ಮಂಗಳೂರು: ತೌಕ್ತೆ ಚಂಡಮಾರತ ಕರ್ನಾಟಕ – ಕೇರಳ ಕರಾವಳಿಯಲ್ಲಿ ಭಾರೀ ಅಬ್ಬರವನ್ನು ಮೆರೆದಿದ್ದು ಮಂಗಳೂರಿನ ಎಂ.ಆರ್.ಪಿ.ಎಲ್.ಗೆ ಸೇರಿದ ಬೋಟ್ ಮುಳುಗಡೆಯಾಗಿ 3 ಮಂದಿ ಸಾವನ್ನಪ್ಪಿದ್ದು 9 ಮಂದಿ ಅಲೆಯಲ್ಲಿ ಸಿಲುಕಿ ನಾಪತ್ತೆಯಾಗಿದ್ದಾರೆ.

ಸುರತ್ಕಲ್ ನ 17 ನಾಟಿಕಲ್ ಮೈಲು ದೂರದಲ್ಲಿ ಬೋಟ್ ಮುಳುಗಡೆಯಾಗಿದೆ. ರಾತ್ರಿ ಪೂರ್ತಿ ಸಮುದ್ರದಲ್ಲಿರುವ ನೌಕರರನ್ನು ರಕ್ಷಿಸಲು ಪ್ರಯತ್ನಿಸಲಾಗಿದೆ. ಆ ಬಳಿಕ ಅಲೆಗಳ ಅಬ್ಬರ ಜೋರಾಗಿದ್ದ ಕಾರಣ ರಕ್ಷಣಾ ಕಾರ್ಯಾಚರಣೆ ನಿಲ್ಲಿಸಿ ಇಂದು ಮತ್ತೆ ಪ್ರಾರಂಭವಾಗಿದೆ.
ನೌಕರರನ್ನು ಗಾಳಿ, ಅಲೆಗಳ ಅಬ್ಬರ ಕಡಿಮೆಯಾದ ಬಳಿಕ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ.
