ಬಂಟ್ವಾಳ: ಕುಲಾಲ ಸಂಘ (ರಿ.)ಮಾಣಿ ಇದರ ವಾರ್ಷಿಕ ಕ್ರೀಡಾ ಕೂಟ ಡಿ.8. ರಂದು ಆದಿತ್ಯ ವಾರ ಮಾಣಿ ಗಾಂಧಿ ಮೈದಾನದಲ್ಲಿ ನಡೆಯಲಿದೆ.
ಪುರುಷರಿಗೆ, ಮಹಿಳೆಯರಿಗೆ ಹಾಗೂ ಮಕ್ಕಳಿಗೆ ಹೀಗೆ ಮೂರು ವಿಭಾಗದಲ್ಲಿ ವಿವಿಧ ಕ್ರೀಡೆ ಗಳನ್ನು ಆಯೋಜಿಸಲಾಗಿದ್ದು, ಮಾಣಿ ಕುಲಾಲ ಸಂಘದ ವ್ಯಾಪ್ತಿಯ ಕುಲಾಲ ಸಮುದಾಯದವರು ಭಾಗವಹಿಸುವಂತೆ ಸಂಘದ ಅಧ್ಯಕ್ಷ ಬೋಜನಾರಾಯಣ ಪ್ರಕಟನೆಯಲ್ಲಿ ವಿನಂತಿ ಮಾಡಿದ್ದಾರೆ.














