಶ ರವಿವಾರ ಏರ್ಪಡಿಸಲಾಗಿತ್ತು.


ಕ್ರಿಯಾ ಸಮಿತಿ ಅಧ್ಯಕ್ಷ ಹಾರಕರೆ ನಾರಾಯಣ ಭಟ್ ಅಧ್ಯಕ್ಷತೆ ವಹಿಸಿ, ಮಾತನಾಡಿ, ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಆಶೀರ್ವಾದಗಳಿಂದ ಸ್ಥಾಪಿಸಲ್ಪಟ್ಟ ಸಮರ್ಥ ಸಂಘಟನೆಗಳ ಮೂಲಕ ಕಾರ್ಯಕರ್ತರ ಸೇವೆ ಅನನ್ಯವಾಗಿತ್ತು. ದೋಷರಹಿತವಾಗಿ ಕಾರ್ಯಕ್ರಮ ಸಂಪನ್ನಗೊಳ್ಳಲು ಕಾರ್ಯಕರ್ತರ ತನುಮನಧನಗಳ ಸೇವೆ ಕಾರಣ. ಅವರೆಲ್ಲರಿಗೂ ಅಭಿನಂದನೆಗಳು ಎಂದು ಹೇಳಿದರು.
ಸಮಿತಿ ಕಾರ್ಯದರ್ಶಿ ಬಂಗಾರಡ್ಕ ಜನಾರ್ದನ ಭಟ್ ಅವರು ಶಿಲಾಮಯ ಗರ್ಭಗುಡಿ ನಿರ್ಮಾಣ ಮತ್ತು ಬ್ರಹ್ಮಕಲಶ ಸಮಾರಂಭದ ಲೆಕ್ಕಪತ್ರ ಮಂಡಿಸಿದರು.
ಇದೇ ಸಂದರ್ಭದಲ್ಲಿ ಶ್ರೀರಾಮದೇವರಿಗೆ ಚಿನ್ನದ ಕವಚ ಸಮರ್ಪಿಸಿದ ಚಂದ್ರಶೇಖರ ಭಟ್ ಮುರ್ಗಜೆ, ದಾನಿಗಳಾದ ಪಾದೆಕಲ್ಲು ವಿಷ್ಣು ಭಟ್, ರಮೇಶ್ ಭಟ್ ಸರವು ದಂಪತಿ, ಉದಯಶಂಕರ ಭಟ್ ಮಿತ್ತೂರು ಅವರನ್ನು ಗೌರವಿಸಲಾಯಿತು.
ಕ್ರಿಯಾ ಸಮಿತಿ ಅಧ್ಯಕ್ಷ ಹಾರಕರೆ ನಾರಾಯಣ ಭಟ್, ಕಾರ್ಯದರ್ಶಿ ಬಂಗಾರಡ್ಕ ಜನಾರ್ದನ ಭಟ್, ವ್ಯವಸ್ಥಾಪಕ ಶಿವಪ್ರಸಾದ್ ಭಟ್, ಪ್ರಸನ್ನ ಭಟ್, ಸುಬ್ರಹ್ಮಣ್ಯ ಭಟ್ ಅವರನ್ನು ಗೌರವಿಸಲಾಯಿತು.
ವೇಣು ಕೆದ್ಲ, ಮೈಕೆ ಗಣೇಶ್ ಭಟ್, ಮುರಳಿಕೃಷ್ಣ ಕುಕ್ಕಿಲ, ಯು.ಎಸ್.ವಿಶ್ವೇಶ್ವರ ಭಟ್ ಮತ್ತಿತರರು ಉಪಸ್ಥಿತರಿದ್ದರು.












